ಪವನ್ ಕಲ್ಯಾಣ್ ಅವರಿಗೆ ಜನ್ಮದಿನದಂದು ಅಂದರೆ ಇಂದು ಬ್ಯಾಡ್ನ್ಯೂಸ್ ಸಿಕ್ಕಿದೆ. ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಭಾಗದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಈ ಕಾರಣದಿಂದಲೇ ಪವನ್ ಕಲ್ಯಾಣ್ ಅವರು ಬರ್ತ್ಡೇ ಆಚರಿಸಿಕೊಳ್ಳೋದಕ್ಕೆ ಬ್ರೇಕ್ ಹಾಕಿದ್ದಾರೆ. ಅವರ ಮುಂದಿನ ಸಿನಿಮಾಗಳಿಂದ ಯಾವುದೇ ಅಪ್ಡೇಟ್ ಕೊಡದೇ ಇರಲು ಸಿನಿಮಾ ತಂಡಗಳು ನಿರ್ಧರಿಸಿವೆ. ಇದು ಅವರ ಫ್ಯಾನ್ಸ್ಗೆ ಬೇಸರ ಮೂಡಿಸಿದೆ.
ಸಾಮಾನ್ಯವಾಗಿ ಬರ್ತ್ಡೇ ದಿನ ಹೊಸ ಹೊಸ ಅಪ್ಡೇಟ್ಗಳನ್ನು ನೀಡುವ ಕೆಲಸ ಸಿನಿಮಾ ತಂಡಗಳಿಂದ ಆಗುತ್ತವೆ. ಅದೇ ರೀತಿ ‘ಹರಿಹರ ವೀರ ಮಲ್ಲು’, ‘ಒಜಿ’, ‘ಉಸ್ತಾದ್ ಭಗತ್ ಸಿಂಗ್’ ತಂಡಗಳು ಸೆಪ್ಟೆಂಬರ್ 2ರಂದು ಪೋಸ್ಟರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದ್ದವು. ಆದರೆ, ಈ ಯೋಜನೆ ಕ್ಯಾನ್ಸಲ್ ಆಗಿದೆ.
‘ಸಾಕಷ್ಟು ಮಳೆ ಹಾಗೂ ಪ್ರವಾಹದ ಕಾರಣ ಪವನ್ ಕಲ್ಯಾಣ್ ಮುಂದಿನ ಸಿನಿಮಾಗಳ ಬಗ್ಗೆ ಯಾವುದೇ ಅಪ್ಡೇಟ್ ಇರುವುದಿಲ್ಲ. ನಿಮಗೆ ಪರಿಸ್ಥಿತಿ ಅರ್ಥ ಆಗುತ್ತದೆ ಎಂದುಕೊಂಡಿದ್ದೇನೆ. ದಯವಿಟ್ಟು ಸಹಕರಿಸಿ’ ಎಂದು ಪವನ್ ಕಲ್ಯಾಣ್ ತಂಡದ ಕಡೆಯಿಂದ ಮಾಹಿತಿ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರ ಹೆಚ್ಚಿಸಿದೆ.
ಪವನ್ ಕಲ್ಯಾಣ್ ಜನ್ಮದಿನವನ್ನು ಫ್ಯಾನ್ಸ್ ಯಾವಾಗಲೂ ಸಂಭ್ರಮದಿಂದ ಆಚರಿಸುತ್ತಾರೆ. ಈ ಬಾರಿ ಪವನ್ ಅವರು ಉಪಮುಖ್ಯಮಂತ್ರಿ ಕೂಡ ಆಗಿದ್ದರು. ಹೀಗಾಗಿ ಸೆಲೆಬ್ರೇಷನ್ ಜೋರಾಗಿಯೇ ಇರಬೇಕಿತ್ತು. ಆದರೆ, ಪವನ್ ಕಲ್ಯಾಣ್ ಅವರು ಈ ಬಾರಿ ಸೆಲೆಬ್ರೇಷನ್ಗೆ ಬ್ರೇಕ್ ಹಾಕಿದ್ದಾರೆ.