- ನಾಗಾರ್ಜುನ ಅವರ ಜತೆ ಸೆಲ್ಪಿ ಕೇಳಲು ಬಂದ ಅಭಿಮಾನಿ ತಳ್ಳಿದ ನಟ
- ಅಭಿಮಾನಿಯನ್ನು ಭೇಟಿಯಾಗಿ ಕ್ಷಮೆಯಾಚಿಸಿದ ನಟ ನಾಗಾರ್ಜುನ
ತೆಲುಗಿನ ಖ್ಯಾತ ನಟ ನಾಗಾರ್ಜುನ ಅವರ ಬಾಡಿಗಾರ್ಡ್ ಜತೆಗೆ ವಿಮಾನ ನಿಲ್ದಾಣದಿಂದ ಹೊರಬರತ್ತಿದ್ದ ವೇಳೆ ಅಭಿಮಾನಿಯೊಬ್ಬ ನಾಗಾರ್ಜುನ ಅವರ ಜತೆ ಸೆಲ್ಪಿ ಕೇಳಲು ಬಂದಾಗ ಅವರ ಬಾಡಿಗಾರ್ಡ್ ಆತನನ್ನು ದೂರಕ್ಕೆ ತಳ್ಳಿದ್ದಾನೆ. ಆತ ಬೀಳುತ್ತಿದ್ದಂತೆ ಪಕ್ಕದಲ್ಲೇ ಇದ್ದ ಇತರರು ಹಿಡಿದುಕೊಂಡಿದ್ದಾರೆ. ಈ ವಿಡೀಯೊ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಈ ವಿಡಿಯೋ ವೈರಲ್ ಆಗ್ತಿದ್ದಂತೆ ನಟ ನಾಗಾರ್ಜುನಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ. ಇದಾದ ಬಳಿಕ ನಟ ನಾಗಾರ್ಜುನ ಕ್ಷಮೆ ಕೇಳಿದ್ದಾರೆ. ” ಇದು ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದಿತ್ತು, ಆ ವ್ಯಕ್ತಿಗೆ ಕ್ಷಮೆಯಾಚಿಸುತ್ತೇನೆ. ಮುಂದೆ ಹೀಗಾಗದಂತೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ” ಎಂದು ಬರೆದುಕೊಂಡಿದ್ದಾರೆ.
ಜೂನ್ 26ರಂದು ವಿಶೇಷ ಚೇತನ ಅಭಿಮಾನಿಯನ್ನು ಭೇಟಿಯಾಗಿ ಅಪ್ಪಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ನಿನ್ನ ತಪ್ಪಲ್ಲ, ನನ್ನ ತಪ್ಪು ಕ್ಷಮಿಸಿಬಿಡು. ನನ್ನದು ತಪ್ಪು ಎಂದು ಫ್ಯಾನ್ ಕ್ಷಮೆಯಾಚಿಸಿದ್ದಾರೆ. ಈಗ ಇವರಿಬ್ಬರು ಭೇಟಿಯಾದ ವಿಡಿಯೋ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ.