ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಕೊನೆಗೂ ಸಿಹಿಸುದ್ದಿ ಕೊಟ್ಟಿದ್ದಾರೆ. ಡಾರ್ಲಿಂಗ್ ಹಾಕ್ಕೊಂಡಿರೋ ಪೋಸ್ಟ್ ನೋಡಿದರೆ, ಇಷ್ಟು ದಿನ ಅಭಿಮಾನಿಗಳು ಸೇರಿದಂತೆ ಆಪ್ತರು, ಸ್ನೇಹಿತರು ಎಲ್ಲರೂ ಕೇಳ್ತಿದ್ದ ಪ್ರಶ್ನೆಗೆ ಉತ್ತರ ಕೊಡಲು ಹೊರಟಂತಿದೆ. ಬ್ಯಾಚುಲರ್ ಲೈಫ್ಗೆ ಗುಡ್ ಬೈ ಹೇಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ. ‘ಡಾರ್ಲಿಂಗ್ಸ್, ಕೊನೆಗೂ ಒಬ್ಬ ವಿಶೇಷ ವ್ಯಕ್ತಿ ನಮ್ಮ ಜೀವನಕ್ಕೆ ಬರಲಿದ್ದಾರೆ. ಸ್ವಲ್ಪ ಕಾಯಿರಿ’ ಅಂತಾ ಪ್ರಭಾಸ್ ಪೋಸ್ಟ್ ಮಾಡಿದ್ದಾರೆ.
ಅಷ್ಟಕ್ಕೂ, ಪ್ರಭಾಸ್ ಜೀವನದಲ್ಲಿ ಬರ್ತಿರುವ ಆ ಸ್ಪೆಷಲ್ ವ್ಯಕ್ತಿ ಯಾರು? ಈ ಗುಟ್ಟನ್ನ ರೆಬೆಲ್ ಸ್ಟಾರ್ ಪ್ರಭಾಸ್ ಬಿಟ್ಟುಕೊಟ್ಟಿಲ್ಲ. ಆದರೆ, ಲೈಫ್ನಲ್ಲಿ ಸ್ಪೆಷಲ್ ಪರ್ಸನ್ ಎಂಟ್ರಿಯಾಗ್ತಿದೆ ಅಂತ ಪೋಸ್ಟ್ ಹಾಕ್ಕೊಂಡಿರೋದ್ರಿಂದ ಪ್ರಭಾಸ್ ಮದ್ವೆಗೆ ಒಪ್ಪಿಕೊಂಡರಾ? ಸಪ್ತಪದಿ ತುಳಿಯಲು ಸಾಹೋ ಹೀರೋ ಸಜ್ಜಾದರಾ? ಹೀಗೊಂದು ಕುತೂಹಲವಂತೂ ಎಲ್ಲರಲ್ಲೂ ಮೂಡಿದೆ. ಆ ಕ್ಯೂರಿಯಾಸಿಟಿಗೆ ಖುದ್ದು ಪ್ರಭಾಸ್ ಬ್ರೇಕ್ ಹಾಕೋವರೆಗೂ ಕಾಯ್ಬೇಕು. ಆದರೆ, ಅವರ ಫ್ಯಾನ್ಸ್, ಕೆಲ ನೆಟ್ಟಿಗರು ಡಾರ್ಲಿಂಗ್ ಜೀವನದಲ್ಲಿ ಎಂಟ್ರಿಕೊಡ್ತಿರೋದು ಸ್ವೀಟಿನೇ ಇರಬೇಕು ಅಂತ ಕಮೆಂಟ್ ಮಾಡ್ತಿದ್ದಾರೆ.
ಪ್ರಭಾಸ್ ಹಾಗೂ ಸ್ವೀಟಿ ಅನುಷ್ಕಾ ರಿಯಲ್ ಲೈಫ್ನಲ್ಲಿ ಒಂದಾಗ್ಬೇಕು ಅನ್ನೋದು ಇವರಿಬ್ಬರ ಅಭಿಮಾನಿಗಳ ಮಹಾಕನಸು. ಆ ಕನಸನ್ನ ಈ ಜೋಡಿ ಈಡೇರಿಸುತ್ತೋ? ಇಲ್ಲವೋ ಗೊತ್ತಿಲ್ಲ. ಆದರೆ, ಈ ಜೋಡಿ ನಡುವೆ ಸುಮಧುರ ಸ್ನೇಹವಂತೂ ಇದೆ. ಒಟ್ಟಿಗೆ ಕಾಣಿಸಿಕೊಳ್ಳಲ್ಲ ಅನ್ನೋದನ್ನ ಬಿಟ್ಟರೆ ಪರಸ್ಪರರ ಸಿನಿಮಾಗಳು ಸೆಟ್ಟೇರಿದಾಗ, ಟ್ರೇಲರ್ , ಸಾಂಗ್ಸ್ ಬಿಡುಗಡೆಗೊಂಡಾಗ ಸೋಷಿಯಲ್ ಮೀಡಿಯಾದಲ್ಲಿ ಶುಭಕೋರುತ್ತಾರೆ. ಹುಟ್ಟುಹಬ್ಬದ ಸಂದರ್ಭದಲ್ಲಂತೂ ಪ್ರಭಾಸ್, ಸ್ವೀಟಿ ಅಂತಲೇ ಟ್ವೀಟ್ ಮಾಡಿ ವಿಶ್ ಮಾಡ್ತಾರೆ.ಅಷ್ಟಕ್ಕೆ ಇವರಿಬ್ಬರ ನಡುವೆ ರಿಲೇಷನ್ಶಿಪ್ ಅನ್ನೋದು ತಪ್ಪಾಗುತ್ತೆ. ಆದರೆ, ಇವರಿಬ್ಬರ ಕೆಮಿಸ್ಟ್ರಿ ಆನ್ ಸ್ಕ್ರೀನ್ನಲ್ಲಿ ಸಖತ್ ವರ್ಕೌಟ್ ಆಗಿರೋದ್ರಿಂದ, ನಿಜಜೀವನದಲ್ಲಿ ಇಬ್ಬರು ಒಂದಾದರೆ ಸಂಸಾರ ಸುಂದರ ಅನ್ನೋದು ಅಭಿಮಾನಿಗಳ ಬಯಕೆ.
ಇನ್ನೂ ಸ್ವೀಟಿ ಅನುಷ್ಕಾ ಜೊತೆಗೆ ಬಿಟೌನ್ ಬ್ಯೂಟಿ ಕೃತಿ ಸನಾನ್ ಹೆಸರು ಕೂಡ ಪ್ರಭಾಸ್ ಜೊತೆ ಕೇಳಿಬಂದಿತ್ತು. ಆದಿಪುರುಷ್ ಸಿನ್ಮಾ ಟೈಮ್ನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿದ್ದು, ಮದ್ವೆಯಾಗ್ತಾರೆ ಅಂತೆಲ್ಲಾ ಸುದ್ದಿಯಾಗಿತ್ತು. ಇದರ ಮಧ್ಯೆ ಪ್ರಭಾಸ್ ಹೀರೋಯಿನ್ಸ್ನ ಕೈ ಹಿಡಿಯಲ್ಲ ಬದಲಾಗಿ ಅವರ ಕುಟುಂಬಸ್ಥರು ಹುಡುಕಿರುವ ಹುಡ್ಗಿ ಜೊತೆ ಹಸೆಮಣೆ ಏರ್ತಾರೆ ಎನ್ನಲಾಗಿತ್ತು. ಬಟ್ ಯಾವುದಕ್ಕೂ ರಿಯಾಕ್ಟ್ ಮಾಡದ ಪ್ರಭಾಸ್ ಕಾಲ ಕೂಡಿಬರಬೇಕು. ನಂಗೂ ಮದ್ವೆಯಾಗಲಿಕ್ಕೆ ಆಸೆಯಿದೆ ಎಂದಷ್ಟೇ ಹೇಳಿಕೊಂಡಿದ್ದರು. ಇವತ್ತು ಸೋಷಿಯಲ್ ಮೀಡಿಯಾದಲ್ಲಿ ಸ್ಟೇಟಸ್ ಮೂಲಕ ಸರ್ ಪ್ರೈಸ್ ಕೊಟ್ಟಿದ್ದಾರೆ. ಆ ಸರ್ ಪ್ರೈಸ್ ಮದ್ವೆಯದ್ದಾ? ಅಥವಾ ಅವರ ಕುಟುಂಬ ಸೇರಿಕೊಳ್ಳಲಿರುವ ಸ್ಪೆಷಲ್ ವ್ಯಕ್ತಿಯದ್ದಾ? ಅನ್ನೋದನ್ನ ಕಾದುನೋಡಬೇಕಿದೆ. ಸದ್ಯ, ಪ್ರಭಾಸ್ ಕಲ್ಕಿ 2898ಎಡಿ ಚಿತ್ರದ ರಿಲೀಸ್ಗಾಗಿ ಎದುರುನೋಡ್ತಿದ್ದಾರೆ. ಸಲಾರ್ ಪಾರ್ಟ್-2, ದಿ ರಾಜ ಸಾಬ್, ಕಣ್ಣಪ್ಪ ಒಳಗೊಂಡಂತೆ ಹಲವು ಸಿನ್ಮಾಗಳು ಲೈನಪ್ ಆಗಿವೆ.