ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಅವರ ಮದುವೆ ವಿಚಾರ ಸಖತ್ ಸುದ್ದು ಮಾಡುತ್ತಿದೆ. ಈ ಹಿಂದೆ, ಕೀರ್ತಿ ದುಬೈ ಮೂಲದ ಉದ್ಯಮಿ ಮತ್ತು ತಮಿಳು ಚಿತ್ರರಂಗದ ಸ್ಟಾರ್ ಸಂಗೀತ ಸಂಯೋಜಕರೊಂದಿಗೆ ನಟಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಕೀರ್ತಿ ಮತ್ತು ಆಕೆಯ ತಂದೆ ಈ ವದಂತಿಗಳನ್ನು ತಳ್ಳಿಹಾಕಿದ್ದರು.
ಕಳೆದೆರಡು ದಿನಗಳಿಂದ ಕೀರ್ತಿ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಗಮನ ಸೆಳೆದಿದೆ. ಈ ಬಾರಿ, ಡಿಸೆಂಬರ್ 11 ರಂದು ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ನಲ್ಲಿ ಕೀರ್ತಿ ತನ್ನ ಬಹುಕಾಲದ ಗೆಳೆಯ ಆಂಥೋನಿ ಥಟ್ಟಿಲ್ ಅವರೊಂದಿಗೆ ವಿವಾಹವಾಗಲಿದ್ದಾರೆ ಎಂದು ಕಾಲಿವುಡ್ ವಲಯಗಳಲ್ಲಿ ಚರ್ಚೆ ಆಗುತ್ತಿದೆ. ಕೀರ್ತಿ ಮತ್ತು ಆಂಟನಿ ಕಳೆದ 16 ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
2015ರಲ್ಲಿ ಮಲಯಾಳಂ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ ನಟಿ ಕೀರ್ತಿ ಸುರೇಶ್, ಮಹಾನಟಿ ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿದ್ದಾರೆ. ಆ ನಂತರ ಕೀರ್ತಿ ಸುರೇಶ್ ವಿಭಿನ್ನ ಕ್ಯಾರೆಕ್ಟರ್ ಮಾಡುವ ಮೂಲಕ ಸ್ಟಾರ್ ಹೀರೋಯಿನ್ ಇಮೇಜ್ ಗಿಟ್ಟಿಸಿಕೊಂಡಿದ್ದಾರೆ.
ಈ ನಡುವೆ ಕೀರ್ತಿ ಸುರೇಶ್ ಗ್ಲಾಮರಸ್ ಪಾತ್ರಗಳಲ್ಲಿ ಮಿಂಚುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡುತ್ತಿದ್ದಾರೆ. ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಫೇಮಸ್ ಆಗಿರುವ ನಟಿ ಕೀರ್ತಿ ಸುರೇಶ್ ಈಗ ಬಾಲಿವುಡ್ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ. ಈಗಾಗಲೇ ಬಾಲಿವುಡ್ ನಟ ವರುಣ್ ಧವನ್ ಜೊತೆ ಬೇಬಿ ಜಾನ್ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಡೈರೆಕ್ಟರ್ ಅಟ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗ್ತಿದೆ.
ಮಹಾನಟಿ ಮುಂದಿನ ತಿಂಗಳು ವಿವಾಹವಾಗಲಿದ್ದು, ಸಿನಿಮಾದಲ್ಲಿ ನಟಿಸುವುದಕ್ಕೆ ಗುಡ್ ಬೈ ಹೇಳಿ ಕೌಟುಂಬಿಕ ಜೀವನ ನಡೆಸುತ್ತಾರಾ ಅಥವಾ ಮದುವೆಯ ನಂತರವೂ ನಟಿಸುತ್ತಾರಾ ಎಂಬುದು ಸ್ಪಷ್ಟವಾಗಿಲ್ಲ. ಕೀರ್ತಿಸುರೇಶ್ ಅವರ ಸಿನಿ ಕೆರಿಯರ್ ಆಕೆಯ ಭಾವಿ ಪತಿಯ ಇಚ್ಛೆಯ ಮೇಲೆ ನಿಂತಿದೆ. ಈ ಹಿಂದೆ ಕೂಡ ನಟಿ ಕೀರ್ತಿ ಸುರೇಶ್ ಮದುವೆ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ಇದೀಗ ಮತ್ತೊಮ್ಮೆ ಮಹಾನಟಿ ಮದುವೆ ಬಗ್ಗೆ ಊಹಾಪೋಹ ಶುರುವಾಗಿದೆ.