ರೆಬೆಲ್ ಸ್ಟಾರ್ ಪ್ರಭಾಸ್ ಗೆ ಡೈನೋಸಾರ್ ಅಂತ ಹೆಸರಿಟ್ಟು ಹೈವೋಲ್ಟೇಜ್ ಸಲಾರ್ ಸಿನಿಮಾ ಕಟ್ಟಿಕೊಟ್ಟ ಮ್ಯಾಸೀವ್ ಡೈರೆಕ್ಟರ್ ನೀಲ್ ಸಾಹೇಬ್ರು, ಈಗ ಯಂಗ್ ಟೈಗರ್ ಜೂನಿಯರ್ ಎನ್ ಟಿ ಆರ್ ಗೆ ಡ್ರ್ಯಾಗನ್ ಅಂತ ಟೈಟಲ್ ಇಡಲು ಹೊರಟಿದ್ದಾರಂತೆ. ಹೀಗೊಂದು ಸುದ್ದಿ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ನಾಳೆ ತಾರಕ್ ಬರ್ತ್ ಡೇ ಇದ್ದು, ಅಧಿಕೃತವಾಗಿ ನೀಲ್ ಸಾಹೇಬ್ರು ಡ್ರ್ಯಾಗನ್ ಟೈಟಲ್ ಅನೌನ್ಸ್ ಮಾಡಬಹುದಾ? ಹೀಗೊಂದು ಕುತೂಹಲದ ಪ್ರಶ್ನೆ ಯಂಗ್ ಟೈಗರ್ ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದೆ.
ಡ್ರ್ಯಾಗನ್ ಟೈಟಲ್, ಟಿಟೌನ್ ಟೈಗರ್ ಗೆ ಹೊಂದುವಂತಿದೆ. ಸಿನಿಮಾ ಅನೌನ್ಸ್ ಆದ ಗಳಿಗೆಯಲ್ಲಿ ಹರಿಬಿಟ್ಟ ಎನ್ ಟಿ ಆರ್ 31 ಪೋಸ್ಟರ್ ಡ್ರ್ಯಾಗನ್ ಟೈಟಲ್ಗೆ ಸ್ಯೂಟ್ ಆಗ್ತಿದೆ. ಹೀಗಾಗಿ ಅಭಿಮಾನಿಗಳು ಕೂಡ ಇದೇ ಶೀರ್ಷಿಕೆಯಲ್ಲಿ ತಾರಕ್ ಹಾಗೂ ಕಾಂಬೋ ಸಿನಿಮಾ ಬರಲಿ ಅಂತ ನಿರೀಕ್ಷಿಸ್ತಿದ್ದಾರೆ. ಕೊಮರಮ್ ಭೀಮ್ ಬರ್ತ್ ಡೇಗೆ ಸ್ಪೆಷಲ್ಲಾಗಿ ಸಲಾರ್ ಸಾರಥಿ ನೀಲ್ ಟೈಟಲ್ ಟೀಸರ್ ಗಿಫ್ಟ್ ಮಾಡ್ತಾರಾ? ಅಧಿಕೃತವಾಗಿ ಟೈಟಲ್ ಅನೌನ್ಸ್ ಮಾಡ್ತಾರಾ? ಕಾದು ನೋಡಬೇಕು.
ಸದ್ಯ, ತಾರಕ್ ದೇವರ ಹಾಗೂ ವಾರ್ 3 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಹೈವೋಲ್ಟೇಜ್ ದೇವರ ಅಕ್ಟೋಬರ್ 10 ರಂದು ಬಿಡುಗಡೆಗೆ ಸಜ್ಜಾಗ್ತಿದೆ. ಇತ್ತ ವಾರ್ 2 ತಾರಕ್ ನಟನೆಯ ಮೊದಲ ಹಿಂದಿ ಚಿತ್ರವಾಗಿದ್ದು, ಈ ಸಿನಿಮಾದ ಮೇಲೂ ಬಹಳಷ್ಟು ನಿರೀಕ್ಷೆಯಿದೆ. ಇಂದು ಸಂಜೆ ದೇವರ ಚಿತ್ರದ ಫಿಯರ್ ಸಾಂಗ್ ರಿಲೀಸ್ ಆಗ್ತಿದೆ. ಇನ್ನೂ ನೀಲ್ ಸಾಹೇಬ್ರು ಸಲಾರ್ 2 ಕೈಗೆತ್ತಿಕೊಳ್ಳಲಿದ್ದು, ಅನಂತರ ಎನ್ ಟಿ ಆರ್ 31 ಅಖಾಡಕ್ಕೆ ಬರಲಿದ್ದಾರೆ. ಫಸ್ಟ್ ಟೈಮ್ ಮ್ಯಾಸೀವ್ ಡೈರೆಕ್ಟರ್ ನೀಲ್ ಹಾಗೂ ಮ್ಯಾನ್ ಆಫ್ ಮಾಸ್ ತಾರಕ್ ಒಂದಾಗಿರೋದು ಸಿನಿದುನಿಯಾವೇ ಕಣ್ಣರಳಿಸುವಂತೆ ಮಾಡಿದೆ