ಈ ಭಾರಿ ಉಡುಪಿ, ಮಂಗಳೂರು ಭಾಗದಲ್ಲಿ ಹೇರಳವಾಗಿ ಮಳೆ ಬರುತ್ತಿದೆ. ಈ ವರುಣ ದೇವನ ಕಾಟ ಕಾಂತಾರ ಚಾಪ್ಟರ್ ಒನ್ ಸಿನಿಮಾಗೂ ತಾಗಿದ್ದು, ಸಿನಿಮಾದ ಶೂಟಿಂಗ್ಗೆ ಬ್ರೇಕ್ ಕೊಡಲಾಗಿದೆ. ಕಾಂತಾರ ಚಾಪ್ಟರ್ 1 ಸಿನಿಮಾದ ಶೂಟಿಂಗ್ ಕುಂದಾಪುರದ ಕೆರಾಡಿಯಲ್ಲಿ ನಡೆಯುತ್ತಿದೆ. ಸಿನಿಮಾದ ಶೂಟಿಂಗ್ಗೆ ಅವಕಾಶ ಕೊಡದಷ್ಟು ಮಳೆ ಆ ಭಾಗದಲ್ಲಿ ಬರುತ್ತಿದೆ. ಎರಡನೇ ಶೆಡ್ಯೂಲ್ ಶೂಟಿಂಗ್ ಮಾಡುತ್ತಿದ್ದ ರಿಷಬ್ಗೆ ಮಳೆರಾಯನ ತೊಂದರೆ ಎದುರಾಗಿದೆ. ಹೀಗಾಗಿ ಜುಲೈ 15 ವರೆಗೆ ಸಿನಿಮಾದ ಶೂಟಿಂಗ್ ನಿಲ್ಲಿಸಲಾಗಿದೆ.
ಹೊಂಬಾಳೆ ಬ್ಯಾನರ್ನ ಕಾಂತಾರ ಚಾಪ್ಟರ್ 1 ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ವಿಜೃಂಭಿಸೋದಂತು ಗ್ಯಾರಂಟಿ. ಅದಕ್ಕಾಗಿ ರಿಷಬ್ ಪ್ಯಾನ್ ಇಂಡಿಯಾ ಇಮೇಜ್ ಇರೋ ಸ್ಟಾರ್ ಕಲಾವಿದರನ್ನೇ ಗುಡ್ಡೆ ಹಾಕಿದ್ದಾರೆ. ಆದ್ರೆ ತಾರಾಗಣದ ಬಗ್ಗೆ ಯಾರೂ ರಿವೀಲ್ ಮಾಡಿಲ್ಲ. ಬಿಡುವಿಲ್ಲದೇ ಕಾಂತಾರದ ಕೆಲಸ ಮಾಡುತ್ತಿರೋ ರಿಷಬ್ ಇದುವರೆಗೂ ಶೇ 40 ರಷ್ಟು ಶೂಟಿಂಗ್ ಮುಗಿಸಿದ್ದಾರೆ. ಮಳೆ ಕಡಿಮೆ ಆದ ನಂತರ ಮತ್ತೆ ಚಿತ್ರೀಕರಣ ಶುರು ಮಾಡಲಿದ್ದಾರೆ.