ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮೋಸ್ಟ್ ಅವೈಟೆಡ್ ಮೂವೀ ಮಾರ್ಟಿನ್ ಸಿನಿಮಾ ಫಸ್ಟ್ ಸಾಂಗ್ ರಿಲೀಸ್ ಆಗಿದೆ, ಮಾರ್ಟಿನ್ ಸಿನಿಮಾ ಅಂದ್ರೆ ಬರೀ ಆಕ್ಷನ್ ಸಿನಿಮಾ ಅಂತಿದ್ದವರಿಗೆ ರೊಮ್ಯಾಂಟಿಕ್ ವರ್ಷನ್ ಆಫ್ ಮಾರ್ಟಿನ್ ಮರುಭೂಮಿಯಲ್ಲೀ ಕಾಣುವ ಮರೀಚಿಕೆಯಂತೆ ಕೂಲ್ ಕೂಲ್ ಅನುಭವ ನೀಡಿದೆ. ಲಿರಿಕಲ್ ವಿಡಿಯೋ ರಿಲೀಸ್ ಮಾಡುವ ಬದಲು ನೆರವಾಗಿ ರಿಲೀಸ್ ಆಗಿರೋ ಮೆಲೋಡಿಯಸ್ ರೊಮ್ಯಾಂಟಿಕ್ ಹಾಡು ಕಿವಿಗೆ, ಕಣ್ಣಿಗೆ ತಂಪನೀಯುತ್ತಿದೆ. ಧ್ರುವಾ ಸರ್ಜಾ ಜೊತೆಗೆ ವೈಭವಿ ಶಾಂಡಿಲ್ಯ ರೊಮ್ಯಾನ್ಸ್ ಫ್ರೆಶ್ ಫಿಲ್ ನೀಡ್ತಾ ಇದೆ.
ತೆಲುಗಿನ ಮೆಲೋಡಿ ಮೇಕರ್ ಮ್ಯೂಸಿಕ್ ಡೈರೆಕ್ಟರ್ ಮಣಿಶರ್ಮಾ ಮ್ಯೂಸಿಕ್ ಕಂಪೋಸ್ ಮಾಡಿರೋ ಜೀವ ನೀನು ಹಾಡಿಗೆ ಅಷ್ಟೆ ಸುಶ್ರಾವ್ಯವಾಗಿ ಲಿರಿಕ್ಸ್ ಬರೆದಿದ್ದಾರೆ ನಿರ್ದೇಶಕ ಎಪಿ ಅರ್ಜುನ್. ಈ ರೊಮ್ಯಾಂಟಿಕ್ ಮೆಲೋಡಿ ಹಾಡಿಗೆ ಇರ್ಮಾನ್ ಸರ್ಧಾರಿಯಾ ಕೊರಿಯೋಗ್ರಾಫ್ ಮಾಡಿದ್ದಾರೆ. ಮೆಲೋಡಿಯಸ್ ಹಾಡುಗಳ ಮೋಡಿಗಾರ ಸೋನು ನಿಗಮ್ ಜೊತೆಗೆ ಶೃತಿಕಾ ಸಮುದ್ರಲ ಕನ್ನಡ ವರ್ಷನ್ ಈ ರೊಮ್ಯಾಂಟಿಕ್ ಹಾಡನ್ನು ಹಾಡಿದ್ದಾರೆ, ಕನ್ನಡದ ಜೊತೆಗೆ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಈ ಹಾಡು ರಿಲೀಸ್ ಆಗಿದೆ.
ತಮಿಳಿನಲ್ಲಿ ಇದೇ ʼಜೀವನ್ ನೀಯೇ..ʼ ಹಾಡನ್ನ ಹರಿಚರಣ್ ಹಾಗೂ ಶೃತಿಕಾ ಸಮುದ್ರಲ ಹಾಡಿದ್ರೆ, ವಿವೇಕ ಲಿರಿಕ್ಸ್ ಬರೆದಿದ್ದಾರೆ. ಇನ್ನು ತೆಲುಗಿನಲ್ಲಿ ರೊಮ್ಯಾಂಟಿಕ್ ಹಾಡುಗಳ ಮಾಂತ್ರಿಕ ರಾಮ್ ಜೋಗಯ್ಯ ಶಾಸ್ತ್ರಿ ಬರೆದಿದ್ದು, ಶ್ರೀಕೃಷ್ಣ ಹಾಡಿದ್ದಾರೆ. ಇದೇ ಹಾಡು ಹಿಂದಿ ಹಾಗು ಮಲಯಾಳಂನಲ್ಲೂ ರಿಲೀಸ್ ಆಗಿದ್ದು, ಹಿಂದಿಯಲ್ಲಿ ಮುನಾವರ್ ಸಾಹಿತ್ಯ ಬರೆದಿದ್ದು, ಜಾವೆದ್ ಅಲಿ ಹಾಗೂ ಪಲಕ್ ಮುಚ್ಚಲ್ ಹಾಡಿದ್ದಾರೆ. ಮಲಯಾಳಂನಲ್ಲಿ ವಿನಾಯಕ್ ಶಶಿ ಕುಮಾರ್ ಬರೆದಿರೋ ಹಾಡಿಗೆ, ಹರಿಚರಣ್ ಧನಿಯಾಗಿದ್ದಾರೆ.
ಇನ್ನೂ, ಈಗಾಗಲೇ ಟೀಸರ್ ಹಾಗೂ ಟ್ರೇಲರ್ ಮಾರ್ಟಿನ್ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇಷ್ಟು ದಿನ ಇದೊಂದು ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಎಂದು ಭಾವಿಸಲಾಗಿತ್ತು. ಆದ್ರೀಗ ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್ನ ನೋಡಿ ಬಹದ್ದೂರ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.
ಎ.ಪಿ ಅರ್ಜುನ್ ನಿರ್ದೇಶನದಲ್ಲಿ, ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ದಸರಾ ಹಬ್ಬಕ್ಕೆ ಸ್ಪೆಷಲ್ಲಾಗಿ ತೆರೆಗಪ್ಪಳಿಸ್ತಿದೆ. 13 ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗ್ತಿರೋ ಮೊಟ್ಟ ಮೊದಲ ಕನ್ನಡ ಚಿತ್ರ ಇದಾಗಲಿದ್ದು, ಅಕ್ಟೋಬರ್ 11 ರಂದು ವರ್ಲ್ಡ್ ವೈಡ್ ಮಾರ್ಟಿನ್ ಮೇನಿಯಾ ಹೇಗಿರಲಿದೆ ಅನ್ನೋದನ್ನ ಕಾದುನೋಡಬೇಕಿದೆ.