ಕನ್ನಡ ಚಿತ್ರರಂಗದಲ್ಲಿ ಒಂದು ಬಿಗ್ ಸ್ಟಾರ್ ಸಿನಿಮಾ ವಾರ್ಗೆ ಸ್ಯಾಂಡಲ್ವುಡ್ ಸಾಕ್ಷಿಯಾಗಲಿದೆ. ಉಪೇಂದ್ರ ನಟಿಸಿ, ನಿರ್ದೇಶಿಸಿರುವ ”ಯು ಐ” ಸಿನಿಮಾ ಡಿಸೆಂಬರ್ 20ಕ್ಕೆ ಬಿಡುಗಡೆಯಾಗಲಿದೆ ಎಂದು ಈಗಾಗಲೇ ಘೋಷಿಸಲಾಗಿತ್ತು. ಆದ್ರೀಗ ಕಿಚ್ಚ ಸುದೀಪ್ ಕೂಡಾ ಅಖಾಡಕ್ಕೆ ಇಳಿದಿದ್ದಾರೆ. ಯು ಐ ತೆರೆಗೆ ಬಂದು ನಾಲ್ಕು ದಿನಗಳ ಅಂತರದಲ್ಲಿ ಕಿಚ್ಚನ ‘ಮ್ಯಾಕ್ಸ್’ ಕೂಡಾ ರಿಲೀಸ್ ಆಗೋದು ಫಿಕ್ಸ್ ಆಗಿದೆ. ಸ್ಯಾಂಡಲ್ವುಡ್ನ ಎರಡು ಬಿಗ್ ಸಿನಿಮಾಗಳ ನಡುವೆ ಪ್ಯಾನ್ ಇಂಡಿಯಾ ವಾರ್ ಆಗೋದಿಕ್ಕೆ ವೇದಿಕೆ ಸಜ್ಜಾಗಿದೆ.
ರಿಯಲ್ ಸ್ಟಾರ್ ಉಪೇಂದ್ರ ಮತ್ತು ಅಭಿನಯ ಚಕ್ರವರ್ತಿ ಸುದೀಪ್ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಜಸ್ಟ್ ನಾಲ್ಕು ದಿನಗಳ ಗ್ಯಾಪ್ನಲ್ಲಿ ಈ ಇಬ್ಬರೂ ಸೂಪರ್ ಸ್ಟಾರ್ಗಳ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್ ಆಗುತ್ತಿವೆ. ಉಪ್ಪಿಯ ಯು ಐ ಡಿಸೆಂಬರ್ 20ರಂದು ತೆರೆಗೆ ಬಂದ್ರೆ, ಡಿಸೆಂಬರ್ 25ಕ್ಕೆ ಕಿಚ್ಚನ ಮ್ಯಾಕ್ಸ್ ರಿಲೀಸ್ ಆಗಲಿದೆ.
ಯುಐ ಚಿತ್ರತಂಡ ಎರಡು ತಿಂಗಳ ಹಿಂದೆಯೇ ಡಿಸೆಂಬರ್ 20ರಂದು ಸಿನಿಮಾ ಬಿಡುಗಡೆಗೊಳಿಸುವುದಾಗಿ ಘೋಷಿಸಿತ್ತು. ಇತ್ತೀಚೆಗಷ್ಟೇ ಮ್ಯಾಕ್ಸ್ ರಿಲೀಸ್ ಡೇಟ್ ಕೂಡಾ ಅನೌನ್ಸ್ ಮಾಡಲಾಗಿದೆ. ಡಿಸೆಂಬರ್ 25ಕ್ಕೆ ಸುದೀಪ್ ಸಿನಿಮಾ ಬಿಡುಗಡೆಯಾಗಲಿದ್ದು, ಬಾಕ್ಸ್ ಆಫೀಸ್ ಫೈಟ್ ಫಿಕ್ಸ್ ಆಗಿದೆ. ರಿಯಲ್ ಸ್ಟಾರ್ ಹಾಗೂ ಕಿಚ್ಚನ ಎರಡೂ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಇನ್ನು ಸ್ಯಾಂಡಲ್ವುಡ್ನ ಸ್ಟಾರ್ಸ್ನ ಯಾವ ಸಿನಿಮಾ ಸಿನಿ ಪ್ರೇಕ್ಷಕರನ್ನು ಮನ ಗೆಲ್ಲುತ್ತದೆ ಎಂದು ಕಾದುನೋಡಬೇಕಿದೆ.