2022ರಲ್ಲಿ ಕನ್ನಡ ಚಿತ್ರರಂಗ ಬಾಕ್ಸ್ ಆಫೀಸ್ ಕಿಂಗ್ ಆಗಿತ್ತು. ಯಾವುದೇ ಇಂಡಸ್ಟ್ರಿ ಮಾಡದ ಬ್ಯುಸಿನೆಸ್ ಸ್ಯಾಂಡಲ್ ವುಡ್ ಮಾಡಿತ್ತು. ಆದ್ರೇ 2023 ಹಾಗೂ 2024ರಲ್ಲಿ ಕನ್ನಡ ಸಿನಿಮಾ ರಂಗ ಮಂಕಾಗಿದೆ. ಇದು ಕನ್ನಡ ಚಿತ್ರರಂಗದ ಸ್ಥಿತಿ ಮಾತ್ರವಲ್ಲ ಟಾಲಿವುಡ್ , ಕಾಲಿವುಡ್ ಹಾಗೂ ಬಾಲಿವುಡ್ ಕಥೆ ಕೂಡ ಹೀಗೆ ಆಗಿದೆ. ಒಂದು ಕಡೆ ಎಲ್ಲಾ ಇಂಡಸ್ಟ್ರಿಗಳ ಮಂಕಾದ್ರೇ ಮಲಯಾಳಂ ಸಿನಿಮಾ ಇಂಡಸ್ಟ್ರಿ ಮಾತ್ರ ಭರ್ಜರಿ ಕಮಾಯಿ ಮಾಡಿದೆ.
ಹೌದು …ಮಲಯಾಳಂ ಚಿತ್ರರಂಗಕ್ಕೆ 2024ರಲ್ಲಿ ಬಂಪರ್ ಲಾಟರಿ ಹೊಡೆದಿದೆ. ವರ್ಷದ ಆರಂಭದಲ್ಲೇ ಒಂದಾದಮೇಲೆ ಒಂದರಂತೆ ಸಿನಿಮಾಗಳು ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಾಣುತ್ತಿವೆ. ಕೇವಲ ನಾಲ್ಕು ತಿಂಗಳಲ್ಲಿ ಮಲಯಾಳಂನ ಎಂಟು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿವೆ. ಹಾಗಾಗಿ ಈ ನಾಲ್ಕು ತಿಂಗಳಲ್ಲಿ ಮಲಯಾಳಂ ಸಿನಿಮಾರಂಗ ಬರೋಬ್ಬರಿ 985 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿದೆ.
ಜೊತೆಗೆ ಮೇ 23ರಂದು ಮಮ್ಮೂಟಿ ನಟನೆಯ ‘ಟರ್ಬೋ’ರಿಲೀಸ್ ಆಗಲಿದ್ದು, ಈ ಸಿನಿಮಾ ಕೂಡ ದೊಡ್ಡ ಮಟ್ಟದ ಗೆಲುವು ಕಾಣುವ ಲಕ್ಷಣಗಳು ಕಾಣಿಸುತ್ತಿವೆ. ಈ ಮೂಲಕ ನಾಲ್ಕೇ ತಿಂಗಳಲ್ಲಿ ಸಾವಿರ ಕೋಟಿ ಗಡಿ ದಾಟಲಿದೆ ಮಾಲಿವುಡ್.
![](https://guaranteenews.com/wp-content/uploads/2024/05/WhatsApp-Image-2024-05-13-at-3.04.51-PM.jpeg)
ಫೆಬ್ರವರಿ 22ರಂದು ಮಂಜುಮ್ಮೇಲ್ ಬಾಯ್ಸ್ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಬೆಳೆ ತೆಗೆಯಿತು. ಈ ಸಿನಿಮಾ ಒಟ್ಟಾರೆಯಾಗಿ 250 ಕೋಟಿ ರೂಪಾಯಿ ಬ್ಯುಸಿನೆಸ್ ಮಾಡಿತು. ಮಲಯಾಳಂ ಚಿತ್ರರಂಗದಲ್ಲೇ ಅತಿ ಹೆಚ್ಚು ಬ್ಯುಸಿನೆಸ್ ಮಾಡಿದ ಸಿನಿಮಾ ಅನ್ನೋ ಹೆಗ್ಗಳಿಕೆ ಪಾತ್ರವಾಯ್ತು.
![](https://guaranteenews.com/wp-content/uploads/2024/05/WhatsApp-Image-2024-05-13-at-3.04.53-PM.jpeg)
ಏಪ್ರಿಲ್ 11ರಂದು ರಿಲೀಸ್ ಆದ ‘ಆವೇಶಂ’ಸಿನಿಮಾ ಕೂಡ ಪ್ರೇಕ್ಷಕರ ಮೆಚ್ಚುಗೆ ಪಡೆದು 151.95 ಕೋಟಿ ರೂಪಾಯಿ ಕಮಾಯಿ ಮಾಡಿತು. ಈ ಎರಡು ಸಿನಿಮಾಗಳಿಂದಲೇ ಮಾಲಿವುಡ್ ಗೆ 400 ಕೋಟಿ ಬಂದಿದೆ.
![](https://guaranteenews.com/wp-content/uploads/2024/05/ದ್ದ್ದ್.png)
ಇನ್ನೂ ಮಾರ್ಚ್ 28ರಂದು ‘ಆಡು ಜೀವಿತಂ’ ಸಿನಿಮಾ ರಿಲೀಸ್ ಆಯಿತು. ಈ ಸಿನಿಮಾ ಕೂಡ ನೂರು ಕೋಟಿ ಕ್ಲಬ್ ಸೇರಿತು.. ಈ ಸಿನಿಮಾ ಒಟ್ಟು 155 ಕೋಟಿ ಗಳಿಸಿತು.
![](https://guaranteenews.com/wp-content/uploads/2024/05/WhatsApp-Image-2024-05-13-at-3.04.51-PM-1.jpeg)
ಈ ಸಿನಿಮಾದ ನಂತರ ಮಾಲಿವುಡ್ ನ ಗೆಲುವಿನ ನಾಗಾಲೋಟ ನಿಲ್ಲಲೇ ಇಲ್ಲ ಪ್ರೇಮಲು’ ಸಿನಿಮಾ ಫೆಬ್ರವರಿ 9ರಂದು ಬಿಡುಗಡೆ ಆಗಿ 136 ಕೋಟಿ ರೂಪಾಯಿ ಗಳಿಕೆ ಮಾಡಿತು.
ಮಮ್ಮೂಟಿ ನಟನೆಯ ‘ಬ್ರಮಯುಗಂ’58.96 ಕೋಟಿ ರೂಪಾಯಿ, ‘ವರ್ಶಂಗಳಕ್ಕು ಶೇಶಂ’81 ಕೋಟಿ ರೂಪಾಯಿ, ‘ಅನ್ವೇಶಿಪ್ಪಿನ್ ಕಂಡೆದುಮ್’ಸಿನಿಮಾ 40 ಕೋಟಿ ರೂಪಾಯಿ, ‘ಅಬ್ರಾಮ್ ಓಜ್ಲರ್’40.53 ಕೋಟಿ ರೂಪಾಯಿ ಕಲೆ ಹಾಕಿದೆ. ಜೊತೆಗೆ ಉಳಿದ ಸಿನಿಮಾಗಳ ಗಳಿಕೆ ಸೇರಿದರೆ, ಮಾಲಿವುಡ್ ನ ಒಟ್ಟು ಬಿಸಿನೆಸ್ 985 ಕೋಟಿ ರೂಪಾಯಿ ಆಗಿದೆ…