- ಅಷ್ಟಕ್ಕೂ, ಕಣ್ಣಪ್ಪ ಸಿನಿಮಾದಲ್ಲಿ ಪ್ರಭಾಸ್ ಪಾತ್ರ ಏನು?
- ಕಣ್ಣಪ್ಪನ ಚರಿತ್ರೆನಾ ಬೆಳ್ಳಿತೆರೆ ಮೇಲೆ ತರಬೇಕು ಅನ್ನೋದು ಟಿಟೌನ್ ಸ್ಟಾರ್ ವಿಷ್ಣು ಮಂಚು ಮಹಾಕನಸು.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿರುವ ಮತ್ತೊಂದು ಮಹೋನ್ನತ ಸಿನಿಮಾ ಕಣ್ಣಪ್ಪ. ಈ ಕಣ್ಣಪ್ಪ ಕಣಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ.
ಅಮರೇಂದ್ರ ಬಾಹುಬಲಿನಾ ಶೂಟಿಂಗ್ ಅಖಾಡಕ್ಕೆ ಬರಮಾಡಿಕೊಂಡಿರೋ ಹೀರೋ ಕಂ ಪ್ರೊಡ್ಯೂಸರ್ ವಿಷ್ಣುಮಂಚು ಸೋಷಿಯಲ್ ಮೀಡಿಯಾದಲ್ಲಿ ಪ್ರಭಾಸ್ ದಿಟ್ಟ ಹೆಜ್ಜೆಯ ಪೋಸ್ಟರ್ ಹಂಚಿಕೊಂಡಿದ್ದಾರೆ.
ಅದ್ಯಾವ ರೋಲ್ ನಲ್ಲಿ ರೆಬೆಲ್ ಸ್ಟಾರ್ ಧಗಧಗಿಸ್ತಾರೆ ಅನ್ನೋ ಸುದ್ದಿನಾ ಬಿಟ್ಟುಕೊಟ್ಟಿಲ್ಲ. ಆದರೆ, ಪ್ರಭಾಸ್ ದಿಟ್ಟ ಹೆಜ್ಜೆಯ ಪೋಸ್ಟರ್ ಮಾತ್ರ ಅಭಿಮಾನಿಗಳನ್ನ ಹುಚ್ಚೇಳುವಂತೆ ಮಾಡಿದೆ. ಕಲ್ಕಿ ಭೈರವನ ನಯಾ ಅವತಾರವನ್ನ ಕಣ್ತುಂಬಿಕೊಳ್ಳೋಕೆ ಕಣ್ಣರಳಿಸುವಂತೆ ಮಾಡಿದೆ.
ಇನ್ನೂ, ಶಿವನ ಅಪ್ರತಿಮ ಭಕ್ತನಾದ ಕಣ್ಣಪ್ಪನ ಚರಿತ್ರೆನಾ ಬೆಳ್ಳಿತೆರೆ ಮೇಲೆ ತರಬೇಕು ಅನ್ನೋದು ಟಿಟೌನ್ ಸ್ಟಾರ್ ವಿಷ್ಣು ಮಂಚು ಮಹಾಕನಸು. ಆ ಕನಸಿನ ಬೆನ್ನೇರಿ ಹೊರಟು ಚಿತ್ರರಂಗದ ದಿಗ್ಗಜರನ್ನೆಲ್ಲಾ ಒಟ್ಟುಗೂಡಿಸಿದ್ದಾರೆ.
ಬಾಲಿವುಡ್ ನಿಂದ ಅಕ್ಷಯ್ ಕುಮಾರ್, ಮಲಯಾಳಂ ಇಂಡಸ್ಟ್ರಿಯಿಂದ ಮೋಹನ್ ಲಾಲ್, ಟಿಟೌನ್ ನಿಂದ ಪ್ರಭಾಸ್, ಮೋಹನ್ ಬಾಬು, ಶರತ್ ಕುಮಾರ್, ಬ್ರಹ್ಮಾನಂದಂ, ಸ್ಯಾಂಡಲ್ ವುಡ್ ನಿಂದ ಶಿವಣ್ಣ ಸೇರಿದಂತೆ ಅತೀ ದೊಡ್ಡ ತಾರಾಬಳಗ ಕಣ್ಣಪ್ಪನಿಗಾಗಿ ಕೈಜೋಡಿಸಿದ್ದಾರೆ.
ಇತ್ತೀಚೆಗಷ್ಟೇ ಅಕ್ಷಯ್ ಕುಮಾರ್ ಕಣ್ಣಪ್ಪನ ಅಂಗಳಕ್ಕೆ ಎಂಟ್ರಿಕೊಟ್ಟಿದ್ದರು. ಶಿವನ ಪಾತ್ರಕ್ಕೆ ಜೀವತುಂಬಿ ಹೋಗಿದ್ದಾರೆ. ಕಣ್ಣಪ್ಪನಾಗಿ ವಿಷ್ಣು ಮಂಚು ಮಿಂಚಲಿದ್ದಾರೆ.
ಸದ್ಯ ಕಣ್ಣಪ್ಪ ಶೂಟಿಂಗ್ ಹೈದ್ರಾಬಾದ್ ನಲ್ಲಿ ಭರದಿಂದ ಸಾಗ್ತಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಚಿತ್ರಕ್ಕಿದ್ದು, 24 ಫ್ರೇಮ್ಸ್ ಫ್ಯಾಕ್ಟ್ರಿ, ಎವಿಎ ಎಂಟರ್ ಟೈನ್ಮೆಂಟ್ ಜಂಟಿಯಾಗಿ ಈ ಸಿನಿಮಾ ನಿರ್ಮಿಸ್ತಿವೆ.