ಮೊನ್ನೆಯಿಂದ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್, ಪ್ರತಿದಿನ ಸುದ್ದಿ ಆಗ್ತಾನೆ ಇದ್ದಾರೆ. ಪ್ರಭಾಸ್ ಅವರ ಒಂದಲ್ಲಾ ಒಂದು ವಿಚಾರ ಟಾಲಿವುಡ್ ನಲ್ಲಿ ಚರ್ಚೆ ಆಗ್ತಾನೇ ಇರುತ್ತೆ. ಅದಕ್ಕೆ ಕಾರಣ ‘ಕಲ್ಕಿ 2898 ಎಡಿ’ ಸಿನಿಮಾ. ಕಲ್ಕಿ ಸಿನಿಮಾದ ರಿಲೀಸ್ ಡೇಟ್ ಹತ್ತಿರವಾಗ್ತಿದೆ. ಹಾಗಾಗಿ ಕಲ್ಕಿ ಟೀಮ್ ಭರ್ಜರಿ ಪ್ರಚಾರ ಮಾಡುತ್ತಿದೆ ಹೊಸ ಹೊಸ ಐಡಿಯಾ ಮೂಲಕ ಸಿನಿಮಾತಂಡ ಪ್ರಚಾರ ಮಾಡುತ್ತಿದೆ.
ಒಂದು ಕಡೆ ಕಲ್ಕಿ ಸಿನಿಮಾದ ಪ್ರಚಾರ ಮತ್ತೊಂದು ಕಡೆ ಪ್ರಭಾಸ್ ಅವರ ಒಂದು ಇನ್ಸ್ಟಾಗ್ರಾಮ್ ಸ್ಟೋರಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜೊತೆಗೆ ಅಭಿಮಾನಿಗಳಿಗೆ ಕೂತುಹಲ ಕೂಡ ಉಂಟು ಮಾಡಿತ್ತು. ತಮ್ಮ ಬದುಕಿನಲ್ಲಿ ಓರ್ವ ಸ್ಪೆಷಲ್ ವ್ಯಕ್ತಿ ಬರಲಿದ್ದಾರೆ ಅಂತ ಸ್ಟೋರಿ ಹಾಕಿದ್ರು. ಪ್ರಭಾಸ್ ಈಗ ಆ ವ್ಯಕ್ತಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ವ್ಯಕ್ತಿ ಬೇರೆ ಯಾರೂ ಅಲ್ಲ ಕೀರ್ತಿ ಸುರೇಶ್!
ಇದು ಪ್ರಭಾಸ್ ವೈಯಕ್ತಿಕ ಜೀವನದ ವಿಷಯ ಅಲ್ಲ. ಪಕ್ಕಾ ಸಿನಿಮಾದ ವಿಚಾರ. ‘ಕಲ್ಕಿ 2898 ಎಡಿ’ ಸಿನಿಮಾದ ಪ್ರಚಾರಕ್ಕಾಗಿಯೇ ಪ್ರಭಾಸ್ ಅವರು ಆ ರೀತಿ ಪೋಸ್ಟ್ ಮಾಡಿದ್ರು. ಈ ಸಿನಿಮಾದಲ್ಲಿ ಒಂದು ವಿಶೇಷ ಕಾರು ಇರಲಿದೆ. ಅದನ್ನ ತುಂಬ ಸ್ಪೆಷಲ್ ಆಗಿ ರೆಡಿ ಮಾಡಲಾಗಿದೆ. ಅದಕ್ಕೆ ಬುಜ್ಜಿ ಅಂತ ಹೆಸರು ಇಡಲಾಗಿದೆ. ಆ ಕಾರು ಸಿರಿ, ಅಲೆಕ್ಸಾ ರೀತಿ ಮಾತನಾಡಲಿದೆ. ಅದಕ್ಕೆ ನಟಿ ಕೀರ್ತಿ ಸುರೇಶ್ ಧ್ವನಿ ನೀಡಿದ್ದಾರೆ.
ಜೂನ್ 27ರಂದು ‘ಕಲ್ಕಿ 2898 ಎಡಿ’ ಸಿನಿಮಾ ರಿಲೀಸ್ ಆಗಲಿದೆ. ಮೇ 22ರಂದು ಬುಜ್ಜಿ ಕಾರಿನ ಪರಿಚಯ ಮಾಡಿಕೊಡಲಾಗುವುದು. ಸಿನಿಮಾದ ಪ್ರಚಾರದಲ್ಲಿ ಈ ಕಾರು ಪ್ರಮುಖ ಪಾತ್ರ ವಹಿಸಲಿದೆ. ಈ ಸಿನಿಮಾದಲ್ಲಿ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್, ದಿಶಾ ಪಟಾನಿ ಅವರಂತಹ ಸ್ಟಾರ್ ಕಲಾವಿದರು ನಟಿಸಿದ್ದಾರೆ. ಅಲ್ಲದೇ, ರಾಮ್ ಗೋಪಾಲ್ ವರ್ಮಾ, ರಾಜಮೌಳಿ, ನಾನಿ, ದುಲ್ಕರ್ ಸಲ್ಮಾನ್, ವಿಜಯ್ ದೇವರಕೊಂಡ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತ ಹೇಳಲಾಗುತ್ತಿದೆ….