ಪವನ್ ಕಲ್ಯಾಣ್ ಅವರು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಆಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಗೆಲುವು ಕಂಡಿದೆ. ರಾಜಕೀಯದ ಜೊತೆ ಪವನ್ ಕಲ್ಯಾಣ್ ಅವರು ಸಿನಿಮಾ ಕೆಲಸಗಳಲ್ಲೂ ಬ್ಯುಸಿ ಇದ್ದಾರೆ. ಈಗ ಅವರು ಖ್ಯಾತ ಆ್ಯಂಕರ್ ಜೊತೆ ವಿಶೇಷ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಅದು ಯಾವ ಸಿನಿಮಾ, ಇದರ ಶೂಟ್ ಯಾವಾಗ ನಡೆಯಲಿದೆ ಎನ್ನುವ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಟಾಲಿವುಡ್ನ ಆ್ಯಂಕರ್ ಅನಸೂಯ ಅವರು ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಅವರು ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಕೇವಲ ಆ್ಯಂಕರಿಂಗ್ ಮಾತ್ರವಲ್ಲದೆ ಅವರು ನಟನೆ ಮೂಲಕವೂ ಗುರುತಿಸಿಕೊಂಡಿದ್ದಾರೆ. ಈಗ ಅವರು ಟಿವಿ ಶೋ ಒಂದರ ವೇದಿಕೆ ಮೇಲೆ ಈ ಬಗ್ಗೆ ಮಾತನಾಡಿದ್ದಾರೆ.