ಕೆಂಡಸಂಪಿಗೆ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಮಾನ್ವಿತಾ ಕಾಮತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ. ಸಂಗೀತ ಆಧಾರಿತ ಟೆಕ್ ಕಂಪನಿಯ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇ 1ರಂದು ಮಾನ್ವಿತಾ ಹಾಗೂ ಅರುಣ್ ಕುಮಾರ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಏಪ್ರಿಲ್ 29ಕ್ಕೆ ಮೆಹಂದಿ ಶಾಸ್ತ್ರ, ಏಪ್ರಿಲ್ 30 ಅರಿಶಿಣ ಶಾಸ್ತ್ರ, ಏಪ್ರಿಲ್ 30ರಂದು ಸಂಗೀತ ಸಮಾರಂಭ ಜರುಗಲಿದೆ.. ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ಸಮಾರಂಭ ನಡೆಯಲಿದೆ.