‘ಕನ್ನಡ ಇಂಡಸ್ಟ್ರಿ ಕುರಿತು ನಾನು ಜಾಸ್ತಿ ಮಾತಾಡಲ್ಲ. ಕನ್ನಡ ಚಿತ್ರರಂಗದ ಬಗ್ಗೆ ನನಗೇನೂ ಅಭಿಮಾನವಿಲ್ಲ’. ಒಳ್ಳೆಯ ಟ್ಯಾಲೆಂಟ್ಸ್ ಗೆ ಅವರು ಸಪೋರ್ಟ್ ಮಾಡಲ್ಲ. ಹಾಗಾಗಿಯೇ ಕನ್ನಡ ಚಿಕ್ಕ ಇಂಡಸ್ಟ್ರಿ ಆಗಿದೆ.. ಭವಿಷ್ಯದಲ್ಲಿ ಕನ್ನಡ ಚಿತ್ರೋದ್ಯಮ ಮತ್ತಷ್ಟು ಚಿಕ್ಕದಾಗಲಿದೆ ಎಂದು ಕನ್ನ ಚಿತ್ರರಂಗದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾಳೆ ಈ ನಟಿ.
ಯಾಕೆ ತೆಲುಗು ಇಂಡಸ್ಟ್ರಿ ಇಷ್ಟು ದೊಡ್ಡದಾಗಿದೆ ಅಂದ್ರೆ, ತೆಲುಗು ಮಂದಿ ಎಲ್ಲರನ್ನೂ ಸ್ವೀಕರಿಸ್ತಾರೆ, ಪ್ರೀತಿಸ್ತಾರೆ. ವಿಶಾಲ ಹೃದಯ ಹೊಂದಿದ್ದಾರೆ. ಅದಕ್ಕಾಗಿಯೇ ಅವರಿಗೆ ವಿಶಾಲವಾದ ಚಿತ್ರರಂಗವಿದೆ. ಪುಷ್ಪ-2 ನೋಡಿ ಎಷ್ಟು ದೊಡ್ಡ ಹಿಟ್ ಆಗಿದೆ. KGF, ಕಾಂತಾರ ಸಿನಿಮಾಗಳು ಬಂದು 3 ವರ್ಷ ಆಯ್ತು. ಆಮೇಲೆ ಏನಾಯಿತು..? ಏನೂ ಆಗಿಲ್ಲ ನಾನು ಕನ್ನಡ ಆರ್ಟಿಸ್ಟ್ಗಳ ಬಗ್ಗೆ ಮಾತಾಡ್ತಿಲ್ಲ..! ಸಪೋರ್ಟ್ಮಾಡೋರು ಇಲ್ಲ.. ನಂಗೆ ಬ್ಯಾಡ್ ಎಕ್ಸ್ ಪೀರಿಯೆನ್ಸ್ ಆಗಿದೆ ಎಂದು ಕೇವಲವಾಗಿ ಮಾತನಾಡಿದ್ದಾಳೆ ಈ ಮಿಟಕಲಾಡಿ ನಟಿ.
ಇಷ್ಟಕ್ಕೂ ಯಾರು ಈ ನಟಿ.. ಅಂತ ಗೊತ್ತಾ..? ಇಲ್ಲೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಿದ್ದ ಕನ್ನಡತಿ ಅವಳು. ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಜರ್ನಲಿಸ್ಟ್ ಆಗಿ ಕೆಲಸ ಮಾಡಿದಾಕೆ. ಅವಳ ಹೆಸರು ಸೌಮ್ಯ ರಾವ್ ಎಂದು. ಪೊರ್ಕಿ ಹುಚ್ಚ ವೆಂಕಟ್, ಆವರ್ತ ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ತೆಲುಗು ಚಿತ್ರರಂಗದಲ್ಲಿ ಸೆಟಲ್ ಆಗಿರೋ ಕನ್ನಡತಿ. ಕನ್ನಡದಿಂದ ಹೋಗಿ ಕನ್ನಡದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾಳೆ. ಅವಳ ಈ ಮಾತಿಗೆ ಸೋಶಿಯಲ್ ಮೀಡಿಯಾದಲ್ಲಿ ಈಕೆಯನ್ನ ತರಾಟೆಗೆ ತೆಗೆದುಕೊಂಡಡಿದ್ದಾರೆ.
ಪೊರ್ಕಿ ಹುಚ್ಚ ವೆಂಕಟ್, ಆವರ್ತ ಚಿತ್ರಗಳ ನಟೀಮಣಿ. ಅದಕ್ಕೂ ಮುನ್ನ ಒಂದಷ್ಟು ಸೀರಿಯಲ್ ಗಳಲ್ಲಿ ಬಣ್ಣ ಹಚ್ಚಿದ್ದ ಅವಕಾಶವಾದಿ. ಮತ್ತಷ್ಟು ಹಿಂದೆ ಹೋಗಿ ನೋಡಿದ್ರೆ ಒಂದೆರಡು ಖಾಸಗಿ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದ ಮಹಾತಾಯಿ. ಈಕೆಯ ಹೆಸರು ಸೌಮ್ಯ ರಾವ್. ಈಕೆ ಹುಟ್ಟಿ ಬೆಳೆದದ್ದು ಕುವೆಂಪು ಅವರ ಊರಾದ ಶಿವಮೊಗ್ಗ, ಬದುಕು ಕಟ್ಟಿಕೊಳ್ಳಲು ಆಸರೆಯಾಗಿದ್ದು ಬೆಂಗಳೂರು. ಕನ್ನಡ ಚಿತ್ರರಂಗದಿಂದಲೇ ಒಂದಷ್ಟು ನೇಮು, ಫೇಮು ಮಾಡಿದ ಈಕೆ, ಸದ್ಯ ಹೈದ್ರಾಬಾದ್ ನಲ್ಲಿ ಸೆಟಲ್ ಆಗಿ, ಇದೀಗ ಸ್ಯಾಂಡಲ್ ವುಡ್ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗ ಬಹಳ ಚಿಕ್ಕದು. ಇಲ್ಲಿ ಟ್ಯಾಲೆಂಟ್ಸ್ ಗೆ ಸಪೋರ್ಟ್ ಮಾಡಲ್ಲ. ಹಾಗಾಗಿಯೇ ಅದು ಚಿಕ್ಕದಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಚಿಕ್ಕದಾಗಲಿದೆ. ಕಾಂತಾರ, ಕೆಜಿಎಫ್ ಬಂದು ಮೂರು ವರ್ಷಗಳಾಯ್ತು. ಆಮೇಲೆ ಏನಾಗಿದೆ..? ಅಂತೆಲ್ಲಾ ಚಿತ್ರರಂಗದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದ್ದು, ಕನ್ನಡಿಗರು ಹಾಗೂ ನೆಟ್ಟಿಗರು ಈಕೆಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.