ಪುಷ್ಪ ಪುಷ್ಪ ಪುಷ್ಪ.. ಎಲ್ಲೆಲ್ಲೂ ಪುಷ್ಪಮಯ. ಪುಷ್ಪ ಅಂದ್ರೆ ಫ್ಲವರ್ ಅಂದ್ಕೊಂಡಾ..? ಅಲ್ಲ ಫೈಯರ್. ಇದು ಪುಷ್ಪ ಚಿತ್ರದ ಮೊದಲ ಭಾಗದ ಡೈಲಾಗ್. ಆದ್ರೀಗ ಪುಷ್ಪ ಅಂದ್ರೆ ಫೈಯರ್ ಅಲ್ಲ, ವೈಲ್ಡ್ ಫೈಯರ್. ಮಿಗಿಲಾಗಿ ಪುಷ್ಪ ನ್ಯಾಷನಲ್ ಕೂಡ ಅಲ್ಲ, ಇಂಟರ್ ನ್ಯಾಷನಲ್. ಪುಷ್ಪ ದಿ ರೈಜ್ ಸಿನಿಮಾ ಮೂಲಕ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದ್ದ ನಿರ್ದೇಶಕ ಸುಕುಮಾರ್ ಹಾಗೂ ನಟ ಅಲ್ಲು ಅರ್ಜುನ್ ಇದೀಗ ಪುಷ್ಪ ದಿ ರೂಲ್ ಮೂಲಕ ಆ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಆದ್ರೆ ಪುಷ್ಪ-2ಗೆ ನಿಲ್ಲುತ್ತಾ ಕಳ್ಳ-ಪೊಲೀಸ್ ಆಟ ಅಂದ್ರೆ ನೋ ವೇ.. ಚಾನ್ಸೇ ಇಲ್ಲ. ಹೌದು.. ಪುಷ್ಪ ಚಿತ್ರದ ಮೂರನೇ ಭಾಗ ಕೂಡ ಬರೋದಾಗಿ ಹಿಂಟ್ ನೀಡಿದೆ ಚಿತ್ರತಂಡ. ಪುಷ್ಪ-2 ಕ್ಲೈಮ್ಯಾಕ್ಸ್ ನಲ್ಲಿ ಪುಷ್ಪ ದಿ ರ್ಯಾಂಪೇಜ್ ಅನ್ನೋ ಟೈಟಲ್ ಮೂಲಕ ಮೂರನೇ ಭಾಗದ ಮುನ್ಸೂಚನೆ ನೀಡಿದೆ.
ಅಲ್ಲದೆ ಪುಷ್ಪ-2 ಕ್ಲೈಮ್ಯಾಕ್ಸ್ ನಲ್ಲಿ ಪುಷ್ಪರಾಜ್ ಫ್ಯಾಮಿಲಿಯೆಲ್ಲಾ ಒಂದಾಗಿ ಮದುವೆ ಸಂಭ್ರಮದಲ್ಲಿದ್ದಾಗ ಅನಾಮಿಕನೊಬ್ಬ ಆ ಮದ್ವೆ ಮನೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡ್ತಾನೆ. ಪುಷ್ಪರಾಜ್ ಸತ್ತನಾ..? ಆತನ ಪತ್ನಿ ಶ್ರೀವಲ್ಲಿ ಹೊಟ್ಟೆಯಿಂದ ಹುಟ್ಟಿಬರೋ ಜೂನಿಯರ್ ಪುಷ್ಪರಾಜ್ ಭಾಗ-3ರ ಹೀರೋ ಆಗ್ತಾನಾ..? ಅಥ್ವಾ ಶ್ರೀವಲ್ಲಿಗೆ ಪುತ್ರಿ ಹುಟ್ಟಿದ್ರೆ ಪುಷ್ಪವಲ್ಲಿ ಆಗಿ ಸ್ಮಗ್ಲಿಂಗ್ ಲೋಕವನ್ನ ಆಳುತ್ತಾಳಾ ಅನ್ನೋ ಕೌತುಕತೆ ಸೃಷ್ಠಿಸಿದೆ ಟೀಂ. ಇನ್ನು ಪುಷ್ಪ-2 ಆರಂಭದಲ್ಲೇ ಜಪಾನ್ ನಲ್ಲಿ ಜಾಪನೀಸ್ ಭಾಷೆಯನ್ನ ಮಾತನಾಡೋ ಅಲ್ಲು ಅರ್ಜುನ್ ನ ತೋರಿಸೋ ಮೂಲಕ ಪುಷ್ಪ ರ್ಯಾಂಪೇಜ್ ನೆಕ್ಸ್ಟ್ ಸ್ಟೈಲಿಶ್ ಆಗಿ ಇರಲಿದೆ ಅನ್ನೋದ್ರ ಸೂಚನೆ ಕೂಡ ನೀಡಿದೆ.
ಕಥೆಯಲ್ಲಿ ಹೇಳಿಕೊಳ್ಳೋ ಅಂತಹ ಧಮ್ ಇಲ್ಲವಾದ್ರೂ, ಕಲಾವಿದರ ನಟನೆ, ಮೇಕಿಂಗ್ ಹಾಗೂ ಸುಕ್ಕು ಪ್ರೆಸೆಂಟೇಷನ್ ನಿಂದ ಪುಷ್ಪ-2 ಒಂದು ರೇಂಜ್ ಗೆ ಸೌಂಡ್ ಮಾಡ್ತಿದೆ. ಪುಷ್ಪ-3 ಚಿತ್ರದಲ್ಲಾದಚ್ರೂ ಗಟ್ಟಿ ಕಥೆ ಇರಲಿ ಅನ್ನೋದು ಪ್ರೇಕ್ಷಕರ ಆಶಯವಾಗಿದೆ.
- ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್