- ಗ್ಯಾರಂಟಿ ನ್ಯೂಸ್ ಗೆ “ಮ್ಯಾಕ್ಸ್” ಸಿನಿಮಾದ ಎಕ್ಸ್ ಕ್ಲೂಸಿವ್ ಅಪ್ ಡೇಟ್ ಸಿಕ್ಕಿದೆ.
- ಕಿಚ್ಚ ಸುದೀಪ್ ಅವರ ರಗಡ್ ಲುಕ್ ನಿಂದಲೇ ಸಿನಿಮಾ ಟಾಕ್ ಕ್ರಿಯೇಟ್ ಮಾಡಿತ್ತು .
- ಮ್ಯಾಕ್ಸ್ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ.
ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಕಿಚ್ಚನಿಗೆ ಸೋಷಿಯಲ್ ಮಿಡಿಯಾದಲ್ಲಿ ಮ್ಯಾಕ್ಸ್ ಸಿನಿಮಾದ ಅಪ್ ಡೇಟ್ ಬಗ್ಗೆ ಕೇಳ್ತಾನೇ ಇದ್ದಾರೆ. ಆದ್ರೇ ಸುದೀಪ್ ಮಾತ್ರ ಸ್ವಲ್ಪ ಕಾಯಿರಿ ಅನ್ನೋ ಉತ್ತರವನ್ನ ಅಭಿಮಾನಿಗಳಿಗೆ ಕೊಡ್ತಾಯಿದ್ದಾರೆ. ಸಿನಿಮಾದ “ಡೀ ಮನ್ ಗ್ಲಿಂಪ್ಸ್” ಬಿಟ್ರೇ ಸಿನಿಮಾದ ಬಗ್ಗೆ ಯಾವ ಅಪ್ ಡೇಟ್ ಕೂಡ ಅಭಿಮಾನಿಗಳಿಗೆ ಸಿಕ್ಕಿಲ್ಲ … ಆದ್ರೀಗ ಗ್ಯಾರಂಟಿ ನ್ಯೂಸ್ ಗೆ “ಮ್ಯಾಕ್ಸ್” ಸಿನಿಮಾದ ಎಕ್ಸ್ ಕ್ಲೂಸಿವ್ ಅಪ್ ಡೇಟ್ ಸಿಕ್ಕಿದೆ….
ಮ್ಯಾಕ್ಸ್ ಸಿಕ್ಕಾಪಟ್ಟೇ ನಿರೀಕ್ಷೆ ಹುಟ್ಟು ಹಾಕಿರೋ ಸಿನಿಮಾ. ಕಿಚ್ಚ ಸುದೀಪ್ ಅವರ ರಗಡ್ ಲುಕ್ ನಿಂದಲೇ ಸಿನಿಮಾ ಟಾಕ್ ಕ್ರಿಯೇಟ್ ಮಾಡಿತ್ತು .. ಅಲ್ಲಿಂದ ಸಿನಿಮಾಗೆ ದೊಡ್ಡ ಮಟ್ಟದ ಹೈಪ್ ಕೂಡ ಸಿಕ್ಕಿತ್ತು. ಸಿನಿಮಾದ ಶೂಟಿಂಗ್ ಮಹಾಬಲಿಪುರಂನಲ್ಲಿ ಶುರುವಾಗಿತ್ತು. ಕಿಚ್ಚ ಆ್ಯಂಡ್ ಟೀಮ್ ಕೂಡ ಮಹಾಬಲಿಪುಂನಲ್ಲಿ ಮುಕ್ಕಾಂ ಹಾಕಿದ್ದು ನಿಮಗೆ ಗೊತ್ತೇಯಿದೆ. ಹೇಗಾದ್ರೂ ಮಾಡಿ ಇದೇ ವರ್ಷ ಅಭಿಮಾನಿಗಳಿಗೆ ದರ್ಶನ ಕೊಡಬೇಕು ಅಂತ ಸುದೀಪ್ ಆ್ಯಂಡ್ ಟೀಮ್ ಹರಸಾಹಸ ಪಡ್ತಾಯಿದೆ…
ಸಿನಿಮಾ ಶೂಟಿಂಗ್ ಜೊತೆ ಜೊತೆಗೆ ಪೋಸ್ಟ್ ಪ್ರೋಡಕ್ಷನ್ ಕೆಲಸಗಳನ್ನ ಕೂಡ ಟೀಮ್ ಮಾಡ್ತಾಯಿದೆ. ಈಗ ನಮಗೆ ಸಿಕ್ಕಿರೋ ಎಕ್ಸ್ ಕ್ಲೂಸಿವ್ ಅಪ್ ಡೇಟ್ ಏನಪ್ಪಾ ಅಂದ್ರೇ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ಈಗ ಭರದಿಂದ ಸಾಗುತ್ತಿದೆ.. ವಿಶೇಷ ಏನು ಅಂದ್ರೇ ಕಳೆದ 28 ದಿನಗಳಿಂದ ಕ್ಲೈಮ್ಯಾಕ್ಸ್ ಸನ್ನಿವೇಶಗಳ ಶೂಟಿಂಗ್ ಅನ್ನ ಚಿತ್ರತಂಡ ಮಾಡ್ತಾಯಿದೆ. ಕಿಚ್ಚ ಕೂಡ ಇಪ್ಪತ್ತೆಂಟು ದಿನಗಳಿಂದ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲೇ ಭಾಗಿಯಾಗಿದ್ದಾರೆ. ಇಪ್ಪತ್ತೆಂಟು ದಿನಗಳನ್ನ ಕ್ಲೈಮ್ಯಾಕ್ಸ್ ಗಾಗಿಯೇ ಚಿತ್ರತಂಡ ಮೀಸಲಿಟ್ಟಿದೆ. ಕ್ಲೈಮ್ಯಾಕ್ಸ್ ಯಾವ ಮಟ್ಟಿಗೆ ತೆರೆಯ ಮೇಲೆ ರಾರಾಜಿಸಬಹುದು ಅನ್ನೋದನ್ನ ನೀವೆ ಒಮ್ಮೆ ಊಹೆ ಮಾಡಿಕೊಳ್ಳಿ. ಭರ್ಜರಿ ಆ್ಯಕ್ಷನ್ ಸಿಕ್ವೇನ್ಸ್ ಗಳೇ ಕ್ಲೈಮ್ಯಾಕ್ಸ್ ನಲ್ಲಿ ಇರಬಹದು. ಒಟ್ಟಾರೆಯಾಗಿ ಸದ್ಯ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಚಿತ್ರತಂಡ ಭಾಗಿಯಾಗಿರೋ ಈ ಸುದ್ದಿ ಕಿಚ್ಚನ ಅಭಿಮಾನಿಗಳಿಂತೂ ಖುಷಿ ಕೊಡಲಿದೆ…