ಸುದೀಪ್ ಅಭಿಮಾನಿಗಳಿಗೆ “ಮ್ಯಾಕ್ಸ್” ಆ್ಯಕ್ಷನ್ ಫೀಸ್ಟ್ ಆಗಲಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಸದ್ಯ “ಮ್ಯಾಕ್ಸ್” ಚಿತ್ರೀಕರಣ ನಡೆಯುತ್ತಿರುವ ಮಹಾಬಲಿಪುರಂಗೆ ಇತ್ತಿಚೆಗೆ ಭೇಟಿ ನೀಡಿದ ನಿರ್ದೇಶಕರು ಚಿತ್ರದ ಶೋರೀಲ್ ನೋಡುವ ಭಾಗ್ಯ ಪಡೆದರು. ದೃಶ್ಯಗಳನ್ನು ವೀಕ್ಷಿಸಿದ ಇಂದ್ರಜಿತ್ ಲಂಕೇಶ್ ಸಿನಿಮಾ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಚಿತ್ರವು ತನ್ನ ಹೈ- ಆ್ಯಕ್ಷನ್ ಸೀಕ್ವೆನ್ ಮತ್ತು ಅಭಿನಯದಿಂದ ಪ್ರೇಕ್ಷಕರನ್ನು ಸೆಳೆಯುವ ಸಾಮಾರ್ಥ್ಯ ಹೊಂದಿದೆ. ಶೋರೀಲ್ ಬಗ್ಗೆ ಮಾತನಾಡುತ್ತಾ, ಚಿತ್ರವು ಆ್ಯಕ್ಷನ್ ಸೀಕ್ವೆನ್ಗಳನ್ನು ಹೈಲೈಟ್ ಮಾಡಿದರು. ಸುದೀಪ್ ಅವರ ನಟನೆ ಮತ್ತು ಬಾಡಿ ಲಾಂಗ್ವೇಜ್ ಗಳು, ಸಿನಿಮಾದಲ್ಲಿನ ನಟನೆ, ಅಪ್ರತಿಮ ಪಾತ್ರಗಳ ನೆನಪುಗಳನ್ನು ತರುತ್ತದೆ. ಈ ಅಂಶಗಳು “ಮ್ಯಾಕ್ಸ್”ನಲ್ಲಿನ ಸುದೀಪ್ ಅವರ ಅಭಿನಯಕ್ಕೆ ಕನ್ನಡಿ ಹಿಡಿಯುತ್ತವೆ ಎಂದು ವಿವರಿಸಿದರು.
ವಿಜಯ್ ಕಾರ್ತೀಕೇಯನ್ ಅವರ ಚೊಚ್ಚಲ ನಿರ್ದೇಶನ ಮ್ಯಾಕ್ಸ್ ಚಿತ್ರೀಕರಣವ ಅಂತಿಮ ಹಂತಕ್ಕೆ ತಲುಪಿದ್ದು, ಸುದೀಪ್ ಸದ್ಯ ಪ್ರಮುಖ ಆ್ಯಕ್ಷನ್ ಸೀಕ್ವೆನ್ ಗಳಲ್ಲಿ ತೊಡಗಿಕೊಂಡಿದ್ದಾರೆ. ಶೀಘ್ರದಲ್ಲೇ ನಿರ್ಮಾಣವನ್ನು ಪೂರ್ಣಗೊಳಿಸಲಿದೆ.