ಒಂದ್ಕಡೆ ಲೋಕಸಭಾ ಚುನಾವಣಾ ಅಬ್ಬರ ಜೋರಾಗಿದೆ.. ಆಂಧ್ರ ಸೇರಿದಂತೆ 4 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಾಗೂ ಲೋಕಸಭಾ ಚುನಾವಣೆ ಜೊತೆಗೆ ಏಕಕಾಲಕ್ಕೆ ನಡೀತಿದೆ. ಆಂಧ್ರ ರಾಜಕಾರಣದಲ್ಲಿ ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮದೇ ಛಾಪು ಮೂಡಿಸಿದ್ದಾರೆ.. ಈ ಬಾರಿ ಮುಖ್ಯಮಂತ್ರಿ ಜಗನ್ ಅವರನ್ನ ಸೋಲಿಸಲೇ ಬೇಕು ಅಂತ ಪವನ್ ಪಣತೊಟ್ಟಿದ್ದಾರೆ. ಜನಸೇನಾ ಪಕ್ಷದಿಂದ ಕಣಕ್ಕೆ ಇಳಿದಿರೋ ಪವನ್ ಕಲ್ಯಾಣ್ ತಮ್ಮದೇ ಸ್ಟೈಲ್ ನಲ್ಲಿ , ಸಿನಿಮ್ಯಾಟಿಕ್ ರೀತಿಯಲ್ಲೂ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ… ಇದರ ನಡುವೆ ಸಿನಿಮಾಗಳ ಮೂಲಕವೂ ಪ್ರಚಾರ ಮಾಡ್ತಾ ಇದ್ದಾರೆ ಅನ್ನೋ ಆರೋಪವೂ ಕೂಡ ಕೇಳಿ ಬರ್ತಿದೆ…
ಹೌದು ..ತಮ್ಮ ಸಿನಿಮಾಗಳನ್ನ ಕೂಡ ಪವನ್ ಕಲ್ಯಾಣ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ತಾವು ನಟಿಸುತ್ತಿರುವ ಸಿನಿಮಾಗಳ ಟೀಸರ್ “ಅಥ್ವಾ” ಟ್ರೈಲರ್ ರಿಲೀಸ್ ಮಾಡಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇತ್ತೀಚೆಗೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಟೀಸರ್ ಬಂದಿತ್ತು. ಆ ಟೀಸರ್ ನಲ್ಲಿದ್ದ ಕೆಲ ಡೈಲಾಗ್ಸ್ ಬಗ್ಗೆ ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು. ಇದೀಗ ಮತ್ತೊಂದು ಸಿನಿಮಾ ಟೀಸರ್ ರಿಲೀಸ್ ಆಗಿದೆ….