- ಪ್ರಭಾಸ್ ಕಲ್ಕಿ 2898 ಎ.ಡಿ ಟ್ರೇಲರ್ ರಿಲೀಸ್ಗೆ ಡೇಟ್ ಫಿಕ್ಸ್
- ಜೂನ್ 10 ರಂದು ಪಂಚ ಭಾಷೆಯಲ್ಲಿ ಟ್ರೇಲರ್ ಬಿಡುಗಡೆ
ಡಾರ್ಲಿಂಗ್ ಪ್ರಭಾಸ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾಗಳ ಪೈಕಿ ಕಲ್ಕಿ 2898 ಎ.ಡಿಯೂ ಒಂದು. ಸೆಟ್ಟೇರಿದಾಗಿನಿಂದಲೂ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರ ಇದೀಗ ಆನಿಮೇಷನ್ ಝಲಕ್ ವಿಡಿಯೋದಿಂದ ಹಾಲಿವುಡ್ ಲೋಕವನ್ನೇ ಥಂಡಾ ಹೊಡೆಸಿದೆ. 6000 ವರ್ಷಗಳ ಕಥೆಗೆ ಮೈಥಾಲಜಿ ಟಚ್ ಕೊಟ್ಟು ಸೈನ್ಸ್ ಫಿಕ್ಷನ್ ಕಾನ್ಸೆಪ್ಟ್ನಲ್ಲಿ ಕಲ್ಕಿ 2898 ಎ.ಡಿನಾ ತಯಾರಿಸಿರೋ ವೈಜಯಂತಿ ಮೂವೀಸ್ ಇದೀಗ ಟ್ರೇಲರ್ ಡೇಟ್ನ ಅನೌನ್ಸ್ ಮಾಡಿದೆ.
ಕಲ್ಕಿ ಟೀಸರ್ ಹಂಗಿದೆ ಅಂತಾ ಸಮಸ್ತ ಸಿನಿಮಾ ಪ್ರೇಮಿಗಳು ಕಣ್ಣರಳಿಸಿ ಕಾದಿದ್ದರು. ಅವರ ಕುತೂಹಲಕ್ಕೆ ಬ್ರೇಕ್ ಹಾಕೋದಕ್ಕೆ ಕಲ್ಕಿ ಟೀಮ್ ಟ್ರೇಲರ್ ರಿಲೀಸ್ ಡೇಟ್ನ ಅನೌನ್ಸ್ ಮಾಡಿದೆ. ಜೂನ್ 10 ರಂದು ಪಂಚ ಭಾಷೆಯಲ್ಲಿ ಟ್ರೇಲರ್ ಬಿಡುಗಡೆಗೊಳಿಸಲು ಸಜ್ಜಾಗಿದೆ. ಸದ್ಯ ಪೋಸ್ಟರ್ ಬಿಟ್ಟು ಟ್ರೇಲರ್ ಬಗ್ಗೆ ಹಿಂಟ್ ಕೊಟ್ಟಿರೋ ಕಲ್ಕಿ ಟೀಮ್, ಎಲ್ಲವೂ ಬದಲಾಗಲಿದೆ ಅನ್ನೋ ಕ್ಯಾಪ್ಶನ್ ಕೊಟ್ಟು ಸಿನಿಮಾ ಮೇಲಿನ ನಿರೀಕ್ಷೆನಾ ದುಪ್ಪಟ್ಟಾಗಿಸಿದೆ. ಭೈರವ ಹಾಗೂ ಬುಜ್ಜಿಯ ಜುಗಲ್ಬಂಧಿ ಜೊತೆಗೆ ಕಮಲ್ ಹಾಸನ್, ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿಯವ್ರಂತಹ ಬಿಗ್ ಸ್ಟಾರ್ಸ್ಗಳ ಸಮಾಗಮ ಆಗಿರೋದು ಕೂಡ ಕಲ್ಕಿಗಾಗಿ ಕುತೂಹಲದಿಂದ ಕಾಯುವಂತಾಗಿದೆ.
ಇನ್ನೂ ಕಲ್ಕಿ ಬಿಗ್ ಬಜೆಟ್ನಲ್ಲಿ ತಯಾರಾಗಿರೋ ಸಿನಿಮಾ. ಸುಮಾರು 600 ಕೋಟಿ ಬಂಡವಾಳ ಹೂಡಿರುವ ವೈಜಯಂತಿ ಮೂವೀಸ್, ಹಾಲಿವುಡ್ ಸಿನಿಮಾ ಮೀರಿಸೋ ಲೆವೆಲ್ಗೆ ಕಲ್ಕಿನಾ ಕಟ್ಟಿಕೊಟ್ಟಿದೆ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಕಲ್ಪನೆಯಲ್ಲಿ ಕಲ್ಕಿ ಚಿತ್ರ ಅರಳಿದ್ದು, ವೈಜಯಂತಿ ಸಂಸ್ಥೆಯ 50 ವರ್ಷದ ಸವಿ ನೆನಪಿಗೆ ಕಲ್ಕಿನಾ ಅರ್ಪಿಸಲಾಗ್ತಿದೆ. ಇದೇ ಜೂನ್ 27ರಂದು ಪಂಚಭಾಷೆಯಲ್ಲಿ ಮಾತ್ರವಲ್ಲದೇ ಹಲವು ಭಾಷೆಗಳಲ್ಲಿ ಈ ಚಿತ್ರ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಳ್ಳಲಾಗ್ತಿದೆ. ಈ ಭಾರಿ ಪ್ಯಾನ್ ಇಂಡಿಯಾ ಜೊತೆಗೆ ಪ್ಯಾನ್ ವರ್ಲ್ಡ್ ನಮ್ಮ ಟಾರ್ಗೆಟ್ ಅಂತ ಕಲ್ಕಿ ಟೀಮ್ ಗ್ಲೋಬಲ್ ಮಾರ್ಕೆಟ್ ಕಡೆ ಕಣ್ಣಿಟ್ಟಿದೆ. ದೊಡ್ಡ ಮಟ್ಟದಲ್ಲೇ ಬಿಡುಗಡೆಗೆ ಅಣಿಯಾಗಿದೆ. ಭೈರವನ ಆಪ್ತ ಸ್ನೇಹಿತ ಬುಜ್ಜಿನಾ ಬಳಸಿಕೊಂಡು ದೇಶದ ಹಲೆವೆಡೆ ಅದ್ದೂರಿ ಪ್ರಚಾರ ಮಾಡಲಾಗ್ತಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಿಸಿರೋ ಬುಜ್ಜಿ ಹೆಸರಿನ ಕಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಭೈರವನ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳೋದಕ್ಕೆ ಜನ ಎಷ್ಟು ಕಾತುರರಾಗಿದ್ದಾರೋ ಅಷ್ಟೇ ಕಾತುರತೆ ಬುಜ್ಜಿ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲಿಕ್ಕಿದೆ. ಶೀಘ್ರದಲ್ಲೇ ಬುಜ್ಜಿ ಕಾರು ಬೆಂಗಳೂರಿಗೂ ಪ್ರಚಾರಕ್ಕೆ ಬರಲಿದೆ.