ಒಂದೇ ದಿನದಲ್ಲಿ ಬರೋಬ್ಬರಿ 260 ಕೋಟಿ ಬಾಕ್ಸ್ ಆಫೀಸ್ ಕಮಾಯಿ ಮಾಡಿರೋ ಪುಷ್ಪ-2 ಚಿತ್ರ ಸದ್ಯ ಎಲ್ಲೆಡೆ ಟಾಕ್ ಆಫ್ ದಿ ಟೌನ್ ಆಗಿದೆ. ಅದರಲ್ಲಿ ಶ್ರೀವಲ್ಲಿಯಾಗಿ ಅಲ್ಲು ಅರ್ಜುನ್ ಜೊತೆ ಮಿಂಚಿರೋ ಕನ್ನಡತಿ ರಶ್ಮಿಕಾ ಮಂದಣ್ಣ ಇದೀಗ ಭಾರತೀಯ ಚಿತ್ರರಂಗದ ಸೆನ್ಸೇಷನಲ್ ನಟಿ. ವಿಜಯ್ ದೇವರಕೊಂಡ ಕೈ ಹಿಡಿಯುತ್ತಿರೋ ರಶ್ಮಿಕಾ, ತನ್ನ ಭಾವಿ ಪತಿ ಹಾಗೂ ಕುಟುಂಬಸ್ಥರನ್ನ ಕರೆದುಕೊಂಡು ಹೋಗಿ ಪುಷ್ಪ-2 ಸಿನಿಮಾ ನೋಡಿದ್ದಾರೆ. ಹೈದ್ರಾಬಾದ್ ನ AMB ಥಿಯೇಟರ್ ನಲ್ಲಿ ಅತ್ತೆ ಮನೆಯೊಂದಿಗೆ ಚಿತ್ರ ವೀಕ್ಷಿಸಲು ಬಂದ ರಶ್ಮಿಕಾ ಜೊತೆ ಫೋಟೋಗೆ ಪ್ರೇಕ್ಷಕರು ಮುಗಿಬಿದ್ದಿದ್ದಾರೆ.
ಹೌದು.. ರೌಡಿ ವಿಜಯ್ ದೇವರಕೊಂಡ ಜೊತೆ ಕದ್ದುಮುಚ್ಚಿ ಓಡಾಡ್ತಿದ್ದ ರಶ್ಮಿಕಾ, ಚೆನ್ನೈನಲ್ಲಿ ನಡೆದ ಪುಷ್ಪ ಇವೆಂಟ್ ನಲ್ಲಿ ನನ್ನ ಹುಡ್ಗ ಯಾರು ಅನ್ನೋದು ಎಲ್ರಿಗೂ ಗೊತ್ತೇಯಿದೆ ಎಂದಿದ್ದರು. ಆದ್ರೀಗ ಸಿನಿಮಾ ರಿಲೀಸ್ ಬಳಿಕ ಏಕ್ದಮ್ ಭಾವಿ ಪತಿ ವಿಜಯ್, ಅವರ ಸಹೋದರ ಆನಂದ್ ದೇವರಕೊಂಡ, ಅತ್ತೆ, ಮಾವ ಸೇರಿದಂತೆ ಇಡೀ ಕುಟುಂಬವನ್ನು ಕರೆದುಕೊಂಡು ತನ್ನ ಪುಷ್ಪ-2 ಸಿನಿಮಾ ತೋರಿಸಿದ್ದಾರೆ. ಇದ್ರಿಂದ ಇನ್ಮೇಲೆ ಕದ್ದುಮುಚ್ಚಿ ಓಡಾಡೋದು ಏನೂ ಇರಲ್ಲ ಅನ್ನೋ ಮುನ್ಸೂಚನೆ ನೀಡಿದ್ದಾರೆ.
ಒಟ್ಟಾರೆ ವಿಜಯ್- ರಶ್ಮಿಕಾ ಒಂದಾಗ್ಬೇಕು ಅನ್ನೋ ಅಭಿಮಾನಿಗಳ ಆಶಯ ಈಡೇರುವ ಸಮಯ ಸನಿಹವಾಗ್ತಿದೆ. ಪುಷ್ಪ-2 ಗ್ರ್ಯಾಂಡ್ ಹಿಟ್ ಆಯ್ತು. ಬಾಲಿವುಡ್ ನಲ್ಲಿ ಅನಿಮಲ್ ಬಳಿಕ ಸಲ್ಮಾನ್ ಖಾನ್ ಜೊತೆ ಸಿಕಂದರ್ ಮಾಡ್ತಿರೋ ನ್ಯಾಷನಲ್ ಕ್ರಶ್, ಅದು ಮುಗೀತಾ ಇದ್ದಂತೆ ವಿಜಯ್ ದೇವರಕೊಂಡ ಜೊತೆ ಹಸೆಮಣೆ ಏರುತ್ತಾರೆ ಎನ್ನಲಾಗ್ತಿದೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್