ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಮ್ಯಾಕ್ಸ್ ಅಪ್ ಡೇಟ್ ಗಾಗಿ ಕಾಯ್ತಿದ್ದ ಫ್ಯಾನ್ಸ್ ಗೆ ಫಿಲ್ಮ್ ಟೀಮ್ ಸಖತ್ ಸರ್ ಪ್ರೈಸ್ ಕೊಟ್ಟಿದೆ. ಎ ಬಿಗ್ ಆಂಡ್ ಎಕ್ಸೈಟಿಂಗ್ ಅಪ್ ಡೇಟ್ ಕಮ್ಮಿಂಗ್ ಸೂನ್ ಅಂತ ಪೋಸ್ಟರ್ ರಿಲೀಸ್ ಮಾಡಿದೆ. ಅದರಲ್ಲಿ ಮ್ಯಾಕ್ಸ್ ಸ್ಟೆಪ್ಸ್ ಇನ್ ಟು ದಿ ರೇಸ್ ಟ್ರ್ಯಾಕ್ ಅಂತ ಹೇಳಿರೋದ್ರಿಂದ ನಿರೀಕ್ಷೆ ಗರಿಗೆದರಿದೆ. ಮ್ಯಾಕ್ಸ್ ಅಂಗಳದಿಂದ ರಿವೀಲ್ ಆಗ್ತಿರೋದು ಟೀಸರ್ರಾ? ಟೈಟಲ್ ಟ್ರ್ಯಾಕ್? ಹೀಗೊಂದು ಕುತೂಹಲ ಪೈಲ್ವಾನ್ ಫ್ಯಾನ್ಸ್ ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ.
ಇತ್ತೀಚೆಗಷ್ಟೇ ಕಿಚ್ಚ ಬೇರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಮ್ಯಾಕ್ಸ್ ಬಗ್ಗೆ ಅಪ್ ಡೇಟ್ ಕೊಟ್ಟಿದ್ದರು. ಚಿತ್ರದ ಡಬ್ಬಿಂಗ್ ಪೂರ್ಣಗೊಂಡಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಆಗಸ್ಟ್ನಲ್ಲಿ ಸಿನಿಮಾ ಬಿಡುಗಡೆ ಮಾಡಲಿಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ಸುದೀಪ್ ತಿಳಿಸಿದ್ದರು. ಇದೀಗ ಚಿತ್ರತಂಡ ಅಪ್ ಡೇಟ್ ಕೊಡಲು ಪೋಸ್ಟರ್ ಹಂಚಿಕೊಂಡಿದೆ. ಖುದ್ದು ಸುದೀಪ್ ಕೂಡ ಅಪ್ ಡೇಟ್ ಪೋಸ್ಟರ್ ಶೇರ್ ಮಾಡಿದ್ದಾರೆ.
ಇನ್ನೂ ‘ಮ್ಯಾಕ್ಸ್’ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಾದ್ ಷಾ ಜೊತೆ ವರಲಕ್ಷ್ಮಿ ಶರತ್ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತ ವಾಗ್ಲೆ ಸೇರಿದಂತೆ ಅನೇಕರು ತೆರೆ ಹಂಚಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ವಿಶೇಷ ಅಂದರೆ ಮ್ಯಾಕ್ಸ್ ಚಿತ್ರದಲ್ಲಿ ಬಹುತೇಕ ಕನ್ನಡಿಗರೇ ಕೆಲಸ ಮಾಡಿದ್ದಾರೆ. ಕೆಂಪೇಗೌಡ ಮತ್ತೆ ಖಾಕಿ ತೊಟ್ಟು ಘರ್ಜಿಸಿದ್ದಾರೆ. ಕಬಾಲಿಯಂತಹ ದೊಡ್ಡ ಸಿನಿಮಾ ನಿರ್ಮಿಸಿರೋ ನಿರ್ಮಾಪಕರಾದ ಕಲೈಪುಲಿ ಥಾನು ತಮ್ಮ ವಿ ಕ್ರಿಯೇಷನ್ಸ್ ಮೂಲಕ ಮ್ಯಾಕ್ಸ್ ಗೆ ಬಂಡವಾಳ ಹೂಡಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಕೂಡ ಜಂಟಿಯಾಗಿ ಸಾಥ್ ನೀಡಿದ್ದು, ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣಗೊಂಡಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಗಸ್ಟ್ ನಲ್ಲಿ ಬೆಳ್ಳಿಭೂಮಿ ಮೇಲೆ ಮ್ಯಾಕ್ಸ್ ಮೆರವಣಿಗೆ ನಡೆಯಲಿದೆ.