ಕನ್ನಡ ಚಿತ್ರರಂಗದಲ್ಲಿ ಹೊಸಬರು ಹೊಸ ತರಹ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಈಗ ಹೊಸದೊಂದು ತಂಡ ಹೊಸ ತರಹ ಆಲೋಚನೆ ಮೂಲಕ ಪ್ರೇಕ್ಷಕರ ಮುಂದೆ ಬರೋಕೆ ರೆಡಿಯಾಗಿದೆ. ಹೊಸಬರ ನಿರ್ದೇಶನದ ಮೂರು ಕಿರುಚಿತ್ರಗಳ ಟೀಸರ್ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಕಾರಣ ಏನು ಅಂದ್ರೇ ಈ ತಂಡದ ಆಲೋಚನೆ.
ಈ ಮೂರು ಕಿರುಚಿತ್ರಗಳನ್ನ ಶೂಟಿಂಗ್ ಮಾಡೋಕೂ ಮೊದಲು ಎರಡುವರೆ ವರ್ಷ ಹೊಸ ತಂಡಕ್ಕೆ ಟ್ರೈನಿಂಗ್ ಕೊಟ್ಟು ನಂತರ ಶೂಟಿಂಗ್ ಮಾಡಿದ್ದಾರೆ. ಈ ಕಿರುಚಿತ್ರಗಳಿಗೆ ಸುನೀಲ್ ರಾಘವೇಂದ್ರ ನಿರ್ಮಾಪಕರಾಗಿದ್ದು, ಇನ್ನೂ ಈ ಮೂರು ಕಿರುಚಿತ್ರಗಳಿಗೆ ಅಭಿನಯಿಸಿದವರು ಅನುಭವಿ ಕಲಾವಿದರು.
“ಆಹಾ ನನ್ ಮದುವೆಯಂತೆ” ಅನ್ನೋ ಕಿರುಚಿತ್ರದಲ್ಲಿ ಸಿಹಿಕಹಿ ಚಂದ್ರು ಅಭಿನಯಿಸಿದ್ದಾರೆ. ಜೊತೆಗೆ ಅವರ ಮಗಳು ಖುಷಿ ಚಂದ್ರಶೇಖರ ಈ ಸಿನಿಮಾ ಮೂಲಕ ಡೆಬ್ಯೂ ಮಾಡಿದ್ದಾರೆ. ಪ್ರೀತಿ ಸಾಗರ್ ಈ ಕಿರುಚಿತ್ರದ ನಿರ್ದೇಶಕರಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಕಮಾಲ್ ಮಾಡಲು ಹೊರಟಿದ್ದಾರೆ.
ಇನ್ನೂ ಎರಡು ಕಿರು ಚಿತ್ರಗಳು ಕದಂಬ ಗೆಳೆಯರ ಬಳಗ ಮತ್ತು ರಾಬಿನ್ .. ಈ ಕಿರು ಚಿತ್ರಗಳನ್ನ ಮಹಿಷಾ ಮತ್ತು ಗಗನ್ ಚಿರಾಯು ನಿರ್ದೇಶಿಸಿದ್ದಾರೆ.. ಸದ್ಯ ಈ ಮೂರು ಕಿರುಚಿತ್ರಗಳ ಟೀಸರ್ ರಿಲೀಸ್ ಆಗಿದ್ದು, ಜೂನ್ ನಲ್ಲಿ ಈ ಕಿರು ಚಿತ್ರಗಳು ರಿಲೀಸ್ ಆಗಲಿವೆ.