ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಹೆಸರುವಾಸಿಯಾಗಿದ್ದ ಸ್ವಾಗತ್ ಬಾಬು ನಿಧನಹೊಂದಿದ್ದಾರೆ. ಇವರ ನಿಧನಕ್ಕೆ ಇಡೀ ಸ್ಯಾಂಡಲ್ವುಡ್ ಕಂಬನಿ ಮಿಡಿದಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿರುವ ಸ್ವಾಗತ್ ಬಾಬು, ಚಂದ್ರಮುಖಿ ಪ್ರಾಣಸಖಿ, ಶ್ರೀರಸ್ತು ಶುಭಮಸ್ತು, ಸ್ಮೈಲ್ ಸೇರಿದಂತೆ ಸೂಪರ್ ಹಿಟ್ ಸಿನ್ಮಾಗಳನ್ನ ನಿರ್ಮಾಣ ಮಾಡಿದ್ದರು. ರಮೇಶ್ ಅರವಿಂದ್, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸೇರಿದಂತೆ ಅನೇಕ ಸ್ಟಾರ್ ನಟರುಗಳ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಸರಿಸುಮಾರು 35 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಇವರು, ನಿರ್ಮಾಣದ ಜೊತೆಗೆ ಸಿನಿಮಾ ವಿತರಣೆಯಲ್ಲೂ ತೊಡಗಿಸಿಕೊಂಡಿದ್ದರು. ಇದೀಗ ಕಾಲವಾಗಿದ್ದಾರೆ. ಬಾರದೂರಿಗೆ ಪಯಣ ಬೆಳೆಸಿರೋ ಸ್ವಾಗತ್ ಬಾಬು ಆತ್ಮಕ್ಕೆ ಶಾಂತಿ ಸಿಗಲೆಂದು, ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ಕೊಡಲೆಂದು ಚಂದನವನದ ತಾರೆಯರು ಭಗವಂತನಲ್ಲಿ ಕೋರಿಕೊಂಡಿದ್ದಾರೆ.