ಲೇಡಿ ಸೂಪರ್ ಸ್ಟಾರ್, ಲೇಡಿ ಟೈಗರ್, ಆಕ್ಷನ್ ಕ್ವೀನ್ ಹೀಗೆ ನಾನಾ ಹೆಸರುಗಳಿಂದ ಪ್ರಖ್ಯಾತಿ ಪಡೆದಿರೋ ಸ್ಯಾಂಡಲ್ ವುಡ್ನ ಕನಸಿನ ರಾಣಿ ಮಾಲಾಶ್ರೀ ಈಗಲೂ ಬಣ್ಣದ ಲೋಕದಲ್ಲಿ ತಮ್ಮ ಛಾರ್ಮ್, ಕ್ರೇಜ್ನ ಉಳಿಸಿಕೊಂಡಿದ್ದಾರೆ. ಒಂದ್ಕಾಲಕ್ಕೆ ಸ್ಟಾರ್ ನಟರುಗಳಿಗೆ ಸೆಡ್ಡು ಹೊಡೆದು ಬೆಳ್ಳಿತೆರೆ ರೂಲ್ ಮಾಡಿದ ದುರ್ಗಿ ಈಗಲೂ ಚಂದನವನದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮಂತೆ ತಮ್ಮ ಮಕ್ಕಳು ಕೂಡ ಮಾಯಲೋಕದಲ್ಲಿ ಮಿಂಚಬೇಕು ಎನ್ನುವ ಕನಸು ಕಂಡಿರುವ ಕನಸಿನ ರಾಣಿ ಈಗಾಗಲೇ ಮಗಳು ಆರಾಧನಾ ರಾಮ್ ಅವ್ರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬ್ಲಾಕ್ಬಸ್ಟರ್ ಚಿತ್ರ ಕಾಟೇರ ಮೂಲಕ ಆರಾಧನಾ ರಾಮ್ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟು ಕನ್ನಡಿಗರ ಹೃದಯ ಗೆದ್ದಿದ್ದಾರೆ. ಇದರ ಬೆನ್ನಲ್ಲೇ ಮಾಲಾಶ್ರೀಯವರ ಪುತ್ರ ಬಿಗ್ ಸ್ಕ್ರೀನ್ ಗೆ ಎಂಟ್ರಿಕೊಡಲು ತಯಾರಿ ನಡೆಸ್ತಿದ್ದಾರೆನ್ನುವ ಸೂಚನೆ ಸಿಗ್ತಾಯಿದೆ.
ಯಸ್, ಮಾಲಾಶ್ರೀ ಹಾಗೂ ಕೋಟಿ ರಾಮು ಅವರ ಪುತ್ರ ಆರ್ಯನ್ ಪಕ್ಕಾ ಹೀರೋ ಮಟೀರಿಯಲ್ ನಂತಿದ್ದಾರೆ. ಹೈಟ್, ಪರ್ಸನಾಲಿಟಿ ಎಲ್ಲದರಲ್ಲೂ ಪಕ್ಕಾ ಇರೋ ಆರ್ಯನ್ ಜಿಮ್ ವರ್ಕೌಟ್ ಮಾತ್ರವಲ್ಲದೆ ಕಿಕ್ ಬಾಕ್ಸಿಂಗ್ ಪ್ರಾಕ್ಟೀಸ್ ಮಾಡ್ತಿದ್ದಾರೆ. ಅದರ ಝಲಕ್ ವಿಡಿಯೋವೊಂದನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಮಾಲಾಶ್ರೀ, “ನನ್ನ ಹುಡುಗ ಬೆಳೆಯುತ್ತಿದ್ದಾನೆ” ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಇದನ್ನ ನೋಡಿದ ಮಾಲಾಶ್ರೀಯವರ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಮಿಗಳು ಯಂಗ್ ಟೈಗರ್ ಎಂಟ್ರಿ ಯಾವಾಗ ಮೇಡಂ ಅಂತ ಕೇಳ್ತಿದ್ದಾರೆ.
ಸದ್ಯ ಮಾಲಾಶ್ರೀ ಪುತ್ರ ಆರ್ಯನ್ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಅಪ್ಪ ಅಮ್ಮನಂತೆ ಸಿನಿಮಾದ ಬಗ್ಗೆ ವಿಶೇಷ ಒಲವು ಹೊಂದಿರುವ ಆರ್ಯನ್, ಹೀರೋ ಆಗಿ ಲಾಂಚ್ ಆಗಲು ಬೇಕಾದ ತಯಾರಿನೂ ನಡೆಸ್ತಿದ್ದಾರೆ. ಫಿಟ್ನೆಸ್ ಜೊತೆಗೆ ಬಾಕ್ಸಿಂಗ್ ತರಭೇತಿ ಪಡೆಯುತ್ತಿರೋದು ಗೊತ್ತಾಗ್ತಿದೆ. ನೋಡಲಿಕ್ಕೂ ಸ್ಪುರದ್ರೂಪಿಯಾಗಿರೋ ಆರ್ಯನ್ ಸ್ಯಾಂಡಲ್ ವುಡ್ ಗೆ ಕಾಲಿಟ್ಟರೆ ಕಮಾಲ್ ಮಾಡೋದ್ರಲ್ಲಿ ಡೌಟೇ ಇಲ್ಲ. ಅಂದ್ಹಾಗೇ, ಮಕ್ಕಳನ್ನ ಕನ್ನಡ ಚಿತ್ರರಂಗಕ್ಕೆ ಅದ್ದೂರಿಯಾಗಿ ಲಾಂಚ್ ಮಾಡಬೇಕು ಅನ್ನೋದು ನಿರ್ಮಾಪಕ ಕೋಟಿ ರಾಮು ಅವರ ಕನಸಾಗಿತ್ತು. ಆ ಕನಸು ನನಸಾಗೋ ಮೊದಲೇ ಕರೋನಾಗೆ ಬಲಿಯಾದರು. ಇದೀಗ ಅವರ ಕನಸನ್ನ ಮಾಲಾಶ್ರೀಯವರು ನೆರವೇರಿಸಲು ಸಜ್ಜಾಗಿದ್ದಾರೆ. ಮಗಳ ನಂತರ ಮಗನನ್ನ ಚಿತ್ರರಂಗಕ್ಕೆ ತರಲು ಎದುರು ನೋಡ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ಆರ್ಯನ್ ಚಾಕಲೇಟ್ ಬಾಯ್ ಅಲ್ಲದೇ ಮಾಸ್ ಹೀರೋ ಆಗಿಯೂ ಮಿಂಚುವ ಭರವಸೆಯಿದೆ. ಸದ್ಯ ರಿಲೀಸ್ ಆಗಿರೋ ಬಾಕ್ಸಿಂಗ್ ವಿಡಿಯೋ ನೋಡಿದರೆ ಗಂಧದಗುಡಿಗೆ ಆರ್ಯನ್ ಮಾಸ್ ಹೀರೋ ಆಗೋದ್ರಲ್ಲಿ ಡೌಟೇ ಇಲ್ಲ . ನೋಡೋಣ ಆರ್ಯನ್ ಹೇಗ್ ಎಂಟ್ರಿಕೊಡ್ತಾರೆ? ಹೇಗೆ ಮೇನಿಯಾ ಸೃಷ್ಟಿಸ್ತಾರೆ ಅನ್ನೋದನ್ನ.