ಬಹುತೇಕ 2 ವರ್ಷಗಳ ನಂತ್ರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿಮಾನಿಗಳಿಗೆ ಕಿಚ್ಚನ ದರ್ಶನವಾಗ್ತಾ ಇದೆ. ಬಹುನಿರೀಕ್ಷಿತ ಕಿಚ್ಚ ಸುದೀಪ ಅಭಿನಯದ ಮ್ಯಾಕ್ಸ್ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಕಿಚ್ಚ ಫ್ಯಾನ್ಸ್ ಮಾತ್ರವಲ್ಲದೆ ಕನ್ನಡ ಚಿತ್ರ ಪ್ರೇಮಿಗಳು ಕಾಯ್ತಾ ಇದ್ದ ಬಿಗ್ ಸಿನಿಮಾದ ಟೀಸರ್ ರಿಲೀಸ್ ಚಿತ್ರರಂಗಕ್ಕೆ ಹೊಸ ಜೋಶ್ ತಂದಿದೆ.
ಮ್ಯಾಕ್ಸ್ ಸಿನಿಮಾದ ಮಾಸ್ ಅವತಾರದ ಫಸ್ಟ್ ಲುಕ್ ನೋಡಿದ್ದ ಫ್ಯಾನ್ಸ್ ಗೆ ಈಗ ಮ್ಯಾಕ್ಸ್ ನ ಆಕ್ಷನ್ ದರ್ಶನವಾಗಿದೆ. ತಮಿಳಿನ ವಿಜಯ್ ಕಾರ್ತಿಕೆಯ ನಿರ್ದೇಶನದ ಚೋಚ್ಚಲ ಸಿನಿಮಾ ಮ್ಯಾಕ್ಸ್ ಬಗ್ಗೆ ನಿರೀಕ್ಷೆಗಳು ಹೆಚ್ಚಿದವು. ಅಭಿಮಾನಿಗಳ ನಿರೀಕ್ಷೆಯನ್ನ ಮುಟ್ಟೋದ್ರಲ್ಲಿ, ಟೀಸರ್ ನಲ್ಲಿ ಅಂತೂ ಗೆದ್ದಿದ್ದಾರೆ ನಿರ್ದೇಶಕರು.
ಬಹುತೇಕ ತಮಿಳು ಟೆಕ್ನಿಷಿಯನ್ಸ್ ಕೆಲಸ ಮಾಡಿರೋ ಸಿನಿಮಾದ ತರಗಣದಲ್ಲಿ ಮಾತ್ರ ಕನ್ನಡಿಗರೇ ತುಂಬಿದ್ದರೆ. ಟೀಸರ್ ನಲ್ಲಿ ವರಲಕ್ಷ್ಮಿ ಶರತ್ ಕುಮಾರ್, ಪ್ರಮೋದ್ ಶೆಟ್ಟಿ ಹಾಗೂ ತೆಲುಗು ನಟ ಸುನಿಲ್ ಕಾಣಿಸಿಕೊಂಡಿದ್ದಾರೆ.ಕಿಚ್ಚನ ಸಿನಿಮಾಕ್ಕಾಗಿ ಕಾಯ್ತಿದ್ದ ಅಭಿಮಾನಿಗಳಿಗೆ ಟೀಸರ್ ಶೀಘ್ರದಲ್ಲೇ ಸಿನಿಮಾ ರಿಲೀಸ್ ನ ಮುನ್ಸೂಚನೆ ಕೊಟ್ಟಿದೆ.