ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದಾಗಿನಿಂದ ಅವರ ಸಿನಿಮಾ ನಿರ್ಮಾಣ ಮಾಡುತ್ತಿರುವ ನಿರ್ಮಾಪಕರು ಚಿಂತೆಯಲ್ಲಿದ್ದಾರೆ. ಕೆಲವು ಸಿನಿಮಾ ಅರ್ಧದಲ್ಲಿ ನಿಂತಿದ್ದರೆ ಇನ್ನೊಂದಷ್ಟು ನಿರ್ಮಾಪಕರು ನಟನಿಗೆ ಅಡ್ವಾನ್ಸ್ ಪೇ ಮಾಡಿದ್ದಾರೆ. ಇದೀಗ ಈ ಬಗ್ಗೆ ಚಂದನವನದ ಖ್ಯಾತ ನಿರ್ಮಾಪಕ ಕೆ.ಮಂಜು ಸುದ್ದಿಗೋಷ್ಠಿ ನಡೆಸಿ ದರ್ಶನ್ ಪರ ಬ್ಯಾಟ್ ಬೀಸಿದ್ದಾರೆ. ನಾನು ದರ್ಶನ್ಗೆ ಲಂಕೇಶ್ ಪತ್ರಿಕೆ ನಿರ್ಮಿಸಿದ್ದೆ. ಅವತ್ತಿನ ದರ್ಶನ್ ಹೇಗೆ ಇದ್ದರೂ ಈಗಲೂ ಹಾಗೆಯೇ ಇದ್ದಾರೆ. ತುಂಬಾ ಬಡತನದಿಂದ ಬಂದ ಹುಡುಗ ದರ್ಶನ್ ಕೆಟ್ಟವರಲ್ಲ. ನನ್ನಿಂದ ಒಳ್ಳೆಯದು ಆಗುತ್ತದೆ ಎಂದರೆ ಬನ್ನಿ ಸಿನಿಮಾ ಮಾಡೋಣಾ ಎನ್ನುತ್ತಾರೆ. ನಮ್ಮ ನಿರ್ಮಾಪಕರಿಗೆ ಹೆಚ್ಚು ಆದ್ಯತೆ ಕೊಡುತ್ತಾರೆ ಎಂದಿದ್ದಾರೆ.
ದರ್ಶನ್ ಪ್ರಿನ್ಸಿಪಲ್ ಕರೆಕ್ಟ್ ಇದೆ. ಡೆವಿಲ್ ಬಹು ನಿರೀಕ್ಷಿತ ಸಿನಿಮಾ ಈ ರೀತಿ ಘಟನೆ ನಡೆಯಬಾರದಿತ್ತು. ನಾನು ಇತ್ತೀಚೆಗೆ ಭೇಟಿಯಾಗಿ ದರ್ಶನ್ಗೆ ಅಡ್ವಾನ್ಸ್ ಕೊಟ್ಟಿದ್ದೇನೆ. ದರ್ಶನ್ ಅವರು ಜೈಲಿನಿಂದ ಬಂದರೇ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸುತ್ತಾರೆ ಎಂದು ಕೆ.ಮಂಜು ಮಾತನಾಡಿದ್ದಾರೆ. ರೇಣುಕಾಸ್ವಾಮಿ ಕೇಸ್ ಬಗ್ಗೆ ನ್ಯಾಯಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ. ಒಂದು ವೇಳೆ ದರ್ಶನ್ ಈ ಪ್ರಕರಣದಲ್ಲಿ ಅಪರಾಧಿ ಆದರೆ ಯಾವ ನಿರ್ಮಾಪಕರು ಹಣ ಪಡೆದಿದ್ದಾರೋ ಅವರಿಗೆ ಖಂಡಿತ ವಾಪಸ್ ಕೊಡ್ತಾರೆ ಅನ್ನೋ ನಂಬಿಕೆ ಇದೆ. ಚಿತ್ರರಂಗ ಅಂದರೆ ಅವರಿಗೆ ಒಳ್ಳೆ ಗೌರವ ಎಂದು ಕೆ.ಮಂಜು ಪ್ರತಿಕ್ರಿಯಿಸಿದ್ದಾರೆ.