ಇಂದು ನಾಡಿನಾದ್ಯಂತ ಕೃಷ್ಣ ಜನ್ಮಾಷ್ಟಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಮುಖ ದೇವಾಲಯಗಳಲ್ಲಿ ಶ್ರೀಕೃಷ್ಣನಿಗೆ ವಿಶೇಷವಾಗಿ ಪೂಜೆ ನೆರವೇರಿಸಲಾಗುತ್ತದೆ. ಭಕ್ತರು ದೇವಸ್ಥಾನಗಳಿಗೆ ತೆರಳಿ ಶ್ರೀಕೃಷ್ಣನ ದರ್ಶನ ಪಡೆದು ಪಾವನರಾಗಿದ್ದಾರೆ. ಪ್ರತಿ ವರ್ಷವೂ ಕೃಷ್ಣ ಜನ್ಮಾಷ್ಟಮಿಯಂದು ಸಾಕಷ್ಟು ಜನರು ತಮ್ಮ ಮುದ್ದು ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ಉಡುಪುಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ಧೂರಿಯಾಗಿ ಆಚರಿಸುತ್ತಾರೆ.
ಈ ವರ್ಷವೂ ಸ್ಯಾಂಡಲ್ವುಡ್ ತಾರೆಯರು ತಮ್ಮ ಮನೆಯಲ್ಲಿರುವ ಮುದ್ದಾದ ಮಕ್ಕಳಿಗೆ ಕೃಷ್ಣ ಹಾಗೂ ರಾಧೆ ಉಡುಪುಗಳನ್ನು ತೊಡಿಸಿ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗಿದೆ. ಇನ್ನೂ ಕೆಲ ಸೆಲೆಬ್ರಿಟಿಗಳು ಮಕ್ಕಳಿಗೆ ರಾಧೆ-ಕೃಷ್ಣ ವೇಷ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರೆ, ಇನ್ನೂ ಕೆಲವರು ತಮ್ಮ ತಾವೇ ಕೃಷ್ಣ ಹಾಗೂ ರಾಧೆ ವೇಷ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ ಅವರ ಮನೆಯಲ್ಲಿರೋ ತಂಗಿ ಮಗುವಿಗೆ ಕೃಷ್ಣನ ವೇಷ ಹಾಕಿಸಿದ್ದಾರೆ. ಅವರ ಜೊತೆಗೆ ಕಾರ್ತಿಕ್ ಮಹೇಶ್ ಅವರ ತಂಗಿ ತೇಜಸ್ವಿನಿ ಮಹೇಶ್ ಕೂಡ ಯಶೋದೆ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಫೋಟೋಗಳನ್ನು ತೇಜಸ್ವಿನಿ ಮಹೇಶ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಕಿರುತೆರೆ ನಟಿ ಅಗ್ನಿಸಾಕ್ಷಿ ಸೀರಿಯಲ್ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದಿರೋ ನಟಿ ಎಂದರೆ ಅದು ಐಶ್ವರ್ಯಾ ಸಾಲಿಮಠ. ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುವ ನಟಿ ಐಶ್ವರ್ಯಾ ಸಾಲಿಮಠ ಈಗ ರಾಧೆಯ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಮಾಚಾರಿ ಧಾರಾವಾಹಿಯ ವಿಲನ್ ವೈಶಾಖ ಪಾತ್ರಧಾರಿ ಐಶ್ವರ್ಯ ಅವರು ಹಸಿರು ಹಾಗೂ ನೀಲಿ ಬಣ್ಣದ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ.
ಮೊದಲನೇ ಧಾರಾವಾಹಿಯಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಕಿಶನ್ ಬಿಳಗಲಿ ಕೂಡ ಕೃಷ್ಣನ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಗ್ಬಾಸ್ ಮಾಜಿ ಸ್ಪರ್ಧಿ, ಸಖತ್ ಡ್ಯಾನ್ಸರ್ ಆಗಿರೋ ಕಿಶನ್ ಬಿಳಗಲಿ ಕೃಷ್ಣನ ಗೆಟಪ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಕಳ್ಳ ಕೃಷ್ಣ, ಪೋಲಿ ಕೃಷ್ಣ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಇನ್ನು, ರಾಧಾ ಕಲ್ಯಾಣ ಹಾಗೂ ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ ಸೀರಿಯಲ್ ಖ್ಯಾತಿಯ ಕರಾವಳಿ ನಟಿ ರಾಧಿಕಾ ರಾವ್ ಕೂಡ ಯಶೋದ ಹಾಗೂ ಕೃಷ್ಣನ ಗೆಟಪ್ ರೀ ಕ್ರಿಯೇಟ್ ಮಾಡಿದ್ದಾರೆ. ತನ್ನ ಮುದ್ದಾಗ ಮಗುವಿಗೆ ಕೃಷ್ಣನ ಉಡುಪನ್ನು ಹಾಕಿ ಯಶೋದ ಲುಕ್ನಲ್ಲಿ ರಾಧಿಕಾ ರಾವ್ ಅವರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
ಅಗ್ನಿಸಾಕ್ಷಿ ಹಾಗೂ ಪಾರು ಧಾರಾವಾಹಿ ಖ್ಯಾತಿಯ ನಟಿ ಸಿತಾರ ಅವರು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿದ್ದಾರೆ. ಪಾರು ಧಾರಾವಾಹಿ ದಾಮಿನಿ ಪಾತ್ರದ ಮೂಲಕ ಮಿಂಚಿದ್ದ ನಟಿ ಈಗ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಮುದ್ದಾದ ಮಗುವೆಗೆ ಕೃಷ್ಣನ ವೇಷ ಹಾಕಿ, ತಾವು ಕೂಡ ಯಶೋದ ಶೈಲಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.