ಕನ್ನಡ ಕಿರುತೆರೆಯಲ್ಲಿ ಗೊಂಬೆ, ಬಿಗ್ಬಾಸ್ ಬೆಡಗಿ ನೇಹಾ ಗೌಡ ಮನೆಯಲ್ಲಿ ಸಂತಸ ಮನೆ ಮಾಡಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಕನ್ನಡಿಗರ ಮನಸ್ಸಲ್ಲಿ ಉಳಿದುಕೊಂಡಿರೋ ನೇಹಾ ಗೌಡ ದಂಪತಿ ಜೂನ್ 1ರಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದರು. ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮದುವೆಯಾಗಿ 6 ವರ್ಷಗಳ ಬಳಿಕ ನೇಹಾ ಹಾಗೂ ಚಂದನ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸದ್ಯ ನೇಹಾ ಗೌಡ ದಂಪತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬ್ಯೂಟಿಫುಲ್ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನೇಹಾ ಗೌಡ ಬೇಬಿ ಬಂಪ್ ಕಾಣಿಸುತ್ತಿದೆ. ಹಸಿರು ಬಣ್ಣದ ಸೀರೆಯಲ್ಲಿ ನಟಿ ನೇಹಾ ಗೌಡ ಕಾಣಿಸಿಕೊಂಡರೆ, ಇತ್ತ ಕಿರುತೆರೆ ನಟ ಚಂದನ್ ಗೌಡ ಪಂಚೆಯನ್ನು ತೊಟ್ಟುಕೊಂಡು ಮುದ್ದಾದ ಪತ್ನಿಗೆ ಮುತ್ತು ಕೊಡುತ್ತಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಫೋಟೋ ನೋಡಿದ ನೆಟ್ಟಿಗರು, ನಮ್ಮ ಸುಂದರಿ ನೇಹಾ, ನೋಡುತಾ ನೋಡುತಾ.. ನಿಮ್ಮನೆ ನೋಡುತಾ.. ಹೀಗೆ ಕಳೆಯಲಿ ಈ ದಿನ, ಕ್ಯೂಟ್ ಬೇಬಿ ಬಂಪ್ ಅಂತಾ ಕಾಮೆಂಟ್ ಮಾಡಿದ್ದಾರೆ.
ನೇಹಾ ಗೌಡ ಅವರು ಲಕ್ಷ್ಮೀ ಬಾರಮ್ಮ ಸೀರಿಯಲ್ನಲ್ಲಿ ಗೊಂಬೆ ಪಾತ್ರದಲ್ಲಿ ಅಭಿನಯಿಸಿದವರು. ಗೊಂಬೆ ಪಾತ್ರದ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ನಟಿ ನೇಹಾ ಗೌಡ ಹಾಗೂ ಚಂದನ್ ಗೌಡ ಫೆಬ್ರವರಿ 18, 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಮದುವೆಯಾಗಿ 6 ವರ್ಷಗಳ ಬಳಿಕ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ನೇಹಾಗೌಡ ಅವರ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಇಂದು ನೇಹಾಗೌಡರಿಗೆ ಸಂಪ್ರದಾಯಬದ್ಧವಾಗಿ ಸೀಮಂತ ಶಾಸ್ತ್ರ ಮಾಡಲಾಗಿದೆ. ನೇಹಾಗೌಡ ಸೀಮಂತ ಶಾಸ್ತ್ರಕ್ಕೆ ಚಿತ್ರರಂಗದ ಹಲವು ನಟಿಯರು ಬಂದು, ಹರಸಿ ಹಾರೈಸಿದರು. ನೇಹಾಗೌಡ ಸೀಮಂತ ಕಾರ್ಯಕ್ಕೆ ಚೈತ್ರಾ ವಾಸುದೇವನ್, ಅನುಪಮಾ ಗೌಡ, ಇಷಿತಾ ಮುರುಗಾ, ನಟಿ ಸೋನುಗೌಡ ಹಾಗೂ ಹಿರಿಯ ನಟಿ ತಾರಾ ಅನುರಾಧ ಅವರು ಬಂದು ನೇಹಾ ಗೌಡಗೆ ಹರಸಿ ಹಾರೈಸಿದರು. ಮನೆಯಲ್ಲಿ ಬೇಗೆ ಪುಟ್ಟ ಹೆಜ್ಜೆಗಳ ಗುರುತು ಮೂಡಲಿ ಎಂದು ಶುಭಕೋರಿದರು.