- 2024 ಜುಲೈವರೆಗೂ ದಾಸನ ಟೈಮ್ ಚೆನ್ನಾಗಿಲ್ಲ
- ದರ್ಶನ್ ಬ್ಯಾಡ್ ಟೈಮ್ ಬಗ್ಗೆ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಣಿ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಜಾತಕ, ಜ್ಯೋತಿಷ್ಯ ನಂಬುತ್ತಾರೋ? ಇಲ್ಲವೋ? ಗೊತ್ತಿಲ್ಲ. ಆದರೆ, ದರ್ಶನ್ ಬ್ಯಾಡ್ ಟೈಮ್ ಬಗ್ಗೆ ಪ್ರಶಾಂತ್ ಕಿಣಿ ಎನ್ನುವ ಜ್ಯೋತಿಷಿಯೊಬ್ಬರು ಕಳೆದ ವರ್ಷವೇ ಭವಿಷ್ಯ ನುಡಿದಿದ್ದರು. 2024 ಜುಲೈವರೆಗೂ ದಾಸನ ಟೈಮ್ ಚೆನ್ನಾಗಿಲ್ಲ ಅನ್ನೋ ವಿಚಾರವನ್ನ ಕಳೆದ ವರ್ಷ ಜುಲೈನಲ್ಲೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಆ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಪ್ರಶಾಂತ್ ಕಿಣಿಯವರು ನುಡಿದಂತೆಯೇ ನಡೆಯುತ್ತಿದೆಯಲ್ಲ ಅಂತ ಎಲ್ಲರೂ ಅಚ್ಚರಿಪಡುವಂತಾಗಿದೆ.
ಸದ್ಯ ದಾಸ ಜೈಲುವಾಸ ಅನುಭವಿಸ್ತಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಪವಿತ್ರ ಗೌಡ ಸೇರಿದಂತೆ 19 ಜನ ಸಹಚರರು ಪರಪ್ಪನ ಅಗ್ರಹಾರದಲ್ಲಿ ಕಂಬಿ ಎಣಿಸ್ತಿದ್ದಾರೆ. ಜುಲೈ 04ರ ವರೆಗೂ ನ್ಯಾಯಾಂಗ ಬಂಧನದಲ್ಲಿರಲ್ಲಿದ್ದು, ಯಾರು ಅಪರಾಧಿ, ಯಾರು ನಿರಪರಾಧಿ ಅನ್ನೋದು ಸಾಬೀತಾಗಿದೆ. ಸದ್ಯ ಪ್ರಕರಣ ತನಿಖೆಯ ಹಂತದಲ್ಲಿರೋದು ನಿಮಗೆಲ್ಲ ತಿಳಿದಿದ್ದು, ದರ್ಶನ್ ಬಗ್ಗೆ ಜ್ಯೋತಿಷಿ ಪ್ರಶಾಂತ್ ಕಿಣಿಯವರು ನುಡಿದಿದ್ದ ಭವಿಷ್ಯದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದೆ.
ಅಂದ್ಹಾಗೇ, ದರ್ಶನ್ ಬ್ಯಾಡ್ಟೈಮ್ ಜುಲೈಗೆ ಎಂಡ್ ಆಗಲಿದೆಯಂತೆ. ಆಗಸ್ಟ್ನಿಂದ ಡಿಬಾಸ್ ಟೈಮ್ ತುಂಬಾ ಚೆನ್ನಾಗಿದೆಯಂತೆ. ಯಸ್, 2024 ಆಗಸ್ಟ್ನಿಂದ 2027 ಅಕ್ಟೋಬರ್ವರೆಗೆ ಸಾರಥಿ ಸಿನಿಕರಿಯರ್ ಸೂಪರ್ ಡೂಪರ್ ಆಗಿರಲಿದೆಯಂತೆ. ಕೊಲೆ ಕೇಸ್ನಲ್ಲಿ ಅರೆಸ್ಟ್ ಆಗೋ ಮೊದಲು ಡೆವಿಲ್ ಶೂಟಿಂಗ್ನಲ್ಲಿ ಬ್ಯುಸಿಯಿದ್ದರು. ಯಾವಾಗ ದಾಸ ಅಂದರ್ ಆದರೋ ಡೆವಿಲ್ ಕಥೆಯೇನು ಎನ್ನುವಂತಾಗಿತ್ತು. ಇದೀಗ ಜ್ಯೋತಿಷಿ ಪ್ರಶಾಂತ್ ಕಿಣಿಯವರ ಟ್ವೀಟ್ ವೈರಲ್ ಆಗ್ತಿರೋದನ್ನ ನೋಡಿದರೆ ಡೆವಿಲ್ ಹವಾ ಜೋರಾಗೋದು ಪಕ್ಕಾ ಅನ್ಸುತ್ತೆ. ಇನ್ನೂ ಡೆವಿಲ್ ಜೊತೆ ಹತ್ತಾರು ಸಿನಿಮಾಗಳಿಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, 2024 ರಿಂದ 2027ರ ವರೆಗೆ ಬ್ಯುಸಿ ಷೆಡ್ಯೂಲ್ಡ್ನಲ್ಲಿ ವರ್ಕ್ ಮಾಡ್ಬೇಕಾಗುತ್ತೆ.
ಇನ್ನೊಂದು ವೆರಿ ಇಂಟ್ರೆಸ್ಟಿಂಗ್ ಸಂಗತಿ ಅಂದರೆ 2027 ಅಕ್ಟೋಬರ್ ನಂತರ ಸಾರಥಿ ಸಿನಿಮಾರಂಗಕ್ಕೆ ಗುಡ್ ಬೈ ಹೇಳುವ ಪರಿಸ್ಥಿತಿ ಬರುವ ಚಾನ್ಸನ್ ಇದೆಯಂತೆ. ಯಾಕಂದ್ರೆ, 2027ರಲ್ಲಿ ದರ್ಶನ್ ರಾಜಕೀಯಕ್ಕೆ ಎಂಟ್ರಿಕೊಡುವ ಯೋಗವಿದೆಯಂತೆ. ಒಂದ್ವೇಳೆ ದಾಸ ಖಾದಿ ತೊಟ್ಟು ಕಣಕ್ಕಿಳಿದಿದರೆ ಪೊಲಿಟಿಕಲ್ನಲ್ಲೂ ಪವರ್ರು ಪ್ಲಸ್ ಖದರ್ರು ತೋರಿಸಬಹುದಂತೆ. ಹೀಗಂತ ಹೇಳ್ತಿರೋದು ನಾವಲ್ಲ ಜ್ಯೋತಿಷಿ ಪ್ರಶಾಂತ್ ಕಿಣಿ.
ಒಂದ್ವೇಳೆ ದರ್ಶನ್ ಈ ಕೊಲೆ ಪ್ರಕರಣದಲ್ಲಿ ಆರೋಪಿಯಾಗದೇ ಹೋಗಿದ್ದರೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧೆ ಮಾಡ್ಬೇಕಿತ್ತಂತೆ. ಈ ವಿಚಾರವನ್ನ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ಸಿ.ಪಿ ಯೋಗೇಶ್ವರ್ ಪರೋಕ್ಷವಾಗಿ ಪ್ರಸ್ತಾಪ ಮಾಡಿದ್ದರು. ಡಿಕೆ ಬ್ರದರ್ಸ್ ಅಚ್ಚರಿ ಅಭ್ಯರ್ಥಿಯಾಗಿ ದರ್ಶನ್ ಕಣಕ್ಕಿಳಿಸಲು ಪ್ಲಾನ್ ಮಾಡಿದ್ದರು ಅಂತ ಹಿಂಟ್ ಕೊಟ್ಟಿದ್ದರು. ಇದೀಗ ಡಿಕೆಶಿ ಪುತ್ರಿ ಐಶ್ವರ್ಯ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಎನ್ನಲಾಗ್ತಿದೆ. ಇತ್ತ ದರ್ಶನ್ ಭವಿಷ್ಯ ನುಡಿದಿದ್ದ ಪ್ರಶಾಂತ್ ಕಿಣಿ ಟ್ವೀಟ್ ಕೂಡ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಒಂದ್ವೇಳೆ ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ನಿರಪರಾಧಿ ಅಂತ ಪ್ರೂವ್ ಆದರೆ ಜುಲೈ ಎಂಡ್ ಒಳಗಾಗಿ ಜೈಲಿನಿಂದ ಹೊರಬಂದರೆ, ಆಗಸ್ಟ್ನಿಂದ ಡೆವಿಲ್ ಚಿತ್ರೀಕರಣ ಪ್ರಾರಂಭಗೊಂಡರೆ, ಪ್ರಶಾಂತ್ ಕಿಣಿ ಜ್ಯೋತಿಷಿ ಪಕ್ಕಾ ಅಂತಲೇ ಲೆಕ್ಕ ಅಲ್ಲವೇ.