- ಪುಷ್ಪ -2 ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಮೊಬೈಲ್ ಬ್ಯಾನ್
- ಮೊಬೈಲ್ ಬಳಸಬಾರದು ಎಂದು ಸೂಚಿಸಿದ ನಿರ್ದೇಶಕ ಸುಕುಮಾರ್
ಆಗಸ್ಟ್ 15ರಂದು ವಿಶ್ವ ಸಿನಿದುನಿಯಾವನ್ನ ರೂಲ್ ಮಾಡೋದಕ್ಕೆ ಪುಷ್ಪರಾಜ್ ಅಖಾಡಕ್ಕೆ ಇಳಿಯುತ್ತಿರುವುದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಪುಷ್ಪ-2 ಅಖಾಡದಿಂದ ಬಿಗ್ ಬ್ರೇಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ. ಪುಷ್ಪ-2 ಅಖಾಡದಲ್ಲಿ ಮೊಬೈಲ್ ಬ್ಯಾನ್ ಮಾಡಿರುವ ಸುದ್ದಿ ಕೇಳಿಬರ್ತಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಂಡಿರುವ ನಿರ್ದೇಶಕ ಸುಕುಮಾರ್ ಗಾರು, ಶೂಟಿಂಗ್ ವೇಳೆ ಯಾರೊಬ್ಬರು ಕೂಡ ಮೊಬೈಲ್ ಬಳಸಬಾರದು ಅಂತ ಸೂಚಿಸಿದ್ದಾರಂತೆ.
ಶೂಟಿಂಗ್ ಸೆಟ್ನಲ್ಲಿ ಮೊಬೈಲ್ ಬಳಸಬಾರದು ಅನ್ನೋ ನಿಯಮ ಜಾರಿಗೆ ತರೋದಕ್ಕೆ ಕಾರಣ ಪುಷ್ಪ-2 ಮೇಲೆ ನಿರೀಕ್ಷೆ ಬೆಟ್ಟದಷ್ಟಿದೆ. ಈ ಭಾರಿ ಪ್ಯಾನ್ ಇಂಡಿಯಾ ಪ್ರೇಕ್ಷಕರು ಮಾತ್ರವಲ್ಲ ಪ್ಯಾನ್ ವರ್ಲ್ಡ್ ಸಿನಿಮಾ ಪ್ರೇಮಿಗಳು ಕೂಡ ಪುಷ್ಪ-2 ಗಾಗಿ ಕಣ್ಣರಳಿಸಿದ್ದಾರೆ. ಹೇಗಿರಲಿದೆ ಪುಷ್ಪರಾಜ್ ಕಾರುಬಾರು ಅಂತ ನೋಡೋದಕ್ಕೆ ಕುತೂಹಲಭರಿತರಾಗಿ ಕಾಯ್ತಿದ್ದಾರೆ. ಅದರಲ್ಲೂ ಪುಷ್ಪ-2 ಗೆ ಯಾವ್ ರೀತಿ ಕ್ಲೈಮ್ಯಾಕ್ಸ್ ಟಚ್ ಸಿಗಲಿದೆ. ಕ್ಲೈಮ್ಯಾಕ್ಸ್ನಲ್ಲಿ ಪುಷ್ಪರಾಜ್ ಲುಕ್ಕು-ಗೆಟಪ್ ಹೇಗಿರಲಿದೆ ಅಂತಾ ತಿಳಿದುಕೊಳ್ಳೋದಕ್ಕಂತೂ ಭಾರಿ ಉತ್ಸುಕರಾಗಿ ಕಾಯ್ತಿದ್ದಾರೆ. ಹೀಗಾಗಿ, ಯಾವುದೇ ಕಾರಣಕ್ಕೂ ಶೂಟಿಂಗ್ ಸೆಟ್ನಿಂದ ಪುಷ್ಪರಾಜ್ ಲುಕ್ ರಿವೀಲ್ ಆಗಬಾರದು. ಕೋಟಿ ಕೋಟಿ ಸುರಿದು ಕ್ಯಾಪ್ಚರ್ ಮಾಡ್ತಿರುವ ಕ್ಲೈಮ್ಯಾಕ್ಸ್ ದೃಶ್ಯಗಳು ಸೋರಿಕೆಯಾಗಬಾರದು ಎಂಬ ಕಾರಣಕ್ಕೆ ಡೈರೆಕ್ಟರ್ ಸುಕುಮಾರ್ ಪಕ್ಕಾ ಪ್ಲಾನ್ ಮಾಡಿ ಮೊಬೈಲ್ನೇ ಬ್ಯಾನ್ ಮಾಡಿಸ್ತಿದ್ದಾರಂತೆ.
ಪುಷ್ಪ ಸಾರಥಿ ಇಷ್ಟೊಂದು ಸ್ಟ್ರಿಕ್ಟ್ ಆಗಲು ಕಾರಣ, ಈ ಹಿಂದೆ ಪುಷ್ಪ ಚಿತ್ರದ ಕೆಲ ಸೀಕ್ವೆನ್ಸ್ ಶೂಟಿಂಗ್ ಮಾಡುವಾಗ ಚಿತ್ರೀಕರಣ ನೋಡಲು ನೆರೆದಿದ್ದವರು ದೃಶ್ಯಗಳನ್ನ ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವಂತಹ ಕೆಲಸ ಮಾಡಿದ್ದಾರೆ. ಇದರಿಂದ ಪುಷ್ಪ ಬಳಗಕ್ಕೆ ದೊಡ್ಡ ಮಟ್ಟದಲ್ಲಿ ಪೆಟ್ಟಾಗಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣದ ಸಂದರ್ಭದಲ್ಲೂ ಅಂತಹ ಎಡವಟ್ಟಾಗ್ಬೋದು, ಸಿನಿಮಾದ ಮೇಜರ್ ಸೀನ್ಸ್ಗಳು ವೈರಲ್ ಆಗಿ ಫಿಲ್ಮ್ಗೆ ಹೊಡೆತ ಕೊಡಬಹುದು ಅಂತ ಮೊಬೈಲ್ ಬ್ಯಾನ್ ಮಾಡಿಸ್ತಿದ್ದಾರೆ. ಆಲ್ಮೋಸ್ಟ್ ಆಲ್ ಟಾಕಿಪೋಶನ್ಸ್ ಮುಗಿಸಿ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿರೋ ಸುಕುಮಾರ್ ಗಾರು, ಪುಷ್ಪ ದಿ ರೂಲ್ ಸ್ಪೆಷಲ್ ಸಾಂಗ್ಗಾಗಿ ಅನಿಮಲ್ ಚೆಲುವೆ ತೃಪ್ತಿ ದಿಮ್ರಿಗೆ ಗಾಳಹಾಕಿದ್ದಾರಂತೆ. ಶೀಘ್ರದಲ್ಲೇ ತೃಪ್ತಿ ದಿಮ್ರಿ ಪುಷ್ಪ ಅಖಾಡ ಸೇರಿಕೊಳ್ಳಲಿದ್ದು, ಐಟಂ ಹಾಡಿನ ಚಿತ್ರೀಕರಣ ನಡೆಯಲಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್ ಸೇರಿದಂತೆ ಬಿಗ್ ಸ್ಟಾರ್ಸ್ಗಳ ಸಮಾಗಮ ಇಲ್ಲಾಗಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ನಿರ್ಮಾಣದಲ್ಲಿ ಪುಷ್ಪ ದಿ ರೂಲ್ ಅದ್ಧೂರಿಯಾಗಿಯೇ ತಯಾರಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟೀಸರ್, ಸಾಂಗ್ಸ್ಗಳು ಸೂಪರ್ ಹಿಟ್ಟಾಗಿವೆ.