ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಮ್ಯಾಕ್ಸ್ ಸಿನಿಮಾ ಡಿಸೆಂಬರ್ 25ಕ್ಕೆ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ. ಅದರ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ಕಿಚ್ಚನ ‘ಮ್ಯಾಕ್ಸ್’ಮಮ್ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಹೌದು ಚಿತ್ರದುರ್ಗದಲ್ಲಿ ಮ್ಯಾಕ್ಸ್ ಚಿತ್ರದ ಗ್ರ್ಯಾಂಡ್ ಪ್ರೀ ರಿಲೀಸ್ ಇವೆಂಟ್ ನಡೆಯುತ್ತಿದೆ. ಈ ಇವೆಂಟ್ ಗೆ ಲಕ್ಷಾಂತರ ಮಂದಿ ಬಾದ್ ಷಾ ಸುದೀಪ್ ಅಭಿಮಾನಿಗಳ ಜಮಾವಣೆಗೊಂಡಿದ್ದಾರೆ. ದುರ್ಗದ ಶ್ರೀ ಜಗದ್ಗುರು ಜಯದೇವ ಮುರುಗ ರಾಜೇಂದ್ರ ಸ್ಟೇಡಿಯಂನಲ್ಲಿ ಇವೆಂಟ್ ಆಯೋಜಿಸಲಾಗಿದೆ.
ಇದೇ ಡಿಸೆಂಬರ್ 25ಕ್ಕೆ ತೆರೆಗಪ್ಪಳಿಸಲಿರೋ ಮ್ಯಾಕ್ಸ್ ಸಿನಿಮಾ ಕನ್ನಡ ಸೇರಿ ಐದೈದು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ.. ಕಲೈಪುಲಿ ಎಸ್ ದಾನು ನಿರ್ಮಾಣ ಮಾಡುತ್ತಿದ್ದಾರೆ. ಕಿಚ್ಚನ ಈ ಇವೆಂಟ್ ನಲ್ಲಿ ಸ್ಯಾಂಡಲ್ ವುಡ್ ತಾರೆಯರ ಸಮಾಗಮ ಆಗಲಿದೆ. ಡಾಲಿ, ಡಾರ್ಲಿಂಗ್ ಕೃಷ್ಣ, ಯುವರಾಜ್, ವಿನಯ್ ರಾಜ್, ನಿರೂಪ್ ಭಂಡಾರಿ, ಸಂಚಿತ್, ಶ್ರೇಯಸ್, ನವೀನ್ ಶಂಕರ್ ಭಾಗಿಯಾಗಿದ್ದಾರೆ. ಈ ಸಿನಿಮಾದ ವಿಶೇಷತೆ ಏನೆಂದರೆ ಇದೇ ಮೊದಲ ಬಾರಿ ಬುಧವಾರ ರಿಲೀಸ್ ಆಗ್ತಿರೋ ಕಿಚ್ಚನ ಸಿನಿಮಾ ಇದಾಗಿದೆ.