ಬೆಂಗಳೂರು: ರಿಷಭ್ ಶೆಟ್ಟಿ ನಿರ್ದೇಶಿಸಿದ ಕಾಂತಾರ ಸಿನಿಮಾ ಸಕ್ಸಸ್ ಆಗಿ ದೇಶದೆಲ್ಲಡೆ ಜನಪ್ರಿಯತೆ ಗಳಿಸಿತ್ತು. ಈ ಬೆನ್ನಲ್ಲೇ ರಿಷಭ್ ಶೆಟ್ಟಿ ಕಾಂತಾರ ಚಾಪ್ಟರ್ -1 ಸಿನಿಮಾ ಚಿತ್ರೀಕರಣಕ್ಕೆ ಇಳಿದಿದ್ದರು. ಇನ್ನು ಚಿತ್ರೀಕರಣದಲ್ಲಿ ರಿಷಭ್ ಅವರು ಫುಲ್ ಬ್ಯುಸಿಯಾಗಿದ್ದಾರೆ. ಇದರ ಬೆನ್ನಲ್ಲೇ, ಕಾಂತಾರ ಸಿನಿಮಾದ ಡಿಜಿಟಲ್ ಹಕ್ಕುಗಳು ಅಮೆಜಾನ್ ಪ್ರೈಮ್ ಪಾಲಾಗಿದ್ದು, ಸುಮಾರು 125 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿತ್ತು. ಇದೀಗ ಕಾಂತಾತ -2 ಚಿತ್ರದಲ್ಲಿ ಮಾಲಿವುಡ್ ಖ್ಯಾತ ನಟ ಸಿನಿಮಾಗೆ ಎಂಟ್ರಿ ಕೊಟ್ಟಿರುವುದಾಗಿ ವರದಿಯಾಗಿದೆ.
ಮಾಲಿವುಡ್ ನಟ ಜಯರಾಂ ‘ಕಾಂತಾರ’ಚಿತ್ರದಲ್ಲಿ ಅವರು ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ. ಒಮ್ಮೆಲೆ 5 ಭಾಷೆಗಳಲ್ಲಿ ‘ಕಾಂತಾರ’ಚಾಪ್ಟರ್-1 ಸಿನಿಮಾ ಕಟ್ಟಿಕೊಡಲು ತಂಡ ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಬೇರೆ ಭಾಷೆಗಳಲ್ಲಿ ಸಿನಿಮಾ ಬರುವುದರಿಂದ ಅಲ್ಲಿನ ಕಲಾವಿದರನ್ನು ಬಳಸಿಕೊಳ್ಳುತ್ತಿದೆ ಎನ್ನಲಾಗಿದೆ. ನಟ ಜಯರಾಂ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.