- ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಡಾರ್ಲಿಂಗ್ ದಂಪತಿ
- ಬೇಬಿ ಬಂಪ್ ಫೋಟೋಗಳನ್ನ ಶೇರ್ ಮಾಡಿದ ನಟಿ ಮಿಲನ ನಾಗರಾಜ್
ಸ್ಯಾಂಡಲ್ವುಡ್ ನ ಕ್ಯೂಟೆಸ್ಟ್ ಜೋಡಿ ಆಗಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ 14 ಫೆಬ್ರವರಿ 2021ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಲವ್ ಮೊಕ್ಟೈಲ್ ಸಿನಿಮಾದ ಮೂಲಕ ಮೋಡಿ ಮಾಡಿದ್ರು ಈ ಜೋಡಿ. ಮದುವೆಯಾದ ಬಳಿಕ ಇಬ್ಬರು ಸಿನಿಮಾದಲ್ಲಿ ಬ್ಯುಸಿಯಾಗಿದ್ರು. ಮಾರ್ಚ್ 8ರಂದು ಪೋಷಕರಾಗುತ್ತಿರು ಬಗ್ಗೆ ಈ ಜೋಡಿ ಅವರ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಅವರ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹಂಚಿಕೊಂಡಿದ್ರು.
ಚೊಚ್ಚಲ ಮಗು ಆಗಮನವಾಗುತ್ತಿರುವ ಖುಷಿಯ ಬೆನ್ನಲ್ಲೇ ನಟಿ ಮಿಲನ ನಾಗರಾಜ್ ಬೇಬಿ ಬಂಪ್ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಹಳದಿ ಬಣ್ಣದ ಉಡುಪು ಧರಿಸಿ ಇಬ್ಬರು ರೋಮ್ಯಾಂಟಿಕ್ ಪೋಸ್ ಕೊಟ್ಟ ಫೋಟೋಸ್ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ವೈರಲ್ ಆಗಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಕಾಮೆಂಟ್ಸ್ ಮೂಲಕ ಅಭಿನಂದನೆಗಳನ್ನ ತಿಳಿಸುತ್ತಿದ್ದಾರೆ.