ತೆಲುಗು ನಟ ನಾನಿ ಸದ್ಯ ‘ಸೂರ್ಯನ ಸಾಟರ್ಡೆ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಕಲ್ಕಿ ಸೀಕ್ವೆಲ್ನಲ್ಲಿ ನಾನಿ ನಟಿಸುತ್ತಾರೆ ಎಂದು ಹಬ್ಬಿದ ಸುದ್ದಿಗೆ ನಾನಿ ಕ್ಲ್ಯಾರಿಟಿ ನೀಡಿದ್ದಾರೆ. ‘ಕಲ್ಕಿ 2’ನಲ್ಲಿ ನಾನು ನಟಿಸುತ್ತಿಲ್ಲ ಎಂದು ನಾನಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ನಾನಿ ಮಾತನಾಡಿ, ನಾನು ‘ಕಲ್ಕಿ 2’ ಸಿನಿಮಾದಲ್ಲಿ ನಟಿಸುತ್ತಿಲ್ಲ. ಚಿತ್ರತಂಡ ನನಗೆ ಅಪ್ರೋಚ್ ಕೂಡ ಮಾಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ. ಇದೆಲ್ಲಾ ಹೇಗೆ ವೈರಲ್ ಆಯ್ತು ಎಂಬುದು ನನಗೆ ತಿಳಿಯುತ್ತಿಲ್ಲ. ನಿಜಕ್ಕೂ ಈ ಸುದ್ದಿ ಕೇಳಿ ನಾನು ಶಾಕ್ ಆದೆ ಎಂದು ಮಾತನಾಡಿದ್ದಾರೆ.