ದೇಶದ್ಯಾಂತ ಯುವಕರ ಬಾಯಲ್ಲಿ ಕೇಳಿ ಬರುತ್ತಿರುವ ಸಿನಿಮಾದ ಹೆಸರು ಪುಷ್ಪ-2 . ಈ ಪ್ಯಾನ್ ಇಂಡಿಯಾ ಮೂವಿ ಡಿಸೆಂಬರ್ 5 ರಂದು ವಿಶ್ವದ್ಯಾಂತ ತೆರೆಗೆ ಅಪ್ಪಳಿಸಲಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾಕ್ಕೆ ಸಿಬಿಎಫ್ನಿಂದ ಯು/ಎ ಪ್ರಮಾಣ ಪತ್ರ ದೊರೆತಿದೆ. ಸಿನಿಮಾ ಬಿಡುಗಡೆ ಆಗಲಿರುವ ಚಿತ್ರಮಂದಿರಗಳ ಪಟ್ಟಿಯೂ ಬಂದಾಗಿದೆ.
ಪುಷ್ಪ-2 ಸಿನಿಮಾಗೆ ಆಂಧ್ರಗಿಂತ ಕರ್ನಾಟಕದಲ್ಲೇ ಟಿಕೆಟ್ ದರ ಜಾಸ್ತಿಯಾಗಿದ್ದು, ಆಂಧ್ರ ಸಿಂಗಲ್ ಸ್ಕ್ರೀನ್ ಗಳಲ್ಲಿ 250 ರೂ., ಆಂಧ್ರ ಮಲ್ಟಿಪ್ಲೆಕ್ಸ್ ಗಳಲ್ಲಿ 530 ರೂಪಾಯಿ ದರ ಇದೆ. ಸರ್ಕಾರದಿಂದ ಸ್ಪೆಷಲ್ ಶೋಗೆ ದರ ಹೆಚ್ಚಿಸಿಕೊಂಡ ಪುಷ್ಪ-2 ಸಿನಿಮಾ ಚಿತ್ರತಂಡವು, ಆಂಧ್ರದಲ್ಲಿ ವಿಶೇಷ ಪ್ರದರ್ಶನಗಳಿಗೆ ಮಾತ್ರ ಟಿಕೆಟ್ ಪ್ರೈಸ್ 1000 ರೂ. ಆಗಿದೆ. ತಮಿಳುನಾಡು ಮಲ್ಟಿಪ್ಲೆಕ್ಸ್ ಗಳಲ್ಲಿ 65ರೂ, 260 ರೂ ಟಿಕೆಟ್ ದರ ಇದೆ. ಸಿಂಗಲ್ ಸ್ಕ್ರೀನ್ ಗಳಲ್ಲಿ 100ರೂ, 150 ರೂ ಟಿಕೆಟ್ ದರ ಇದೆ.
ಆದ್ರೆ ಕರ್ನಾಟಕದಲ್ಲಿ ನಂಬಲಿಕ್ಕೆ ಸಾಧ್ಯವಾಗದಷ್ಟು ಟಿಕೆಟ್ ದರ ಏರಿಕೆಯಾಗಿದ್ದು, ಪುಷ್ಪ-2 ಸಿನಿಮಾಗೆ ಕರ್ನಾಟಕದಲ್ಲಿ ಟಿಕೆಟ್ ದರ 2 ಸಾವಿರ ಹೆಚ್ಚಳವಾಗಿದೆ. ಎಂ.ಜಿ.ರೋಡ್ ಶಂಕರ್ ನಾಗ್ ಥಿಯೇಟರ್ನಲ್ಲಿ2000, 1500, 1000 ರೂ., ಬೆಳಗಿನ 3.30ರ ಶೋಗಳ ಟಿಕೆಟ್ ಪ್ರೈಸ್ 1000 ರೂ ಫಿಕ್ಸ್ ಆಗಿದೆ. 200 ರೂಗಿಂತ ಜಾಸ್ತಿ ಟಿಕೆಟ್ ಪ್ರೈಸ್ ಇಟ್ರೆ ಗಲಾಟೆ ಎಂದಿದ್ದ ಫಿಲ್ಮ್ ಚೇಂಬರ್, ಸಾರಾ ಗೋವಿಂದು ಸೈಲೆಂಟ್ ಆಗಿದ್ಯಾಕೆ..?!, ಇದರ ಬಗ್ಗೆ ಫಿಲ್ಮ್ ಚೆಂಬರ್ ಸೈಲೆಂಟ್ ಆಗಿದ್ದು ಏಕೆ ಎಂಬ ಪ್ರಶ್ನೆ ಮೂಡಿದೆ. ಒಂದ್ಕಡೆ 3.30ರ ಶೋಗಳಿಗೆ ಪರ್ಮಿಷನ್ ಇಲ್ಲ.. ಮತ್ತೊಂದ್ಕಡೆ ದುಬಾರಿ ಬೆಲೆಗೆ ಟಿಕೆಟ್ ಗಳ ಮಾರಾಟ, ಇವರಿಗೆ ಲಂಗು ಇಲ್ಲ.. ಲಗಾಮೂ ಇಲ್ಲವಾಗಿದೆ. ಇದನ್ನ ಪ್ರಶ್ನಿಸೋರು ಯಾರು..? ಇದಕ್ಕೆ ಬ್ರೇಕ್ ಹಾಕೋರು ಯಾರು ಇಲ್ಲದಂತಾಗಿದೆ.