- ಪ್ರಜ್ವಲ್ ದೇವರಾಜ್ ಅವರು ಇನ್ನಿಲ್ಲ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್
- ಈ ಬಗ್ಗೆ ನಟ ದೇವರಾಜ್ ಅವರ ಕುಟುಂಬ ಸ್ಪಷ್ಟನೆ
- ಪ್ರಜ್ವಲ್ ದೇವರಾಜ್ ಅವರ ಪೋಟೋಗಳು ದುರ್ಬಳಕೆ
ಸ್ಯಾಂಡಲ್ವುಡ್ನ ನಟ ಪ್ರಜ್ವಲ್ ದೇವರಾಜ್ ಅವರು ಇನ್ನಿಲ್ಲ ಎಂಬ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ‘ಪ್ರಜ್ವಲ್ ದೇವರಾಜ್ ಇನ್ನಿಲ್ಲ. ಓಂ ಶಾಂತಿ’ ಎಂಬ ಕ್ಯಾಪ್ಷನ್ನೊಂದಿಗೆ ಪ್ರಜ್ವಲ್ ದೇವರಾಜ್ ಅವರ ಫೋಟೊವನ್ನು ಕಿಡಿಗೇಡಿಗಳು ವೈರಲ್ ಮಾಡಿದ್ದಾರೆ. ಇದು ಅವರ ಕುಟುಂಬದವರ ಗಮನಕ್ಕೂ ಬಂದಿದೆ. ಇನ್ನು ಈ ಬಗ್ಗೆ ಕುಟುಂಬಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ನಟ ದೇವರಾಜ್ ಅವರ ಕುಟುಂಬ ಸ್ಪಷ್ಟನೆ ನೀಡಿದ್ದು, ʻʻನಟ ಪ್ರಜ್ವಲ್ ದೇವರಾಜ್ ಕ್ಷೇಮವಾಗಿದ್ದಾರೆ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿಗಳನ್ನ ಹಬ್ಬಿಸಲಾಗಿದೆ. ಪ್ರಜ್ವಲ್ ದೇವರಾಜ್ ಅವರ ಪೋಟೋಗಳನ್ನ ದುರ್ಬಳಕೆ ಮಾಡಲಾಗಿದೆ. ಇದರಿಂದಾಗಿ ಕುಟುಂಬಸ್ಥರು ಹಾಗೂ ಅಭಿಮಾನಿಗಳಲ್ಲಿ ಆತಂಕ ಉಂಟಾಗುತ್ತದೆ. ಕಿಡಿಗೇಡಿಗಳು ಪ್ರಜ್ವಲ್ ದೇವರಾಜ್ ಆರೋಗ್ಯದ ಬಗ್ಗೆ ಅನಗತ್ಯ ಸುಳ್ಳು ವದಂತಿ ಹಬ್ಬಿಸಿದ್ದಾರೆʼʼಎಂದು ಕುಟುಂಬ ಮಾಹಿತಿ ಹಂಚಿಕೊಂಡಿದೆ.