ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಸಿನಿಮಾ ಪುಷ್ಪ 2 ಬಿಡುಗಡೆಯಾದಾಗಿನಿಂದ ವಿವಾದಗಳಲ್ಲಿ ಮುಳುಗಿದೆ. ಇದರ ನಡುವೆ ಈ ಚಿತ್ರಕ್ಕೆ ಸಂಬಂಧಿಸಿದಂತೆ ಕ್ಷತ್ರಿಯ ಕರ್ಣಿ ಸೇನೆಯು ವಿರೋಧ ವ್ಯಕ್ತಪಡಿಸಿದೆ. ಈ ಚಿತ್ರದಲ್ಲಿ ಭನ್ವರ್ ಸಿಂಗ್ ಶೇಖಾವತ್ ಎಂಬ ಪಾತ್ರವನ್ನು ಸೃಷ್ಟಿಸುವ ಮೂಲಕ ಸಮುದಾಯವನ್ನು ಅವಹೇಳನ ಮಾಡಲಾಗಿದೆ ಎಂದು ದೂರಿದೆ.
ಇದರಿಂದಾಗಿ ಚಿತ್ರ ನಿರ್ಮಾಪಕರು ಎಲ್ಲಿ ಕಾಣಿಸಿಕೊಂಡರೂ ಅವರನ್ನು ಹೊಡೆಯಿರಿ ಎಂದು ಕ್ಷತ್ರಿಯ ಕರ್ಣಿ ಸೇನೆಯ ರಾಜ್ ಶೇಖಾವತ್ ರಜಪೂತರಲ್ಲಿ ಮನವಿ ಮಾಡಿದ್ದಾರೆ. ಪುಷ್ಪ 2 ಚಿತ್ರದಲ್ಲಿ ಶೇಖಾವತ್ ಎಂಬ ಪದವನ್ನು ಕೀಳು ಮಟ್ಟದಲ್ಲಿ ಬಳಸಲಾಗಿದೆ ಎಂದು ಸೇನೆ ಆರೋಪಿಸಿದೆ.
ಸೌತ್ ಸ್ಮಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ 2’ ಚಿತ್ರ ಥಿಯೇಟರ್ ಗಳಲ್ಲಿ ಸದ್ದು ಮಾಡುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲು ಅರ್ಜುನ್ ನಟನೆಯ ‘ಪುಷ್ಪಾ 2 ಚಿತ್ರದಲ್ಲಿ ಫಹಾದ್ ಫಾಸಿಲ್ ನೆಗೆಟಿವ್ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಭನ್ವರ್ ಸಿಂಗ್ ಶೇಖಾವತ್.
ಈಗ ಈ ಚಿತ್ರದಲ್ಲಿನ ಖಳನಾಯಕನ ಹೆಸರು ಭನ್ವರ್ ಸಿಂಗ್ ಶೇಖಾವತ್, ಕರ್ಣಿ ಸೇನೆಯನ್ನು ಕೆರಳಿಸಿದೆ ಅಲ್ಲದೆ ವಿಲನ್ ಹೆಸರನ್ನು ಬದಲಾವಣೆ ಮಾಡುವಂತೆ ಕರ್ಣಿ ಸೇನಾ ನಾಯಕ ಹೇಳಿದ್ದು, ಇಲ್ಲದಿದ್ದರೆ ಹಲ್ಲೆ ಮಾಡುವುದಾಗಿ ನಿರ್ಮಾಪಕರಿಗೆ ಬೆದರಿಕೆ ಹಾಕಿದ್ದಾರೆ.
ಕರ್ಣಿ ಸೇನಾ ನಾಯಕ ರಾಜ್ ಶೇಖಾವತ್ ಅವರು ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು, ಇತ್ತೀಚೆಗೆ ಪುಷ್ಪ 2 ಎಂಬ ಚಿತ್ರ ಬಿಡುಗಡೆಯಾಗಿದೆ. ಇದರಲ್ಲಿ ಮತ್ತೊಮ್ಮೆ ಕ್ಷತ್ರಿಯ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಕ್ಷತ್ರಿಯ ಸಮುದಾಯದೊಂದಿಗೆ ಸಂಬಂಧ ಹೊಂದಿರುವ ಭನ್ವರ್ ಸಿಂಗ್ ಶೇಖಾವತ್ ಜಾತಿಯನ್ನು ಕಳಮಟ್ಟದಲ್ಲಿ ತೋರಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೆ, ವಿಚಾರಗಳ ಅಭಿವ್ಯಕ್ತಿಯ ಹೆಸರಲ್ಲಿ ಚಿತ್ರರಂಗದ ಇವರು ಕ್ಷತ್ರಿಯರ ಮಾನಹಾನಿ ಮಾಡುತ್ತಾ ಬಂದಿದ್ದಾರ ಚಿತ್ರ ನಿರ್ಮಾಪಕರು ಇದನ್ನು ಸಾವಧಾನವಾಗಿ ಆಲಿಸಿ ಭನ್ವರ್ ಸಿಂಗ್ ಶೇಖಾವತ್ ಪದ ಬಳಕೆಯನ್ನು ಆದಷ್ಟು ಬೇಗ ತೆಗೆದು ಹಾಕಬೇಕು. ಇಲ್ಲವಾದಲ್ಲಿ ಕರ್ಣಿ ಸೇನೆ ಮನೆಗೆ ನುಗ್ಗಿ ಹೊಡೆದು ಹಾಕುತ್ತದೆ. ಅಲ್ಲದೇ ಈ ವಿಚಾರದಲ್ಲಿ ಕರ್ಣಿ ಸೇನೆ ಯಾವ ಹಂತಕ್ಕೂ ಹೊಗಲು ಸಿದ್ದವಿದೆ ಎಂದು ಹೇಳಿದ್ದಾರೆ.