ಯಂಗ್ ಟೈಗರ್ ಜೂನಿಯರ್ ಎನ್ಟಿಆರ್ ಹಾಗೂ ಕೆಜಿಎಫ್ ಮೂವೀ ಮಾಂತ್ರಿಕ ಪ್ರಶಾಂತ್ ನೀಲ್ ಕಾಂಬೋ ಒಂದಾಗ್ತಿರುವುದು ನಿಮಗೆಲ್ಲ ಗೊತ್ತಿರೋ ವಿಷ್ಯ. ಈಗಾಗಲೇ ಸಿನಿಮಾ ಅನೌನ್ಸ್ ಆಗಿ ವರ್ಷಗಳು ಕಳೆದಿದೆ, ರಿಲೀಸ್ ಆಗಿರೋ ಪೋಸ್ಟರ್ ಇಬ್ಬರ ಜುಗಲ್ಬಂಧಿಯ ಮೇಲಿನ ನಿರೀಕ್ಷೆಯನ್ನ ಹೆಚ್ಚಿಸಿದೆ. ಸಿನಿಮಾ ಯಾವಾಗ ಸೆಟ್ಟೇರುತ್ತೆ? ಕೊಮರಮ್ ಭೀಮ್ ನಯಾ ಲುಕ್ ಹೇಗಿರುತ್ತೆ ಅಂತ ಸಿನಿಮಾ ಪ್ರೇಮಿಗಳು ಕಣ್ಣರಳಿಸಿದ್ದಾರೆ. ಹೀಗಿರುವಾಗಲೇ ಇಂಟ್ರೆಸ್ಟಿಂಗ್ ಸಂಗತಿಯೊಂದು ಹೊರಬಿದ್ದಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ 15 ಕಂಟ್ರಿಗಳಲ್ಲಿ ನೀಲ್ ಹಾಗೂ ತಾರಕ್ ಸಿನಿಮಾ ಶೂಟಿಂಗ್ ಮಾಡೋದಕ್ಕೆ ಪ್ಲಾನ್ ರೂಪಿಸಲಾಗಿದೆಯಂತೆ. ಸದ್ಯ ಈ ಸುದ್ದಿ ಟಿಟೌನ್ ಅಂಗಳದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ಇಂಟ್ರೆಸ್ಟಿಂಗ್ ಅಂದರೆ ಆಗಸ್ಟ್ನಿಂದ ಶೂಟಿಂಗ್ ಶುರುವಾಗ್ತಿದೆಯಂತೆ. ಮೆಕ್ಸಿಕೋ ನಲ್ಲಿ ಎನ್ಟಿಆರ್ 31ಗೆ ಕಿಕ್ ಸ್ಟಾರ್ಟ್ ಕೊಡೋದಕ್ಕೆ ತಯಾರಿ ನಡೆದಿದೆಯಂತೆ. ಅತ್ಯಂತ ದುಬಾರಿ ಸಿನಿಮಾ ಇದಾಗಿರಲಿದ್ದು, ಮೈತ್ರಿ ಮೂವೀ ಮೇಕರ್ಸ್ ಹಾಗೂ ಎನ್ಟಿಆರ್ ಆರ್ಟ್ಸ್ ಬ್ಯಾನರ್ ಜಂಟಿಯಾಗಿ ಬಂಡವಾಳ ಹೂಡಲಿದೆ. ಅಷ್ಟಕ್ಕೂ ನೀಲ್ ಸಾಹೇಬ್ರು ಸಲಾರ್-2ನ ಮೊದಲು ಕೈಗೆತ್ತಿಕೊಳ್ತಾರಾ? ಅಥವಾ ಎನ್ಟಿಆರ್31 ಮೊದಲು ಶುರುಮಾಡ್ತಾರಾ? ಈ ಕನ್ಫ್ಯೂಶನ್ ಅಂತೂ ಇದ್ದೇ ಇದೆ. ಸಲಾರ್-2 ನಿಂತೋಯ್ತು ಎನ್ನುವ ಸುದ್ದಿ ಬೆನ್ನಲ್ಲೇ ಹೊಂಬಾಳೆ ಮಾಲೀಕರು ಸಲಾರ್ ದೇವನ ಫೋಟೋ ಹಂಚಿಕೊಂಡಿದ್ದರಿಂದ ಸಲಾರ್-2 ನಿಂತಿಲ್ಲ ಅನ್ನೋದು ಖಚಿತವಾಗಿದೆ. ಇನ್ನೇನಿದ್ರು ಹೊಂಬಾಳೆ ಸಂಸ್ಥೆ ಅಧಿಕೃತವಾಗಿ ಸಿನಿಮಾ ಘೋಷಿಸಬೇಕಿದೆ. ಕೆಜಿಎಫ್ ಕ್ಯಾಪ್ಚನ್ ಮೊದಲ ಆಯ್ಕೆ ಸಲಾರ್-2ನಾ ಅಥವಾ ಎನ್ಟಿಆರ್-31 ಕಾದುನೋಡಬೇಕಿದೆ.
ಅಚ್ಚರಿ ಅಂದರೆ ಎನ್ಟಿಆರ್-31ಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ನಾಯಕಿ ಎನ್ನಲಾಗ್ತಿದೆ. ಸೌತ್-ನಾರ್ತ್ ಸಿನಿಮಾ ಅಂಗಳದಲ್ಲಿ ಸ್ಟಾರ್ ನಾಯಕಿಯಾಗಿ ಮಿಂಚುತ್ತಿರುವ, ಗ್ಲೋಬಲಿ ಸದ್ದು ಮಾಡ್ತಿರೋ ಕಿರಿಕ್ ಬ್ಯೂಟಿನಾ, ಕೊಮರಮ್ ಭೀಮ್ಗೆ ಜೋಡಿ ಮಾಡಲು ಚರ್ಚೆ ನಡೀತಿದೆಯಂತೆ. ಒಂದ್ವೇಳೆ ಈ ಸುದ್ದಿ ನಿಜವಾದರೆ ರಶ್ಮಿಕಾ ಇಂಟರ್ನ್ಯಾಷಲ್ ಲೆವೆಲ್ನಲ್ಲಿ ಶೈನ್ ಆಗೋದು ಗ್ಯಾರಂಟಿ. ಹೌದು, ಈಗಾಗಲೇ ಆರ್ ಆರ್ ಆರ್ ಮೂಲಕ ತಾರಕ್ ಇಂಟರ್ ನ್ಯಾಷನಲ್ ಲೆವೆಲ್ನಲ್ಲಿ ಗುರ್ತಿಸಿಕೊಂಡಿದ್ದಾರೆ. ಆಸ್ಕರ್ ಕೊಳ್ಳೆ ಹೊಡೆದ್ಮೇಲಂತೂ ಹಾಲಿವುಡ್ ಜಗತ್ತು ತಾರಕ್ ಮೇಲೆ ಕಣ್ಣಿಟ್ಟಿದೆ. ಈ ಸಮಯದಲ್ಲಿ ಕಿರಿಕ್ ಕ್ವೀನ್ ಕೊಮರಮ್ ಭೀಮ್ಗೆ ಜೊತೆಯಾಗಿ ಮೆರವಣಿಗೆ ಹೊರಟರೆ ವರ್ಲ್ಡ್ವೈಡ್ ಜನಪ್ರಿಯತೆ ಗಳಿಸೋದ್ರಲ್ಲಿ ನೋ ಡೌಟ್. ಈಗಾಗಲೇ ರಶ್ಮಿಕಾ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ತುಂಬೆಲ್ಲಾ ಗುರ್ತಿಸಿಕೊಂಡಿದ್ದಾರೆ. ರಣಬೀರ್ಗೆ ಜೋಡಿಯಾಗಿ ಅನಿಮಲ್ ಮೂಲಕ ಒಂದಷ್ಟು ಸದ್ದು ಮಾಡಿದ್ದಾರೆ. ಈಗ ಪುಷ್ಪ-2 ಮೂಲಕ ಪ್ಯಾನ್ ವರ್ಲ್ಡ್ನಲ್ಲಿ ಶೈನ್ ಆಗೋ ತವಕದಲ್ಲಿದ್ದಾರೆ. ಇಂತಹ ಸಮಯದಲ್ಲಿ ಸಾನ್ವಿಗೆ ಯಂಗ್ ಟೈಗರ್ ಜೊತೆ ಸ್ಕ್ರೀನ್ ಶೇರ್ ಮಾಡೋ ಚಾನ್ಸ್ ಸಿಕ್ಕಿದೆ ಎನ್ನಲಾಗ್ತಿದೆ.