ಸ್ಟೈಲಿಷ್ ಕಾಸ್ಟ್ಯೂಮ್ ತೊಟ್ಟು ಸಖತ್ ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸ್ತಿದ್ದಾರೆ. ಇಸ್ಮಾರ್ಟ್ ಚೆಲುವೆ ನಭಾ ನಟೇಶ್ ಫಾರ್ ಎ ಚೇಂಜ್ ಚಾರ್ಲಿ ಚಾಪ್ಲಿನ್ ಲುಕ್ ನಲ್ಲಿ ಕ್ಯಾಮರಾ ಮುಂದೆ ಬಂದಿದ್ದಾರೆ. ಚಿತ್ರ ಜಗತ್ತು ಕಂಡಂತಹ ಲೆಜೆಂಡರಿ ಕಾಮಿಡಿಯನ್ ಕಂ ಫಿಲ್ಮ್ ಮೇಕರ್ ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಚಾಪ್ಲಿನ್ ಸಿಗ್ನೇಚರ್ ಸ್ಟೈಲ್ ನಲ್ಲಿ ಇಸ್ಮಾರ್ಟ್ ಚೆಲುವೆನಾ ಕಂಡು ಅವರ ಅಭಿಮಾನಿಗಳು ಮಾತ್ರವಲ್ಲ, ನೋಡುಗರೆಲ್ಲರೂ ಕೂಡ ಹ್ಯಾಟ್ಸಾಫ್ ಹೇಳ್ತಿದ್ದಾರೆ.
ನಟಿ ನಭಾ ನಟೇಶ್ ಶೃಂಗೇರಿ ಶಾರದೆಯ ಮಡಿಲಲ್ಲಿ ಬೆಳೆದವರು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ವಜ್ರಕಾಯ ಸಿನಿಮಾಗೆ ಬಣ್ಣ ಹಚ್ಚಿ ಸಿನಿ ಕರಿಯರ್ ಶುರು ಮಾಡಿದರು. ಅನಂತರ ಪರಭಾಷೆಗೆ ಹಾರಿದ ನಭಾಗೆ ಇಸ್ಮಾರ್ಟ್ ಶಂಕರ್ ಚಿತ್ರ ಕೈ ಹಿಡಿತು. ಇಲ್ಲಿಂದ ನಭಾ ಅದೃಷ್ಟ ಖುಲಾಯಿಸಿ ಈಗ ಪರಭಾಷೆಯಲ್ಲೇ ಸೆಟಲ್ ಆಗಿದ್ದಾರೆ.
ಕಾರು ಅಪಘಾತಕ್ಕೊಳಗಾಗಿ 2 ವರ್ಷ ಬ್ರೇಕ್ ಪಡೆದಿದ್ದ ನಟಿ ನಭಾ ನಟೇಶ್ ಈಗ ಬಿಗ್ ಕಂಬ್ಯಾಕ್ ಮಾಡಿದ್ದಾರೆ. ಸ್ವಯಂಭು ಹಾಗೂ ʻಡಾರ್ಲಿಂಗ್ʼ ಸಿನಿಮಾಗಳಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಈಎರಡು ಸಿನಿಮಾಗಳು ಅದ್ದೂರಿಯಾಗಿ ಲಾಂಚ್ ಆಗಿವೆ.
ಡಾರ್ಲಿಂಗ್ ಚಿತ್ರಕ್ಕೆ ಹನುಮಾನ್ ಪ್ರೊಡ್ಯೂಸರ್ ಬಂಡವಾಳ ಹೂಡಿದ್ದು, ಬಳಗಂ ಖ್ಯಾತಿಯ ಪ್ರಿಯದರ್ಶಿ ನಾಯಕನಾಗಿದ್ದಾರೆ. ಇನ್ನೂ ಸ್ವಯಂಭು ಸಿನಿಮಾದಲ್ಲಿ ತೆಲುಗು ನಿಖಿಲ್ ಹಾಗೂ ನಭಾ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ…