- ಒಬ್ಬ ದೇವರನ್ನ ಮದುವೆ ಆಗಿ ಅವರ ಅಂತರಂಗ ತಿಳಿಯದೆ ಹೊರಟು ಹೋದ್ರಿ
- ಅಭಿಮಾನಿಯೊಬ್ಬ ಕಾಮೆಂಟ್ಗೆ ರೇಣು ದೇಸಾಯಿ ಪ್ರತಿಕ್ರಿಯೆ
- ಅವರು ನನ್ನ ಬಿಟ್ಟು ಬೇರೆ ಮದುವೆ ಆದ್ರು.. ಆದ್ರೆ ನಾನಲ್ಲ
ನಟಿ ರೇಣು ದೇಸಾಯಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಪವನ್ ಕಲ್ಯಾಣ್ ಹಾಗೂ ರೇಣು ದೇಸಾಯಿ ಇಬ್ಬರು ತೆಲುಗು ಸಿನಿಮಾ ಜಾನಿ ಹಾಗೂ ಬದ್ರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟಿಗೆ ನಟಿಸಿದ ಇವರು 28 January 2009 ರಲ್ಲಿ ಮದುವೆಯಾದರು. ಇವರಿಗೆ ಅಕಿರ ನಂದನ್ ಹಾಗೂ ಆದ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. ನಂತರ ಈ ದಂಪತಿ ವಿಚ್ಚೇದನ ಪಡೆದರು.
ರೇಣು ದೇಸಾಯಿ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇವ್ರು ಅವರ ಮಕ್ಕಳು ಅಕಿರಾ ಹಾಗೂ ಆದ್ಯಾ ಕುರಿತು ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಇತ್ತೀಚಿಗೆ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಅಕಿರಾ ಹಾಗೂ ಆದ್ಯಾ ಪವನ್ ರವರ ಜೊತೆ ಮೋದಿ ಅವರನ್ನು ಭೇಟಿ ಮಾಡಿದ್ರು. ಹೀಗೆ ಅನೇಕ ವಿಷಯಗಳನ್ನು ನಟಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿರುತ್ತಾರೆ.
ರೇಣು ದೇಸಾಯಿ ತಮ್ಮ ಮನೆಯಲ್ಲಿ ನಡೆದ ಹೋಮಾ ಕುರಿತು ಪೋಸ್ಟ್ ಮಾಡಿದ್ದಾರೆ. ನನ್ನ ಕೈಯಾರೆ ಪ್ರಸಾದ ತಯಾರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪವನ್ ಕಲ್ಯಾಣ್ ಅಭಿಮಾನಿಯೊಬ್ಬರು , ಇದು ರೇಣು ದೇಸಾಯಿಗೆ ಬೇಸರ ತಂದಿದೆ. ಅಭಿಮಾನಿಯೊಬ್ಬ ವದಿನಗರು ( ಅತ್ತಿಗೆ ) ನೀವು ಕೆಲವು ವರ್ಷಗಳು ತಾಳ್ಮೆಯಿಂದ ಇದ್ದಿದ್ರೆ ಚನ್ನಾಗಿರ್ತಿತ್ತು. ನೀವು ಒಬ್ಬ ದೇವರನ್ನ ಮದುವೆ ಆಗಿ ಅವರ ಅಂತರಂಗ ತಿಳಿಯದೆ ಹೊರಟು ಹೋದ್ರಿ. ಆದ್ರೆ ಇಂದು ಅವರ ಬೆಲೆ ನಿಮಗೆ ತಿಳಿದಿದೆ. ವಿಧಿ ಎಲ್ಲವನ್ನು ಡಿಸೈಡ್ ಮಾಡುತ್ತೆ. ಮಕ್ಕಳು ಅಣ್ಣನ ಜೊತೆ ಇದ್ದಾರೆ ಅಷ್ಟು ಸಾಕು. ವೀ ಆರ್ ಮಿಸ್ಸಿಂಗ್ ಯು ವದಿನ ಎಂದು ಕಾಮೆಂಟ್ ಮಾಡಿದ್ದಾರೆ.
ಇದಕ್ಕೆ ರೇಣು ದೇಸಾಯಿ ಪ್ರತಿಕ್ರಿಯಿಸಿದ್ದಾರೆ. ನಿಮಗೆ ಸ್ವಲ್ಪ ಆದ್ರೂ ಬುದ್ದಿ ಇದ್ರೆ ಇತರ ಹೇಳೋದು ನಿಲ್ಸಿ… ಅವರು ನನ್ನ ಬಿಟ್ಟು ಬೇರೆ ಮದುವೆ ಆದ್ರು.. ಆದ್ರೆ ನಾನಲ್ಲ. ದಯವಿಟ್ಟು ಈ ತರ ಕಾಮೆಂಟ್ಸ್ ಮೂಲಕ ನನಗೆ ಹಿಂಸೆ ಮಾಡಬೇಡಿ ಎಂದಿದ್ದಾರೆ.