ನಂದಮೂರಿ ತಾರಕ ರಾಮಾರಾವ್ ತೆಲುಗು ಚಿತ್ರರಂಗದ ಚರಿತ್ರೆ. ಸಿನಿಮಾರಂಗದಲ್ಲಿ ಮಾತ್ರವಲ್ಲದೇ ರಾಜಕೀಯ ಲೋಕದಲ್ಲೂ ಇತಿಹಾಸ ಸೃಷ್ಟಿಸಿದ ನಂದಮೂರಿ ತಾರಕ್ ರಾಮ್ ತೆಲುಗು ಮಂದಿಯ ಪಾಲಿಗೆ ಆರಾಧ್ಯ ದೈವವೇ ಆಗಿದ್ದರು. ಇಂದು ಅವರ 101ನೇ ಜನ್ಮಜಯಂತಿ. ಈ ಹಿನ್ನಲೆ ಎನ್ಟಿಆರ್ ಕುಟುಂಬಸ್ಥರು, ಮೊಮ್ಮಕ್ಕಳಾದ ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ಸಹೋದರ ಕಲ್ಯಾಣ್ ರಾಮ್ ಪುಣ್ಯಭೂಮಿಗೆ ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ತಾರಕ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿಯೂ ಅಪಾರ ಜನಮನ್ನಣೆ ಗಳಿಸಿದ್ದ ನಂದಮೂರಿ ತಾರಕ ರಾಮಾರಾವ್, ಸರಿಸುಮಾರು 300 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು. ತಮ್ಮ ಸಿನಿಮಾ ಜರ್ನಿಯಲ್ಲಿ 3 ನ್ಯಾಷನಲ್ ಅವಾರ್ಡ್ ಗಳನ್ನ ಮುಡಿಗೇರಿಸಿಕೊಂಡಿದ್ದರು. ರಾಷ್ಟ್ರಪತಿ ಪ್ರಶಸ್ತಿಗೂ ಭಾಜನರಾಗಿದ್ದರು. ಇನ್ನೂ ರಾಜಕೀಯ ಲೋಕದಲ್ಲೂ ನಂದಮೂರಿ ತಾರಕ ರಾಮಾರಾವ್ ಸಂಚಲನವನ್ನೇ ಸೃಷ್ಟಿಸಿದ್ದರು. ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸುಮಾರು ಏಳು ವರ್ಷಗಳ ಕಾಲ ಆಡಳಿತ ನಡೆಸಿದ ಇವರು, ಮೂರು ಭಾರಿ ಜನರಿಂದ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದರು.
ಇವರ ಕಾರ್ಯವೈಖರಿನಾ ಈ ಕ್ಷಣಕ್ಕೂ ನೆನಪಿಸಿಕೊಳ್ಳುವ ತೆಲುಗು ಮಂದಿ, ನಂದಮೂರಿ ತಾರಕ ರಾಮಾ ರಾವ್ ಅವ್ರನ್ನ ದೇವರಂತೆ ಆರಾಧಿಸ್ತಾರೆ. ಅವರ ಮಕ್ಕಳಿಗೂ ಮತ್ತು ಮೊಮ್ಮಕಳಿಗೂ ಅದೇ ಪ್ರೀತಿನಾ ತೋರಿಸ್ತಿದ್ದಾರೆ. ಟಿಟೌನ್ ಲಯನ್ ಅಂತನೇ ಕರೆಸಿಕೊಳ್ಳುವ ಬಾಲಯ್ಯ ಅವರಿಗೆ, ಯಂಗ್ ಟೈಗರ್ ಅಂತನೇ ಜನಪ್ರಿಯತೆ ಗಳಿಸಿರುವ ಜೂನಿಯರ್ ಎನ್ಟಿಆರ್ಗೆ ಕುಲಕೋಟಿ ಭಕ್ತರಿದ್ದಾರೆ. ಇವರಿಬ್ಬರಿಗೆ ಅಭಿಮಾನಿ ದೇವರುಗಳು ತಮ್ಮ ಗರ್ಭಗುಡಿಯಲ್ಲೇ ಗುಡಿಕಟ್ಟಿ ಪೂಜಿಸ್ತಿದ್ದಾರೆ. ಈ ಇಬ್ಬರು ನಂದಮೂರಿ ತಾರಕ ರಾಮಾರಾವ್ ಅವರ ಹೆಸರನ್ನ ಉಳಿಸುತ್ತಾ, ಆ ಕುಟುಂಬದ ಕೀರ್ತಿ ಪತಾಕೆಯನ್ನ ಎತ್ತಿಹಿಡಿಯುತ್ತಿದ್ದಾರೆ.