ಹಿಟ್ ಸಿನಿಮಾಗಳು ರೀ ರಿಲೀಸ್ ಆಗ್ತಿವೆ. ಜಾಕಿ, ಅಂಜನಿಪುತ್ರ, ಪವರ್ ಸಿನಿಮಾಗಳ ನಂತ್ರ ಮುಂದಿನ ವಾರ ಉಪ್ಪಿ ಅಭಿನಯದ “ಎ” ಸಿನಿಮಾ ಮತ್ತೆ ರಿಲೀಸ್ ಆಗ್ತಾಯಿದೆ. ಇದರ ನಡುವೆ ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮತ್ತೆ ರಿಲೀಸ್ ಗೆ ರೆಡಿಯಾಗಿದೆ. 1986ರಲ್ಲಿ ರಿಲೀಸ್ ಆಗಿ ಆಗಿನ ಕಾಲದಲ್ಲಿ ಸಿಲ್ವರ್ ಜ್ಯೂಬ್ಲಿ ಆಚರಿಸಿಕೊಂಡಿದ್ದ ಸಿನಿಮಾ ಈಗ ಆಧುನಿಕ ರೂಪ ಪಡೆದುಕೊಂಡು ಮತ್ತೆ ತೆರೆಗೆ ಅಪ್ಪಳಿಸಲಿದೆ.
ವಿಷ್ಣುದಾದಾ ಅಭಿನಯದ ಕೃಷ್ಣಾ ನೀ ಬೇಗನೆ ಬಾರೋ’ ಸಿನಿಮಾ ಈಗ ಮತ್ತೆ ಬಿಡುಗಡೆ ಆಗಲಿದೆ. ಕಳೆದ 3 ವರ್ಷಗಳಿಂದ ಈ ಸಿನಿಮಾವನ್ನ 7.1 ಡಿಜಿಟಲ್ ಸೌಂಡ್ & ಡಿಟಿಎಸ್ ಡಿಜಿಟಲ್ ಕಲರ್ನಲ್ಲಿ ರೀ ರಿಲೀಸ್ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇತ್ತು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಅನುಪಮಾ ಸೇರಿದಂತೆ ಹಲವು ಥಿಯೇಟರ್ ನಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಭಾರ್ಗವ ನಿರ್ದೇಶನದ ‘ಕೃಷ್ಣಾ ನೀ ಬೇಗನೆ ಬಾರೋ’ ಸಿನಿಮಾ 1986ರಲ್ಲಿ ತೆರೆಗೆ ಬಂದಿತ್ತು. ಭವ್ಯ, ಕಿಮ್, ಮುಖ್ಯಮಂತ್ರಿ ಚಂದ್ರು, ರಾಜಾನಂದ್ ಸೇರಿದಂತೆ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿತ್ತು. ‘ಸೌತೆನ್’ ಎನ್ನುವ ಹಿಂದಿ ಸಿನಿಮಾದಿಂದ ಪ್ರೇರಣೆಗೊಂಡು ಈ ಮ್ಯೂಸಿಕಲ್ ಲವ್ ಸ್ಟೋರಿಯನ್ನ ಕಟ್ಟಿಕೊಡಲಾಗಿತ್ತು. ಬಪ್ಪಿ ಲಹರಿ ಸಂಗೀತವೇ ಸಿನಿಮಾದ ಹೈಲೆಟ್ ಆಗಿತ್ತು. ‘ಕೃಷ್ಣಾ ನೀ ಬೇಗನೆ ಬಾರೋ’ ಸಿನಿಮಾ ರೀ ರಿಲೀಸ್ ಆಗಿ ಸಿನಿಮಾ ಸಿಲ್ವರ್ ಜ್ಯುಬಿಲಿ ಹಿಟ್ ಆಗಿತ್ತು. ಈ ಸಿನಿಮಾದ ಜೊತೆಗೆ ಮನೆಯೇ ಮಂತ್ರಾಲಯ ಸಿನಿಮಾ ಕೂಡ ಹಿಟ್ ಆಗಿತ್ತು ಆ ಸಿನಿಮಾವನ್ನ ಕೂಡ ಭಾರ್ಗವ ಅವರೇ ನಿರ್ದೇಶನ ಮಾಡಿದ್ರು. ಹಾಗಾಗಿ ಎರಡು ಸಿನಿಮಾಗಳ ಸ್ವಿಲ್ವರ್ ಜ್ಯೂಬ್ಲಿ ಕಾರ್ಯಕ್ರಮವನ್ನ ಜಂಟಿಯಾಗಿ ಆಚರಣೆ ಮಾಡಲಾಗಿತ್ತು.
ಮೈಸೂರಿನಲ್ಲಿ ನಡೆದ ಸಿಲ್ವರ್ ಜ್ಯುಬಿಲಿ ಕಾರ್ಯಕ್ರಮದಲ್ಲಿ ರಜನಿಕಾಂತ್, ಅಣ್ಣಾವ್ರು, ಎಸ್. ಎಂ ಕೃಷ್ಣ ಸೇರಿದಂತೆ ಇಡೀ ಚಿತ್ರತಂಡ ಭಾಗಿ ಆಗಿತ್ತು. ಇದೊಂದು ಮ್ಯೂಸಿಕಲ್ ಹಿಟ್ ಸಿನಿಮಾ. ಬಪ್ಪಿ ಲಹರಿ ಸಂಗೀತ ಮಾಡಿದರೂ ರಂಗರಾವ್ ಅದಕ್ಕೆ ಹೊಸ ಟಚ್ ಕೊಟ್ಟಿದ್ದರು. ತೆಲುಗಿಗೆ ಸಿನಿಮಾ ರೀಮೆಕ್ ಆಗಿದ್ದಾಗ ‘ಅಲಾರೆ ಅಲಾರೆ’ ಟ್ರ್ಯಾಕ್ ನ್ನ ತೆಲುಗಿನಲ್ಲಿ ತೆಗೆದುಕೊಂಡಿದ್ದರು. ಕನ್ನಡದಲ್ಲಿ ಆ ಮಟ್ಟಿಗೆ ಸೌಂಡ್ ಮಾಡಿತ್ತು. ಒಟ್ಟಾರೆ ಈ ಸಿನಿಮಾ ಮತ್ತೆ ರಿಲೀಸ್ ಆಗುತ್ತಿರೋದು ದಾದಾ ಅಭಿಮಾನಿಗಳಿಗೆ ಸಂತಸ ತಂದಿದೆ.