ಕೈದಿ ನಂಬರ್ 6106 ಸಿನಿಮಾ ಟೈಟಲ್ ಹೆಸರಾದ ಬೆನ್ನಲ್ಲೇ ಈಗ ಸ್ಯಾಂಡಲ್ವುಡ್ನಲ್ಲಿ “ಪೆನ್ ಡ್ರೈವ್” ಅನ್ನೋ ಸಿನಿಮಾ ಟೈಟಲ್ ಸದ್ದು ಮಾಡ್ತಿದೆ. ಡೆವಿಡ್ ಸೆಬಾಸ್ಟಿನ್ ನಿರ್ದೇಶನದ ಹಾಗೂ ಬಿಗ್ ಬಾಸ್ ನಿಂದ ಬೆಂಕಿ ತನಿಷಾ ಅಂತ್ಲೇ ಫೇಮಸ್ಸಾಗಿರುವ ತನಿಷಾ ಕುಪ್ಪಂಡ ಅಭಿನಯಿಸಿರುವ ಪೆನ್ ಡ್ರೈವ್ ಚಿತ್ರ ಸದ್ದಿಲ್ಲದೇ ಬಹುತೇಕ ಶೂಟಿಂಗ್ ಮುಗಿಸಿದೆ. ರಾಜಕೀಯ ರಂಗ ಹಾಗೂ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿ ಮಾಡಿರುವ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೈವ್ ಪ್ರಕರಣ ಇದೀಗ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡಲು ಹೊರಟಿರುವುದು ಕುತೂಕಲಕಾರಿಯಾಗಿದೆ.