ಜೀ ಕನ್ನಡದ ಮಹಾನಟಿ ರಿಯಾಲಿಟಿ ಶೋ ಟೀಮ್ ಮೆಕ್ಯಾನಿಕ್ ವೃತ್ತಿನಿರತ ಕಾರ್ಮಿಕರಿಗೆ ಕ್ಷಮೆಯಾಚಿಸಿದೆ. ಮೆಕ್ಯಾನಿಕ್ ವೃತ್ತಿಯನ್ನ ನಿಂದಿಸಬೇಕು, ಮೆಕ್ಯಾನಿಕ್ ಕಾರ್ಮಿಕರ ಭಾವೆನಗಳಿಗೆ ದಕ್ಕೆ ತರಬೇಕು ಎನ್ನುವ ಉದ್ದೇಶ ನಮ್ಮದಾಗಿರಲಿಲ್ಲ.ಅಷ್ಟಕ್ಕೂ, ಉದ್ದೇಶಪೂರ್ವಕವಾಗಿ ಹಮ್ಮಿಕೊಂಡ ಸ್ಕಿಟ್ ಕೂಡ ಅದಲ್ಲ. ಅದೊಂದು ಕಾಲ್ಪನಿಕ ಸ್ಕಿಟ್. ಸ್ಪರ್ಧಿಗಳು ಆನ್ ಸ್ಪಾಟ್ ಒಂದು ಸ್ಕಿಟ್ ಮಾಡ್ಬೇಕಿದ್ದರಿಂದ ಸಂಭಾಷಣೆಯಲ್ಲಿ ಎಡವಟ್ಟಾಗಿದೆ. ನಮ್ಮಿಂದಾದ ತಪ್ಪಿಗೆ ಮೆಕ್ಯಾನಿಕ್ ಶ್ರಮಿಕ ವರ್ಗಕ್ಕೆ ಕ್ಷಮೆ ಕೇಳ್ತೀವಿ. ಇಡೀ ಮಹಾನಟಿ ಕುಟುಂಬದಿಂದ ವಿಷಾದ ವ್ತಕ್ತಪಡಿಸುತ್ತೇವೆ ಅಂತ ನಿರೂಪಕಿ ಅನುಶ್ರೀ ಕೇಳಿಕೊಂಡಿದ್ದಾರೆ. ನಮ್ಮ ಶೋಗೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಎಂದಿನಂತೆ ಇರಲೆಂದು ಕೋರಿಕೊಂಡಿದ್ದಾರೆ.
ಮಹಾನಟಿ ಶೋನಲ್ಲಿ ಆದಂತಹ ಎಡವಟ್ಟೇನು ? ಆ ಸ್ಕಿಟ್ನಲ್ಲಿ ಯಾವ್ ರೀತಿಯ ಸಂಭಾಷಣೆ ಇತ್ತು ಅಂತೀರಾ? ಇಲ್ಲಿದೆ ಓದಿ
ನೋಡು ಐಶು, ನೀನು ಅವನ ಜತೆ ಬೈಕಲ್ಲಿ ಸುತ್ತಾಡೋದನ್ನು ನಾನು ನೋಡಿದೆ. ಬಿದ್ರೆ ಯಾವಾಗೂ, ತುಪ್ಪದ ಕೊಳದಲ್ಲಿ ಬೀಳಬೇಕೇ ಹೊರತು ಕೊಚ್ಚೆಯ ಕೊಳೆಯಲ್ಲಿ ಬೀಳಬಾರದು. ಇದನ್ನ ನೆನಪಿಟ್ಕೋ. ಲೈಫು ನೀನು ಅಂದುಕೊಂಡಷ್ಟು ಈಜಿಯಾಗಿರೋದಿಲ್ಲ. ದುಡ್ಡು ಇಂಪಾರ್ಟೆಂಟ್ ಅಲ್ಲ, ಪ್ರೀತಿನೇ ಇಂಪಾರ್ಟೆಂಟ್ ಅಂತ ನೀನು ಅಂದುಕೊಂಡಿರಬಹುದು. ಆದರೆ ದುಡ್ಡು ಯಾವಾಗಲೂ ಬೇಕು. ಪ್ರೀತಿ ಮಾಡ್ಕೊಂಡೇ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರ ಆಗಲ್ಲ. ನೀನು ಮೆಕಾನಿಕ್ ಜತೆನೇ ಹೋಗಿ ಅವನ ಜತೆ ಗ್ರೀಸ್ ತಿಂದುಕೊಂಡು ಇರುತ್ತೀನಿ ಅಂದ್ರೆ ತಪ್ಪಾಗುತ್ತೆ” ಹೀಗೊಂದು ಸ್ಕಿಟ್ ಮಾಡಿದ್ದ ಸ್ಪರ್ಧಿಗಳಾದ ಗಗನಾ ಅಂಡ್ ರಮೇಶ್ ವಿರುದ್ಧ ಹಾಗೂ ಜಡ್ಜ್ಗಳ ವಿರುದ್ಧ ಮೆಕ್ಯಾನಿಕ್ ವೃತ್ತಿನಿರತ ಕಾರ್ಮಿಕರು ಸಿಟ್ಟಿಗೆದ್ದಿದ್ದರು ಮಾತ್ರವಲ್ಲ ಪೊಲೀಸ್ ಇಲಾಖೆಗೆ ಮೆಕ್ಯಾನಿಕ್ ಮಿತ್ರ ವೆಲ್ಫೇರ್ ಅಸೋಸಿಯೇಷನ್ ನವರು ದೂರು ನೋಡಿ ಕಾನೂನು ಹೋರಾಟಕ್ಕೆ ಮುಂದಾಗಿದ್ದರು . ಇದೀಗ ಮಹಾನಟಿ ಬಳಗ ಕ್ಷಮೆಯಾಚಿಸಿದೆ.