ಸಣ್ಣ ಕರುಳಿಗೆ ಮತ್ತು ಕಣ್ಣಿಗೆ ಇಂಪು ಪ್ಲಸ್ ತಂಪು ನೀಡುವ ಜಾಗಗಳ ಪೈಕಿ ಗೋವಾ ಕೂಡ ಒಂದು. ಈ ಜಾಗಕ್ಕೆ ಕನ್ನಡ ಚಿತ್ರರಂಗದ ಕೆಲ ನಿರ್ಮಾಪಕರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಉದ್ಯಮಕ್ಕೆ ಸಂಬಂಧಪಟ್ಟ ಕೆಲ ಗಣ್ಯರು ಒಂದು ಬಸ್ ಮಾಡ್ಕೊಂಡು ಟ್ರಿಪ್ ಹೋಗಿದ್ದಾರೆ. ಹೋಗುವಾಗ ಎಲ್ಲವೂ ಸರಿಯಿತ್ತು, ಎಲ್ಲರು ಸರಿಯಿದ್ರು. ಆದರೆ, ಅಲ್ಲಿ ಹೋಗಿ ಹಿಬೀಸ್ ರೆಸಾರ್ಟ್ನಲ್ಲಿ ತಂಗಿದ್ಮೇಲೆ ನಿರ್ಮಾಪಕ ಎ ಗಣೇಶ್, ರಥಾವರ ಸಿನಿಮಾ ಖ್ಯಾತಿಯ ಮಂಜುನಾಥ್ ಮತ್ತು ಆರ್ಯ ಸತೀಶ್ ನಡುವೆ ಗಲಾಟೆ ನಡೆದಿದೆಯಂತೆ. ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರಂತೆ. ಈ ವೇಳೆ ನಿರ್ಮಾಪಕ ಎ ಗಣೇಶ್ ಅವರ ತಲೆಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಹೀಗಾಗಿ ಬಸ್ನಲ್ಲಿ ಗೋವಾಗೆ ತೆರಳಿದ್ದ ಗಣೇಶ್ ಹಾಗೂ ಮಂಜುನಾಥ್ ಫ್ಲೈಟ್ನಲ್ಲಿ ಬೆಂಗಳೂರಿಗೆ ವಾಪಾಸಾಗಿರೋ ಬಗ್ಗೆ ಅಪ್ಡೇಟ್ ಲಭ್ಯವಾಗಿದೆ. ಫಿಲ್ಮ್ ಚೇಂಬರ್ ಚುನಾವಣೆಗೆ ಸಂಬಂಧಪಟ್ಟಂತೆ ಮಾತುಕತೆ ನಡೆಯತ್ತಿದ್ದಾಗ ಮಾತಿಗೆ ಮಾತು ಬೆಳೆದು ಜಗಳ ನಡೆದಿರುವುದಾಗಿ ಸುದ್ದಿ ಕೇಳಿಬರ್ತಿದೆ.
ಈ ಬಗ್ಗೆ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಉಮೇಶ್ ಬಣಕ್ಕರ್ ಗ್ಯಾರಂಟಿ ನ್ಯೂಸ್ ಚಾನಲ್ ಜೊತೆ ಮಾತನಾಡಿದ್ದಾರೆ. ಎರಡು ದಿನಗಳ ಕಾಲ ಫಿಲ್ಮ್ ಚೇಂಬರ್ ನಿಯೋಗ ಹಾಗೂ ನಿರ್ಮಾಪಕರು ಒಡಗೂಡಿ ಗೋವಾಗೆ ಟ್ರಿಪ್ ಹೋಗಿರುವುದು ನಿಜ. ಆದರೆ, ರಂಪರಾಮಾಯಣ ಏನು ಆಗಿಲ್ಲ. ಯಾರು ಕೂಡ ತಲೆಗೆ ಪೆಟ್ಟಾಗೋ ಹಾಗೇ ಹೊಡೆದಾಡಿಕೊಂಡಿಲ್ಲ. ಬದಲಾಗಿ ಮಾತಿನ ಚಕಮಕಿ ನಡೆದಿದೆ ಅಷ್ಟೇ. ಅದನ್ನೇ ಹೊಡೆದಾಟ ಅಂತ ಸುದ್ದಿ ಹಬ್ಬಿಸಿದ್ದಾರೆಂದು ಗ್ಯಾರಂಟಿ ಚಾನಲ್ಗೆ ಸ್ಪಷ್ಟನೆ ಪಡಿಸಿದ್ದಾರೆ.