- “ಕಲ್ಕಿ 2898 ಎಡಿ” ಸಿನಿಮಾದ ಹೊಸ ಟ್ರೇಲರ್ ಬಿಡುಗಡೆ
- ಹೊಸ ಟ್ರೇಲರ್ ನೋಡಿದ ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್
- ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಜೂನ್ 27, 2024 ರಂದು ಬಿಡುಗಡೆ
ಬಹುನಿರೀಕ್ಷಿತ ಸಿನಿಮಾ “ಕಲ್ಕಿ 2898 ಎಡಿ” ಸಿನಿಮಾವು ಬಿಡುಗಡೆಗೆ ಕೆಲವೇ ಕೆಲ ದಿನಗಳು ಬಾಕಿ ಇವೆ. ವೈಜ್ಞಾನಿಕ ಹಾಗೂ ಕಾಲ್ಪನಿಕ ಅಂಶಗಳ ರೀತಿಯಲಲಿ ಮೂಡಿಬಂದಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಈ ಮೊದಲೇ ಟ್ರೇಲರ್ ಬಿಡುಗಡೆಯಾಗಿದ್ದು, ಸಖತ್ ಹವಾ ಸೃಷ್ಟಿಸಿತ್ತು. ಈದೀಗ ಸಿನಿಮಾ ರಿಲೀಸ್ ಹೊಸ್ತಿಲಿನಲ್ಲಿ ಹೊಸ ಟ್ರೇಲರ್ ಬಿಡುಗಡೆ ಮಾಡಲಾಗಿದೆ.
ಇದರಲ್ಲಿ ಅನೇಕ ಅಂಶಗಳು ರಿವೀಲ್ ಆಗಿವೆ. ಭಾರತೀಯ ಪುರಾಣಗಳಲ್ಲಿ ಇರುವ ಅಸಾಧಾರಣ ಕಲ್ಕಿಯ ಕುರಿತ ಸಿನಿಮಿಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸುವ ರೀತಿಯಲ್ಲಿ ಈ ಟ್ರೇಲರ್ ಮೂಡಿಬಂದಿದೆ. ಕಲ್ಕಿ 2898 ಎಡಿ ಸಿನಿಮಾದ ಹೊಸ ಟ್ರೇಲರ್ ನೋಡಿದ ಪ್ರಭಾಸ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ನಾಗ್ ಅಶ್ವಿನ್ ನಿರ್ದೇಶನದ ‘ಕಲ್ಕಿ 2898 AD’ ಜೂನ್ 27, 2024 ರಂದು ಬಿಡುಗಡೆ ಆಗಲಿದೆ. ಇದೊಂದು ವೈಜ್ಞಾನಿಕ ಕಾಲ್ಪನಿಕ ಚಿತ್ರ. ಚಿತ್ರವು ಜೂನ್ 27, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಭಾಸ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಮತ್ತು ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವೈಜಯಂತಿ ಮೂವೀಸ್ ಚಿತ್ರವನ್ನು ನಿರ್ಮಿಸಿದೆ. ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. 3 ಗಂಟೆ 56 ಸೆಕೆಂಡುಗಳ ಸುದೀರ್ಘ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ.