ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಟ ದರ್ಶನ್ ಸೇರಿದಂತೆ 17 ಮಂದಿ ಜೈಲು ಪಾಲಾಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಕೇಸ್ ಚಾರ್ಜ್ ಶೀಟ್ ಸಲ್ಲಿಕೆ ಕುತೂಹಲದ ನಡುವೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ವೊಂದು ವೈರಲ್ ಆಗುತ್ತಿದೆ.
ಅತ್ತ ಬೇಲ್ ರಿಜಿಕ್ಟ್ ಆಗಿ ಟೆನ್ಷನ್ನಲ್ಲಿರುವ ಪವಿತ್ರ ಗೌಡ ನೆನೆದು ಪುತ್ರಿಯ ಭಾವುಕ ಪೋಸ್ಟ್ ಹಾಕಿದ್ದಾರೆ. ನಿನ್ನನ್ನು ತಾಯಿಯಾಗಿ ಪಡೆಯುವುದಕ್ಕೆ ಪುಣ್ಯ ಮಾಡಿದ್ದೀನಿ ಅಂತ ಪುತ್ರಿ ಖುಷಿ ಪೋಸ್ಟ್ ಹಾಕಿದ್ದಾರೆ. ಈ ಬಗ್ಗೆ ಪವಿತ್ರಾ ಗೌಡ ಪುತ್ರಿ ಖುಷಿ ಗೌಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತಾಯಿಯ ಬಗ್ಗೆ ಬರೆದುಕೊಂಡಿದ್ದಾರೆ.
ಈ ಬಗ್ಗೆ ಬರೆದ ಖುಷಿ ಗೌಡ, ಯಾವುದೇ ಪರಿಸ್ಥಿತಿಯಲ್ಲಿದ್ದರೂ ಅವಳು ನನಗೆ ಸಹಾಯ ಮಾಡುತ್ತಾಳೆ. ನನಗೆ ಗೊತ್ತು ಈ ದಿನದಲ್ಲಿ ನನಗೆ ಏನೇ ಬೇಕಿದ್ದರೂ ಆಕೆ ನನ್ನ ಜೊತೆಗೆ ಇದ್ದಾಳೆ ಎಂದು. ಹೀಗಾಗಿಯೇ ಆಕೆಯನ್ನು ಬೆಸ್ಟ್ ಅಮ್ಮ ಎಂದು ಕರೆಯುವುದು ಅಲ್ಲದೆ, ಆಕೆಯನ್ನು ತಾಯಿಯಾಗಿ ಪಡೆಯುವುದಕ್ಕೆ ಅದೃಷ್ಟಶಾಲಿ ಮಾಡಿದ್ದೀನಿ ಎಂದು ಖುಷಿ ಬರೆದುಕೊಂಡಿದ್ದಾಳೆ.
ಇನ್ನು ತನ್ನ ತಾಯಿ ಸ್ಥಾಪನೆ ಮಾಡಿದ ರೆಡ್ ಕಾರ್ಪೆಟ್ 777 ಡಿಸೈನರ್ ಸ್ಟುಡಿಯೋವನ್ನು ಸದ್ಯ ಪುತ್ರಿ ಖುಷಿ ನಡೆಸಿಕೊಂಡು ಹೋಗುತ್ತಿದ್ದಾಳೆ. ಸದ್ಯ ಮುಂಬರುವ ಗೌರಿ ಗಣೇಶ್ ಹಬ್ಬಕ್ಕೆ ತಮ್ಮ ಶಾಪ್ಗೆ ಬಂದ ಹೊಸ ಕಲೆಕ್ಷನ್ ಆಫರ್ ಬಗ್ಗೆ ರೆಡ್ ಕಾರ್ಪೆಟ್ 777 ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾಳೆ.