ಕಲ್ಕಿ 2898 AD ತೆಲುಗು ಮಾತ್ರವಲ್ಲ ಇಡೀ ಭಾರತೀಯ ಸಿನಿಮಾರಂಗವೇ ಎದುರುನೋಡ್ತಿರುವ ಚಿತ್ರ. ಡಾರ್ಲಿಂಗ್ ಪ್ರಭಾಸ್ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಸೌತ್ ಮತ್ತು ನಾರ್ತ್ ಸೂಪರ್ ಸ್ಟಾರ್ಗಳ ಸಮಾಗಮವೇ ಆಗಿದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ, ದಿಶಾ ಪಠಾಣಿ ಸೇರಿದಂತೆ ಹಲವು ಬಿಗ್ ಸ್ಟಾರ್ಸ್ಗಳು ಕಲ್ಕಿ ಜೊತೆ ಕೈ ಜೋಡಿಸಿದ್ದಾರೆ. ಮಾಯಲೋಕವನ್ನ ದಂಗಾಗಿಸಲು ಹಾಗೂ ಕಲಾಭಿಮಾನಿಗಳನ್ನ ಹುಚ್ಚೆಬ್ಬಿಸಲು ಕಲ್ಕಿ ಕಲಿಗಳು ಸಜ್ಜಾಗಿದ್ದಾರೆ. ಇನ್ನೇನು ಮೂರೇ ಮೂರು ದಿನದಲ್ಲಿ ಅಂದರೆ ಜೂನ್ 27ರಂದು ಕಲ್ಕಿ ವರ್ಲ್ಡ್ವೈಡ್ ರಿಲೀಸ್ ಆಗ್ತಿದೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಕಲ್ಕಿ ತೆರೆಕಾಣಲಿದ್ದು ಎಲ್ಲಾ ಭಾಷೆಯಲ್ಲೂ ಅಡ್ವಾನ್ಸ್ ಬುಕ್ಕಿಂಗ್ ತೆರೆಯಲಾಗಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ಗೆ ಅವಕಾಶ ಕೊಟ್ಟಿದ್ದೇ ತಡ ಪ್ರೇಕ್ಷಕ ಮಹಾಷಯರು ನಾ ಮುಂದು, ತಾ ಮುಂದು ಅಂತ ಟಿಕೆಟ್ ಬುಕ್ ಮಾಡುವಲ್ಲಿ ನಿರತರಾಗಿದ್ದಾರೆ.
ಇಂಟ್ರೆಸ್ಟಿಂಗ್ ಅಂದರೆ ಕಲ್ಕಿ ಟ್ರೇಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸೋಷಿಯಲ್ ಲೋಕದಲ್ಲಿ ಟ್ರೇಲರ್ ಟ್ರೆಂಡಿಂಗ್ನಲ್ಲಿದೆ. ಇತ್ತೀಚೆಗಷ್ಟೇ ಮುಂಬೈನಲ್ಲಿ ಪ್ರಿರಿಲೀಸ್ ಇವೆಂಟ್ ಮಾಡಿ ಸರ್ ಪ್ರೈಸ್ ಕೊಟ್ಟಿದ್ದ ಕಲ್ಕಿ ಟೀಮ್, ಕಳೆದ ಎರಡು ದಿನಗಳ ಹಿಂದೆ ಕಣ್ಣು ಕುಕ್ಕೋ ಕಲ್ಕಿ ಟ್ರೇಲರ್ನ ಅನಾವರಣ ಮಾಡಿದೆ.
ವೈಜ್ಞಾನಿಕ ಮತ್ತು ಕಾಲ್ಪನಿಕ ಸಮ್ಮಿಶ್ರಣದ ದೃಶ್ಯಕಾವ್ಯ ‘ಕಲ್ಕಿ 2898 AD’ (Kalki) ಚಿತ್ರದ ಮೊದಲ ನೋಟವು ಭಾರತೀಯ ಪುರಾಣಗಳಲ್ಲಿ ಬೇರೂರಿರುವ ಅಸಾಧಾರಣ ಸಿನಿಮೀಯ ಬ್ರಹ್ಮಾಂಡವನ್ನು ಪ್ರೇಕ್ಷಕರಿಗೆ ಪರಿಚಯಿಸಿದರೆ, ಇದೀಗ ಬಿಡುಗಡೆ ಆಗಿರುವ ಟ್ರೇಲರ್ ಚಿತ್ರದೊಳಗಿನ ಇನ್ನಷ್ಟ ಆಳವನ್ನು ನೋಡುಗನಿಗೆ ಪರಿಚಯಿಸಿದೆ. ಇದು ಮಹಾಕಾವ್ಯದ ಇನ್ನೊಂದು ಹಂತದ ಬಗ್ಗೆ ಸುಳಿವು ನೀಡುತ್ತದೆ.
ಟ್ರೇಲರ್ನಲ್ಲಿ ಒಂದಕ್ಕಿಂತ ಒಂದು ಮೀರಿಸುವ ಪಾತ್ರಗಳೇ ಹೈಲೈಟ್. ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ‘ಅಶ್ವತ್ಥಾಮ’ ಆಗಿ ಧೈರ್ಯಶಾಲಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಉಳಗನಾಯಗನ್ ಕಮಲ್ ಹಾಸನ್ ಗುರುತಿಸಲಾಗದ ಇನ್ನೂ ಮಾರಣಾಂತಿಕ ಅವತಾರದಲ್ಲಿ ‘ಯಾಸ್ಕಿನ್’ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಭೈರವನಾಗಿ, ದೀಪಿಕಾ ಪಡುಕೋಣೆ ‘ಸುಮತಿ’ ಪಾತ್ರದಲ್ಲಿ ಎದುರಾಗಿದ್ದಾರೆ. ದಿಶಾ ಪಟಾನಿ ‘ರಾಕ್ಸಿ’ ಖಡಕ್ ಆಗಿಯೇ ಮಿಂಚು ಹರಿಸಿದ್ದಾರೆ.
ಕಲ್ಕಿ 2898 AD ಚಿತ್ರದ ಟ್ರೇಲರ್ನಲ್ಲಿ ಬಗೆಬಗೆ ವಿಭಿನ್ನ ಪ್ರಪಂಚಗಳನ್ನು ಕಾಣಬಹುದು. ಒಂದು ಕಾಶಿ, ಅದರ ಉಳಿವಿಗಾಗಿ ಹೋರಾಡುತ್ತಿರುವ, ಕೊನೆಯದಾಗಿ ಉಳಿದ ನಗರವೆಂದು ಬಿಂಬಿಸಲಾಗಿದೆ. ದೃಶ್ಯವೈಭವವೇ ಇಡೀ ಟ್ರೇಲರ್ನ ಜೀವಾಳ. ಊಹೆಗೂ ನಿಲುಕದ ಒಂದಷ್ಟು ಅಚ್ಚರಿಗೆ ದೂಡುವ ದೃಶ್ಯಗಳೇ ಇಲ್ಲಿನ ಹೈಲೈಟ್. ಅತ್ಯುತ್ತಮ ಹಿನ್ನೆಲೆ ಸ್ಕೋರ್, ಹೈ ಕ್ಲಾಸ್ VFX ಮತ್ತು ರೋಮಾಂಚನಗೊಳಿಸುವ ದೃಶ್ಯಗಳೊಂದಿಗೆ, ಈ ಸಿನಿಮಾ ಮೂಡಿಬಂದಿದೆ. ತೆಲುಗು, ಹಿಂದಿ, ತಮಿಳು, ಮಲಯಾಳಂ, ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಬಹು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
‘ಕಲ್ಕಿ 2898 AD’ ಚಿತ್ರದಲ್ಲಿ ನಿರ್ದೇಶಕ ನಾಗ್ ಅಶ್ವಿನ್ ಅವರ ದೂರದೃಷ್ಟಿಯ ವಿಧಾನವು ಭಾರತೀಯ ಸಿನಿಮಾವನ್ನು ಅದರ ನೆಲದ ದೃಶ್ಯಗಳು ಮತ್ತು ಕಥೆ ಹೇಳುವ ಮೂಲಕ ಮರುವ್ಯಾಖ್ಯಾನಿಸುವ ಭರವಸೆ ನೀಡುತ್ತದೆ. ‘ಕಲ್ಕಿ 2898 AD’ ನಿಜವಾದ ಪ್ಯಾನ್-ಇಂಡಿಯನ್ ಸಿನಿಮಾ ಎನಿಸಿಕೊಂಡಿದೆ. ಸೈನ್ಸ್ ಫಿಕ್ಷನ್ ಕಾನ್ಸೆಪ್ಟ್ ವಿತ್ ಮೈಥಲಾಜಿಕಲ್ ಜಾನರ್ನಲ್ಲಿ ಬರ್ತಿರೋ ಕಲ್ಕಿ 2898ಎಡಿ ಯ ಕಲ್ಪನಾ ಲೋಕ ಹಾಲಿವುಡ್ ಲೋಕವನ್ನ ಕಣ್ಮುಂದೆ ತಂದು ನಿಲ್ಲಿಸುವಂತಿದೆ. 6000 ವರ್ಷಗಳ ಕಥೆಗೆ ಭೂತ ಹಾಗೂ ಭವಿಷ್ಯತ್ ಕಾಲದ ಟಚ್ ಕೊಟ್ಟಿರೋ ನಾಗ್ ಅಶ್ವಿನ್ಗೆ ವೈಜಯಂತಿ ಸಂಸ್ಥೆ ಸಾಥ್ ಕೊಟ್ಟಿದೆ ಸುಮಾರು 600 ಕೋಟಿ ಬಂಡವಾಳ ಹೂಡಿ ಹಾಲಿವುಡ್ ಲೆವೆಲ್ನಲ್ಲಿ ಸಿನಿಮಾ ನಿರ್ಮಿಸಿದೆ. ಹಿಂದಿ ಬೆಲ್ಟ್ನಲ್ಲಿ ಅನಿಲ್ ತಡಾನಿಯವರ ಹೆಸರಾಂತ ಎಎ ಸಂಸ್ಥೆ ಕಲ್ಕಿನಾ ವಿತರಣೆ ಮಾಡ್ತಿದೆ. ಕರ್ನಾಟಕದಲ್ಲಿ ಕೆವಿಎನ್ ಸಂಸ್ಥೆ ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲೂ ಡಿಸ್ಟ್ರಿಬ್ಯೂಷನ್ ಜವಬ್ದಾರಿ ಹೊತ್ತಿದೆ.