- ನನ್ನ ಕೆಲಸ ಏನಿದ್ರೂ ಎರಡನೇ ಭಾಗದಲ್ಲಿ ಮಾತ್ರ
- ಕಲ್ಕಿ ಪಾರ್ಟ್ 2 ಸೀಕ್ರೆಟ್ ರಿವೀಲ್ ಮಾಡಿದ ಕಮಲ್ ಹಾಸನ್
ಪ್ರಭಾಸ್ ಅಭಿನಯದ ಕಲ್ಕಿ 2898 AD ಸಿನಿಮಾ ಭರ್ಜರಿ ಓಪನಿಂಗ್ ಪಡೆದಿದೆ. ಮೊದಲ ಸಿನಿಮಾ ನೋಡಿ ಥಿಯೇಟರ್ ನಿಂದ ಹೊರಬಂದ ಜನರು ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರೋದು ಪಕ್ಕಾ ಎನ್ನುತ್ತಿದ್ದಾರೆ. ಕಲ್ಕಿ ಸಿನಿಮಾದಲ್ಲಿ ಖಳ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಮಲ್ ಹಾಸನ್ ಚೆನ್ನೈನಲ್ಲಿ ಸಿನಿಮಾ ವೀಕ್ಷಣೆ ಮಾಡಿದ ಬಳಿಕ ಕಲ್ಕಿ ಪಾರ್ಟ್ 2 ಕುರಿತು ಸೀಕ್ರೆಟ್ ರಿವೀಲ್ ಮಾಡಿದ್ದಾರೆ.
ಕಲ್ಕಿ ಸಿನಿಮಾದ ವಿಶೇಷ ಪ್ರದರ್ಶನವನ್ನು ಚೆನ್ನೈನ ಚಿತ್ರಮಂದಿರವೊಂದರಲ್ಲಿ ವೀಕ್ಷಿಸಿದ ಬಳಿಕ ಮಾತಾಡಿದ ಕಮಲ್ ಹಾಸನ್ ಕಲ್ಕಿ ಚಿತ್ರದಲ್ಲಿ ಕೆಲವೇ ನಿಮಿಷ ನಟಿಸಿದ್ದೇನೆ. ನನ್ನ ಕೆಲಸ ಏನಿದ್ರೂ ಎರಡನೇ ಭಾಗದಲ್ಲಿ ಮಾತ್ರ. ನಿಮ್ಮಂತೆ ನಾನು ಅಭಿಮಾನಿಯಾಗಿ ಸಿನಿಮಾ ಆನಂದಿಸುತ್ತಿದ್ದೇನೆ, ಭಾರತೀಯ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಇದೀಗ ಈ ಲಿಸ್ಟ್ನಲ್ಲಿ ಕಲ್ಕಿ ಸಿನಿಮಾ ಕೂಡ ಒಂದಾಗಿದೆ.
ಈ ಸಿನಿಮಾವನ್ನು ನಿರ್ದೇಶಕರು ಪೌರಾಣಿಕ ಹಿನ್ನೆಲೆ, ವೈಜ್ಞಾನಿಕ ಕಾಲ್ಪನಿಕ ಪುರಾಣ ಕಥೆಗಳೊಂದಿಗೆ ಸುಂದರವಾಗಿ ನಿರ್ಮಿಸಿದ್ದಾರೆ. ಬಹಳ ತಾಳ್ಮೆಯಿಂದ ಈ ಕಥೆಯನ್ನು ರಚಿಸಿ ನಿರ್ದೇಶಿಸಿದ್ದಾರೆ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.