ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ ಡಿಸೆಂಬರ್ 5 ರಿಲೀಸ್ ಆಗಲಿದೆ. ಈ ಸಿನಿಮಾ ರಿಲೀಸ್ಗೂ ಮ,ಉನ್ನವೇ ಹಲವು ಸಂಕಷ್ಟ ಎದುರಾಗಿದೆ. ಪುಷ್ಪ ಸಿನಿಮಾಗಾಗಿ ಕನ್ನಡ ಸಿನಿಮಾ ಶಿವರಾಜ್ ಕುಮಾರ್ ಅಭಿನಯದ, ಭೈರತಿ ರಣಗಲ್ ಸಿನಿಮಾವನ್ನು ಕನ್ನಡ ಥೀಯೇಟರ್ ಮಾಲೀಕರು ಎತ್ತಗಂಡಿ ಮಾಡಿದ್ದಾರೆ. ಹಾಗೆಯೇ ನಾಳೆ ಬೆಳಗ್ಗೆ 3ಗಂಟೆ ಪುಷ್ಪ-2 ಸಿನಿಮಾ ಶೋ ಕೂಡ ಫಿಕ್ಸ್ ಆಗಿತ್ತು. ಇನ್ನು ಇದರಿಂದ ಸಿನಿಮಾಟೋಗ್ರಫಿ ಆ್ಯಕ್ಟ್ನ್ನು ಥಿಯೇಟರ್ ಮಾಲೀಕರು ಗಾಳಿಗೆ ತೂರಿದ್ದಾರೆ ಎನ್ನುವುದು ಎದ್ದು ಕಾಣುತ್ತಿದೆ.
ಈ ಕುರಿತು ಗ್ಯಾರಂಟಿ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿದ ಬೆನ್ನಲ್ಲೇ ಎಚ್ಚೆತ್ತ ನಿರ್ಮಾಪಕರ ಸಂಘ, ಈ ಬಗ್ಗೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಪ್ರೋಡ್ಯೂಸರ್ ಅಸೋಸಿಯೇಷನ್ ಬರೆದ ಪತ್ರದ ಪ್ರತಿ ಗ್ಯಾರಂಟಿ ನ್ಯೂಸ್ಗೆ ಲಭ್ಯವಾಗಿದೆ.
ಪುಷ್ಪ-2 ಸಿನಿಮಾವನ್ನು ಮುಂಜಾನೆ 6 ಗಂಟೆಗೆ ಮುನ್ನ ಶೋಗಳು ಪ್ರದರ್ಶಿಸದಂತೆ ಮಾನವಿ ಮಾಡಿದ್ದು, ರಾಜ್ಯ ಸರ್ಕಾರದ ಆದೇಶ ಪಾಲಿಸುವಂತೆ ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪುಷ್ಪ-2 ಸಿನಿಮಾದ ಶೋಗಳು, ಟೈಮಿಂಗ್ಗಳ ಜೊತೆಗೆ ಈ ಸಿನಿಮಾದ ಟಿಕೆಟ್ ದರದ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಇನ್ನು ಈ ಸಿನಿಮಾದ ಟಿಕೆಟ್ ದರವನ್ನು ಮನಸೋ ಇಚ್ಛೆ ಬಂದಂತೆ ಫಿಕ್ಸ್ ಮಾಡದಂತೆ ಜಿಲ್ಲಾದಿಕಾರಿಗಳಿ ಪತ್ರ ಬರೆದಿದ್ದಾರೆ.
ನಿರ್ಮಾಪಕರ ಸಂಘ ಪತ್ರ ಬರೆದ ಹಿನ್ನೆಲೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿಗಳು ಪುಷ್ಪ -2 ಸಿನಿಮಾದ ಮುಂಜಾನೆ ಶೋಗಳನ್ನು ಕ್ಯಾನ್ಸಲ್ ಮಾಡಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರಿನಲಲ್ಇ ಬೆಳಗ್ಗೆ 6.30ಕ್ಕೂ ಮುನ್ನ ಪುಷ್ಪ-2 ಸಿನಿಮಾ ಪ್ರದರ್ಶನಕ್ಕ ಬ್ರೇಕ್ ಬಿದ್ದಿದೆ. ನಗರದ ಸುಮಾರು 42 ಥಿಯೇಟರ್ಗಳಿಗೆ ನೋಟಿಸ್ ಜಾರಿ ಮಾಡಿದ್ದು, ಸಮಯ ಪಾಲನೆ ಮಾಡದ ಥಿಯೇಟರ್ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ನಗರ ಪೊಲೀಸ್ ಆಯುಕ್ತರು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದು, ಸಿನಿಮಾಟೋಗ್ರಫಿ ಆ್ಯಕ್ಟ್ ರೂಲ್ಸ್ ಪಾಲಿಸುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದೆ.